ಮಾಂಸದ ಅಂಗಡಿಗಳಿಗೆ ಬೀಗ
Team Udayavani, Mar 16, 2020, 5:33 PM IST
ಮುಳಬಾಗಿಲು: ಸರ್ಕಾರದ ಆದೇಶ ದನ್ವಯ ಭಾನುವಾರ ನಗರಸಭೆ ವ್ಯಾಪ್ತಿಯಲ್ಲಿರುವ ಬೀದಿಬದಿಯ ಆಹಾರ ಮಳಿಗೆಗಳಿಗೆ ಪೌರಾಯುಕ್ತ ಶ್ರೀನಿವಾಸ್‌ಮೂರ್ತಿ ಮತ್ತು ಸಿಬ್ಬಂದಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.
ಕೊರೊನಾ ವೈರಸ್ ಬಟ್ಟೆಗಳ ಮೇಲೆ 9 ಗಂಟೆ ಜೀವಿಸಿದ್ದರೆ, ವಸ್ತುಗಳ ಮೇಲೆ 12 ಗಂಟೆಗಳ ಕಾಲ ಮತ್ತು ಕೈಗಳಲ್ಲಿ 10 ನಿಮಿಷ ಜೀವಿಸುತ್ತದೆ. ಹೀಗಾಗಿ ವಸ್ತುಗಳನ್ನು ಡಿಟರ್ಜಂಟ್‌ನಿಂದ ಶುಚಿ ಗೊಳಿಸಬೇಕು. ಬಟ್ಟೆಗಳನ್ನು ತೊಳೆದು, 2 ಗಂಟೆಗಳ ಕಾಲ ಬಿಸಿಲಿನಲ್ಲಿ ಹಾಕಿದರೆ ವೈರಸ್ ಸಾಯುತ್ತದೆ. ಈ ವೈರಸ್ 26-27 ಡಿಗ್ರಿ ಬಿಸಿ ಉಷ್ಣಾಂಶವಿದ್ದರೆ, ಸಾಯುತ್ತದೆ. ಅದಕ್ಕಾಗಿ ಬಿಸಿ ನೀರನ್ನು ಕುಡಿಯಬೇಕು ಮತ್ತು ದೇಹವನ್ನು ಬಿಸಿಲಿಗೆ ಒಡ್ಡುವುದು ಉತ್ತಮ. ಈ ವೈರಸ್ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ, ನಿಕಟ ಸಂಪರ್ಕದಲ್ಲಿದ್ದಾಗ, ಸೋಂಕಿತ ವ್ಯಕ್ತಿಯನ್ನು ಮುಟ್ಟಿದಾಗ, ಅಲ್ಲದೇ ಆತನ ವಸ್ತುಗಳನ್ನು ಬರೀ ಕೈಗಳಿಂದ ಮುಟ್ಟಿದಾಗ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಮುಖ್ಯವಾಗಿ ಸ್ವಚ್ಛಗೊಳಿಸದೇ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದಲೂ ಹರಡುವುದರಿಂದ ತಂಪು ಪಾನೀಯಗಳಿಂದ ದೂರವಿರ ಬೇಕು ಎಂದು ಹೇಳಿದರು.
ಆಗ ಮಾತ್ರ ತಮ್ಮನ್ನು ತಾವು ರಕ್ಷಿಸಿ ಕೊಂಡು ಕುಟುಂಬ ಮತ್ತು ಸಮಾಜವನ್ನೂ ರಕ್ಷಿಸಲು ಸಾಧ್ಯ ವಾಗುವುದರಿಂದ ಈ ಎಲ್ಲ ಸೂಚನೆ ಗಳನ್ನು ಖಡ್ಡಾಯವಾಗಿ ಪಾಲಿಸಬೇಕು. ಸ್ವಚ್ಛತೆ ಕುರಿತು ಕಟ್ಟು ನಿಟ್ಟಿನ ಷರತ್ತುಗಳನ್ನೊಳಗೊಂಡ ನೋಟಿಸ್ ಜಾರಿ ಮಾಡಿದರಲ್ಲದೇ ಎಲ್ಲ ಕುರಿ, ಕೋಳಿ ಮತ್ತು ಹಂದಿ ಮಾಂಸದ ಅಂಗಡಿಗಳನ್ನು ಮುಚ್ಚಿಸಿದರು.