ಮೀಸಲಾತಿ ಹೆಚ್ಚಳಕ್ಕೆ ಮಾನವ ಸರಪಳಿ
Team Udayavani, May 21, 2022, 3:33 PM IST
ಶ್ರೀನಿವಾಸಪುರ: ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ಸೇವೆಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರೂ ಸರ್ಕಾರ ನಿರ್ಲಕ್ಷ್ಯ ತಾಳಿವೆ ಎಂದು ಆರೋಪಿಸಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ 100ನೇ ದಿನದ ಸತ್ಯಾಗ್ರಹ ಬೆಂಬಲಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೂರಾರು ಮಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಶ್ರೀನಿವಾಸಪುರ ಬಸ್ ನಿಲ್ದಾಣ ಹಾಗೂ ತಾಲೂಕು ಕಚೇರಿಗಳ ಮುಂದೆ ಬೇಡಿಕಗಳಈಡೇರಿಕೆ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿನಡೆಸಿದ ಪ್ರತಿಭಟನೆಯಲ್ಲಿ ಮುಖಂಡರುಮಾತನಾಡಿ, ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿಪರಿಶಿಷ್ಟ ಜಾತಿ 1 ಕೋಟಿ ಮೇಲ್ಪಟ್ಟಿದೆ ಹಾಗೆಯೇಪರಿಶಿಷ್ಟ ಪಂಗಡ 42 ಲಕ್ಷ ಮೇಲ್ಪಟ್ಟಿದೆ ಅಂದರೆಪರಿಶಿಷ್ಟ ಜಾತಿ 17.15 ಹಾಗೂ ಪರಿಶಿಷ್ಟ ಪಂಗಡಶೇ. 7 ಇದ್ದಾರೆ. ಹಾಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ-ಪಂಗಡದವರಿಗೆ ಸರ್ಕಾರಗಳು ಮೀಸಲಾತಿ ಕಲ್ಪಿಸಿದೆ ಉದ್ಯೋಗಗಳ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಪಂಗಡದವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಶ್ರೀ ವಾಲ್ಮೀಕಿ ಗುರುಕುಲ ಪೀಠಾಧ್ಯಕ್ಷರಾದಶ್ರೀ ವಾಲ್ಮೀಕಿ ಪ್ರಸನ್ನಾಂದಸ್ವಾಮೀಜಿ ರವರು2019ರಲ್ಲಿ 400 ಕಿ.ಮೀಗೂ ಹೆಚ್ಚು ಪಾದಯಾತ್ರೆ ಕೈಗೊಂಡಿದ್ದರು ಎಂದರು.
ಪ್ರತಿಭಟನಾಕಾರರು ಶೇ 7.5 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನುತಹಶೀಲ್ದಾರ್ ಶಿರೀನ್ ತಾಜ್‌ಗೆ ಸಲ್ಲಿಸಿದರು.
ಹೊಗಳಗೆರೆ ಆಂಜಿ, ಹರೀಶ್‌ನಾಯಕ್, ಕೊರ್ನೆಹಳ್ಳಿ ಅಂಜಿ, ಆಂಜಪ್ಪ, ಅಪ್ಪಯ್ಯ, ನರಸಿಂಹಪ್ಪ, ವೆಂಕಟ್, ಲಕ್ಷ್ಮೀನಾರಾಯಣ, ಕೆ.ನಾಗರಾಜು,ಮುನೆಪ್ಪ, ವೆಂಕಟೇಶ ನಾಯಕ, ಕೃಷ್ಣಪ್ಪ, ತೆರ್ನಹಳ್ಳಿ ಆಂಜಪ್ಪ, ಮುನಿರಾಜು, ಉಪಪರಪಲ್ಲಿ ತಿಮ್ಮಯ್ಯ, ರಾಮಾಂಜಮ್ಮ , ವರ್ತನಹಳ್ಳಿ ವೆಂಕಟೇಶ್, ಅಗ್ರಾಹರ ವೆಂಕಟೇಶ್, ಚಲ್ದಿಗಾನಹಳ್ಳಿ ಈರಪ್ಪ, ಚಂದ್ರಪ್ಪ ಇತರರಿದ್ದರು.