ಕಲ್ಲು ಭೂಮಿಯಲ್ಲಿ ಬಂಗಾರದ ಬೆಳ್ಳಿ


Team Udayavani, Jul 29, 2019, 1:34 PM IST

kopala-tdy-3

ಕುಷ್ಟಗಿ: ತಾಲೂಕಿನ ಬೋದೂರು ಸೀಮಾದ ಕಲ್ಲು ಜಮೀನು ಖರೀದಿಸಿರುವ ಬಾಗಲಕೋಟೆ ಮೂಲದ ಯುವ ರೈತರೊಬ್ಬರು ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಶ್ರಮ, ಇಚ್ಛಾಶಕ್ತಿಯಿದ್ದರೆ ಸಾಧನೆ ಕಷ್ಟವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಮಹಾರುದ್ರಯ್ಯ ಪುರಾಣಿಕಮಠ, ಬಳ್ಳಾರಿಯಲ್ಲಿ ಸಿವಿಲ್‌ ಕಾಂಟ್ರಾಕ್ಟರ್‌ ಆಗಿದ್ದು, ಬಾಲ್ಯದಿಂದಲೂ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದವರು. ಈ ಹಿನ್ನೆಲೆಯಲ್ಲಿ ಅವರ ಕೃಷಿ ಪ್ರೀತಿ ಕುಷ್ಟಗಿಯವರೆಗೂ ವಿಸ್ತರಿಸಿದೆ.

ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಅವರ ಜಮೀನು ಮುಳುಗಡೆಯಾಗಿ ಬಂದ ಪರಿಹಾರ ಮೊತ್ತದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಕುಷ್ಟಗಿ ತಾಲೂಕಿನ ಬೋದೂರು ಸೀಮಾದಲ್ಲಿ ಒಟ್ಟು 27 ಎಕರೆ ಭೂಮಿ ಖರೀದಿಸಿದ್ದಾರೆ. ಸದರಿ ಜಮೀನಿನಲ್ಲಿ ಹಿಂದಿನ ರೈತರು ಭಾಗಶಃ ದಾಳಿಂಬೆ ಬೆಳೆ ಬೆಳೆಸಿದ್ದು, ಬಿಟ್ಟರೆ ಬಹುತೇಕ ಕಲ್ಲುಗಳಿಂದ ಕೂಡಿರುವ ಭೂಮಿ ಇದಾಗಿತ್ತು.

ಮಹಾರುದ್ರಯ್ಯ ಪುರಾಣಿಕಮಠ ಅವರಿಗೆ ಭೂಮಿಯಲ್ಲಿ ಕಲ್ಲುಗಳನ್ನು ತೆಗಿಸಿ ಕೃಷಿ ಜಮೀನಾಗಿ ಪರಿವರ್ತಿಸಲು ಎರಡೂವರೆ ವರ್ಷವೇ ಹಿಡಿಯಿತು. ಅಂತರ ಬೆಳೆಯಾಗಿ ಬೆಳೆದಿರುವ ಪಪ್ಪಾಯಿ ಹಾಗೂ ದಾಳಿಂಬೆ ಬೆಳೆದಿದ್ದು, ಪಪ್ಪಾಯಿ ಅನ್ನು ತೋಟದಲ್ಲಿ ಪ್ಯಾಂಕಿಂಗ್‌ ಮಾಡಿ, ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಸದ್ಯ ಕೆ.ಜಿ.ಗೆ 21 ರೂ, ಉತ್ತಮ ದರವಿದ್ದು, ಈಗಾಗಲೇ ನಾಲ್ಕು ಬಾರಿ ಕಟಾವು ಆಗಿದ್ದು, ಸದ್ಯ 4ಲಕ್ಷ ರೂ. ಆದಾಯ ಬಂದಿದೆ. ಇನ್ನು ನಾಲ್ಕು ಕಟಾವಿನಲ್ಲಿ ಇದೇ ದರ ಇದ್ದರೆ ಇನ್ನು 4 ಲಕ್ಷ ರೂ. ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಮಹಾರುದ್ರಯ್ಯ.

15 ಕೊಳವೆಬಾವಿ: ಈ ಜಮೀನಿಲ್ಲಿ ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಆರಂಭಿಸುವ ಹಿನ್ನೆಲೆಯಲ್ಲಿ 15 ಕೊಳವೆಬಾವಿ ಕೊರೆಯಿಸಿದಾಗ್ಯೂ ಎಲ್ಲವೂ ವಿಫಲವಾಗಿದ್ದವು. ಮಳೆ ನೀರು ಹಿಡಿದಿಡುವ ವಿಧಾನದಿಂದ ಅಂತರ್ಜಲ ಮೂಲ ಹೆಚ್ಚಳ ಮಾಡಬಹುದು ಎನ್ನುವುದು ಅರಿತ ಅವರು, ಮಳೆ ನೀರು ಅಲ್ಲಲ್ಲಿ ತಡೆಯುವ ಉದ್ದೇಶದಿಂದ ವೈಜ್ಞಾನಿಕವಾಗಿ ಒಡ್ಡು ನಿರ್ಮಿಸಿದರು. ಈ ಪ್ರಯೋಗದಿಂದ ಇದೀಗ ಬಿದ್ದಂತಹ ಮಳೆ ನೀರು ಜಮೀನಲ್ಲಿ ಇಂಗುತ್ತಿದೆ. ಮಳೆ ನೀರು ಹಿಡಿದಿಡುವ ವಿಧಾನದಿಂದ ವಿಫಲವಾಗಿದ್ದ ಕೊಳವೆಬಾವಿಗಳಲ್ಲಿ ಸದ್ಯ ಅರ್ಧ ಇಂಚು, ಒಂದಿಂಚು ನೀರಿನ ಸೆಲೆ ಜಿನುಗುತ್ತಿದೆ. ಕೃಷಿಯ ಬಗ್ಗೆ ಭರವಸೆ ಮೂಡಿಸಿದ್ದರಿಂದ 2ಲಕ್ಷ ಲೀಟರ್‌ ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದು, ಇದಕ್ಕೆ ಐದಾರು ಕೊಳವೆಬಾವಿಗಳಲ್ಲಿನ ಲಭ್ಯವಾದಷ್ಟೇ ನೀರು ಸಂಗ್ರಹಿಸಿ ಜಮೀನಿಗೆ ಹನಿ ನೀರಾವರಿ ಆಧಾರಿತ ಕೃಷಿಗೆ ಮುಂದಾಗಿದ್ದಾರೆ.

ಕಠಿಣ ಪರಿಶ್ರಮ ಇಲ್ಲದೇ ಕೃಷಿ ಒಲಿಯುವುದಿಲ್ಲ. ಇದಕ್ಕೆ ಮಾಡಿರುವ ಖರ್ಚು ಲೆಕ್ಕ ಇಟ್ಟಿಲ್ಲ. ಬಾಗಲಕೋಟೆ ಮುಳುಗಡೆ ಜಮೀನಿನ ಪರಿಹಾರ ಮೊತ್ತ, ತಂದೆ-ತಾಯಿಪೆನ್ಶನ್ ಮೊತ್ತ ಇದಕ್ಕೆ ಹಾಕಲಾಗಿದೆ. ಕುಷ್ಟಗಿ ತಾಲೂಕಿನ ಜಮೀನು ದಾಳಿಂಬೆಗೆ ಸೂಕ್ತವಾಗಿದೆ. ಪೂರ್ಣ ಪ್ರಮಾಣದಲ್ಲಿ ದಾಳಿಂಬೆ ಬೆಳೆಯಲು ಮುಂದಾಗುತ್ತೇನೆ..ಮಹಾರುದ್ರಯ್ಯ ಪುರಾಣಿಕಮಠ, ಯುವ ರೈತ

 

.ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.