ಖರ್ಗೆಗೆ ಸ್ಥಾನ ಕಲ್ಪಿಸಲು ರಾಜ್ಯಸಭಾ ಸ್ಥಾನ ತ್ಯಾಗ
Team Udayavani, Feb 12, 2021, 4:43 PM IST
ಮುಳಬಾಗಿಲು: ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ರಾಜ್ಯಸಭೆಯಲ್ಲಿಅವರಿಗೆ ಸ್ಥಾನ ಕಲ್ಪಿಸುವ ಉದ್ದೇಶದಿಂದ ತಮ್ಮ ರಾಜ್ಯಸಭಾ ಸ್ಥಾನವನ್ನು ತ್ಯಾಗ ಮಾಡಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ರಾಜೀವ್‌ಗೌಡ ತಿಳಿಸಿದರು.
ನಗರದ ಕುರುಬರಪೇಟೆ ವಾರ್ಡ್ ಸಂಖ್ಯೆ 12ರಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಿಂದೆ ತಮ್ಮ ತಂದೆ ದಿ.ಎಂ.ವಿ.ವೆಂಕಟಪ್ಪ ಅವರು ಈ ಕ್ಷೇತ್ರದ ಶಾಸಕರು ಹಾಗೂ ವಿಧಾನಸಭಾ ಅಧ್ಯಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಇಂದಿಗೂ ಜನರು ಅದನ್ನು ನೆನಪಿಟ್ಟುಕೊಂಡಿರುವುದು ತಮಗೆ ಸಂತಸ ತಂದಿದೆ ಎಂದರು.
ಇದನ್ನೂ ಓದಿ :ಎಚ್ಚೆತ್ತ ಪಟ್ಟಣ ಪಂಚಾಯಿತಿ: ಒಡೆದ ಪೈಪ್ ಬದಲಾವಣೆ
ರಾಜ್ಯಸಭಾ ಸದಸ್ಯರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ನಮ್ಮ ತಂದೆ ದಿ.ಎಂ.ವಿ.ವೆಂಕಟಪ್ಪ ಮತ್ತು ನಮ್ಮ ದೊಡ್ಡಪ್ಪ ದಿ.ಎಂ.ವಿ.ಕೃಷ್ಣಪ್ಪ ಅವರು ಈ ಕ್ಷೇತ್ರಕ ಅೆR ಪಾರ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಘಟಿಸುವ ಕೆಲಸ ಮಾಡುತ್ತೇವೆ ಎಂದರು. ನಗರಸಭಾ ಸದಸ್ಯ ಮಹಮದ್ ಜಬೀವುಲ್ಲಾ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸುಧೀಂದ್ರಗೌಡ, ಮುಖಂಡರಾದ ಎಂ.ಪಿ.ವಾಜೀದ್, ಯರಾದ ಕಿಸಾನ್ ಬೀಡಿ ಬಾಷ, ಮಜರ್‌ಪಾಷ, ಅಹಮದ್‌ಪಾಷ, ಚಾಂದ್‌ಪಾಷ, ಷಫೀವುಲ್ಲಾ, ರಮೇಶ, ಮಂಜುನಾಥ್, ರಾಜಣ್ಣ, ನೂರುಲ್ಲಾಖಾನ್, ತೆಹರಿಮ್ ಪಾಷ, ಇಬ್ರಾಹಿಂ ಸಾಬ್, ಅನ್ಸರ್, ಶಶಿಕುಮಾರ್, ಪಾಷ, ಗೌಸ್ ಪಾಷ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದ್ದೆಗೆ ನುಗ್ಗಿದ ಉಪ್ಪುನೀರು: ನಾಶವಾದ ಮಟ್ಟುಗುಳ್ಳ ಬೆಳೆ!
ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!
ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ
ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ
ಸಿಮ್ ಹ್ಯಾಕ್ : ಮಣಿಪಾಲದವರ ನಂಬರ್ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್
MUST WATCH
ಹೊಸ ಸೇರ್ಪಡೆ
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ತುಳಸಿ ಮುನಿರಾಜು
ಗದ್ದೆಗೆ ನುಗ್ಗಿದ ಉಪ್ಪುನೀರು: ನಾಶವಾದ ಮಟ್ಟುಗುಳ್ಳ ಬೆಳೆ!
ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ
ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…
ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!