ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಿ

Team Udayavani, Oct 1, 2019, 5:28 PM IST

ಕೋಲಾರ: ತಾಲೂಕಿನ ತೊರದೇವಂಡಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಗ್ರಾಪಂ ಮುಂದೆ ಧರಣಿ ನಡೆಸಿತು.

ಕುಡಿಯುವ ನೀರು, ಚರಂಡಿ, ರಸ್ತೆ, ಇಸ್ವತ್ತು, ಬೀದಿದೀಪ, ಮನೆ, ನಿವೇಶನ ಹಾಗೂ ಸ್ವತ್ಛತೆ ಕೈಗೊಳ್ಳುತ್ತಿಲ್ಲ, ಕೇಂದ್ರ, ರಾಜ್ಯದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪಿಡಿಒ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಆರ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್‌ ಮಾತನಾಡಿ, ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರನ್ನು ಗುರುತಿಸಿ ಮನೆ ಕಟ್ಟಿಕೊಳ್ಳಲು ಜಾಗ ನೀಡಬೇಕು. ಎಸ್ಸಿ, ಎಸ್ಟಿಗೆ ಮೀಸಲಾದ ಹಣವನ್ನು ಪಾರದರ್ಶಕವಾಗಿ ಉಪಯೋಗಿಸಬೇಕು. ಬಹುತೇಕ ಗ್ರಾಮಗಳಲ್ಲಿನ ಚರಂಡಿ ದುರಸ್ತಿ ಮಾಡಿ ವರ್ಷಗಳೇ ಕಳೆದಿವೆ. ಇದರಿಂದಾಗಿ ಸೊಳ್ಳೆಗಳು ಹೆಚ್ಚಾಗಿ  ಮಲೇರಿಯಾ ಮತ್ತಿತರರ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದರು. ಕೆಪಿಆರ್‌ಎಸ್‌ ತಾಲೂಕು ಅಧ್ಯಕ್ಷ ಎನ್‌.ಎನ್‌.ಶ್ರೀರಾಮ್‌ ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ವೈಯಕ್ತಿಕ ಕೆಲಸಗಳು ಮಾಡಿದವರಿಗೆ ಬಿಲ್‌ ನೀಡಲು ತುಂಬಾ ವಿಳಂಬವಾಗುತ್ತಿದೆ ಎಂದರು.

ಕೆಪಿಆರ್‌ಎಸ್‌ ತಾಲೂಕು ಗೌರವಾಧ್ಯಕ್ಷ ಕುರ್ಕಿ ದೇವರಾಜ್‌, ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ಎಸ್‌.ರಮೇಶ್‌, ಗಂಗಮ್ಮ, ರಾಮರೆಡ್ಡಿ, ಆಲಹಳ್ಳಿ ವೆಂಕಟೇಶಪ್ಪ, ಎಚ್‌.ಎಂ.ಆಂಜಿನಪ್ಪ, ದಸ್ತ್ಗಿರಿ, ಸುಶೀಲಮ್ಮ, ಸಿ.ನಾಗರಾಜ್‌ ಭಾಗವಹಿಸಿದ್ದರು


ಈ ವಿಭಾಗದಿಂದ ಇನ್ನಷ್ಟು

  • ಕೋಲಾರ: ತಾಲೂಕಿನ ವಕ್ಕಲೇರಿಹೋಬಳಿ ಬೆಟ್ಟಬೆಣಜೇನಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಶಿಥಿಲವಾಗಿದ್ದು, ನೂತನ...

  • ಕೋಲಾರ: ತೆಲಂಗಾಣದ ಪಶು ವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಹಿನ್ನೆಲೆಯಲ್ಲಿ ರೈತ ಸಂಘದಿಂದ ನಗರದ ಮೆಕ್ಕೆ ವೃತ್ತದಲ್ಲಿ...

  • ಬಂಗಾರಪೇಟೆ: ದೇಶದಲ್ಲಿ ದುಡಿಯುವ ವರ್ಗದ ರಕ್ಷಣೆಗೆ ಪರ್ಯಾಯ ಆರ್ಥಿಕ ನೀತಿಗಳ ಅನುಷ್ಠಾನಕ್ಕಾಗಿ 12 ಅಂಶಗಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಜ.8 ರಂದು ಜೆಸಿಟಿಯುನಿಂದ...

  • ಕೋಲಾರ: ಆಲೂಗಡ್ಡೆ ಬೆಳೆಯುವ ರೈತರಿಗೆ ಸಹಾಯಧನ, ಕಡಿಮೆ ದರದಲ್ಲಿ ಕೀಟ, ರೋಗನಾಶಕ ಔಷಧಿ ಹಾಗೂ ವಿಮೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಸಿಸಿ...

  • ನಾಗರಾಜಯ್ಯ ಮುಳಬಾಗಿಲು: ತಾಲೂಕಿನ ತಾಯಲೂರು ಹೋಬಳಿಯ 66 ಹಳ್ಳಿಗಳಲ್ಲಿ 12 ಸಾವಿರ ಜಾನುವಾರುಗಳಿಗೆ ಕಂದಾಯ ಕಾಯ್ದೆ ನಿಯಮಾನುಸಾರ 3600 ಎಕರೆ ಜಮೀನು ಕಾಯ್ದಿರಿಸಬೇಕಾಗಿದ್ದರೂ...

ಹೊಸ ಸೇರ್ಪಡೆ