ರಾಜ್ಯಕ್ಕೆ ಮಾದರಿಯಾದ ಗಂಗಾವತಿ ಆನ್ ಲೈನ್ ಕ್ಲಾಸ್
Team Udayavani, May 31, 2020, 9:28 AM IST
ಗಂಗಾವತಿ: ಕೊವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಕಾರ್ಯ ಸ್ಥಗಿತಗೊಂಡಿದ್ದು ಬಹುತೇಕ ಆನ್ ಲೈನ್ ಮೂಲಕ ಪಾಠಪ್ರವಚನಗಳು ನಡೆಯುತ್ತಿವೆ. ನಗರದ ಕೊಲ್ಲಿ ನಾಗೇಶ್ವರ ರಾವ್ ಸರಕಾರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಈ ಆನ್ ಲೈನ್ ತರಗತಿ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಉನ್ನತ ಶಿಕ್ಷಣ ಸಚಿವ ಮತ್ತು ಮುಖ್ಯಮಂತ್ರಿಗಳ ಗಮನ ಸೆಳಿದದೆ. ಜತೆಗೆ ರಾಜ್ಯದಲ್ಲಿ ಗಂಗಾವತಿ ಮಾದರಿ ಅನುಸರಿಸಲು ಉನ್ನತ ಶಿಕ್ಷಣ ಇಲಾಖೆಗೆ ಸರಕಾರ ಆದೇಶ ನೀಡಿದೆ.
ಆನ್ ಲೈನ್ ಪಾಠ ಎಂದರೆ ಪ್ರಾಧ್ಯಾಪಕರು ಪಾಠ ಮಾಡಿದ್ದನ್ನು ವಿದ್ಯಾರ್ಥಿಗಳು ಕೇಳಿ ನೋಟ್ಸ್ ಮಾಡಿಕೊಳ್ಳುವುದು ಎಂದು ತಿಳಿಯಲಾಗಿತ್ತು. ನಗರದ ಎಸ್ ಕೆ ಎನ್ ಜಿ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೋ.ಕರಿಗೂಳಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಪಾಠ ಕೇಳಿ ನಂತರ ಸ್ವತಃ ವಿದ್ಯಾರ್ಥಿಗಳು ನೋಟ್ಸ್ ತಯಾರಿಸಿಕೊಂಡು ಪಠ್ಯ ವಿಷಯದ ಕುರಿತು ಸೆಮಿನಾರ್ ರೂಪದಲ್ಲಿ ವಿಡಿಯೋ ತಯಾರಿಸಿ ಗುರುಗಳಿಗೆ ಪಾಠ ಒಪ್ಪಿಸಬೇಕು. ಈ ಮೂಲಕ ವಿಷಯದ ಕುರಿತು ಮನನ ಮಾಡಿಕೊಂಡಿರುವುದನ್ನು ಸಾಬೀತುಪಡಿಸುತ್ತಾರೆ.
ವಲಯವಾರು ಇಂತಹ ನಾಲ್ಕೈದು ವಿಡಿಯೋಗಳ ಪೈಕಿ ಗಂಗಾವತಿ ಕಾಲೇಜಿನ ವಿದ್ಯಾರ್ಥಿಗಳ ವಿಡಿಯೋವನ್ನು ಪ್ರಥಮವಾಗಿ ಉನ್ನತ ಶಿಕ್ಷಣ ಸಚಿವ ಮತ್ತು ಸಿಎಂ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಮೆಚ್ಚುಗೆ ಪ್ರಮಾಣ ಪತ್ರ ನೀಡಲಾಗಿದೆ.
ಅಭಿನಂದನೆಗಳು: ನಮ್ಮೂರಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಸಿದ್ದಪಡಿಸಿದ ಆನ್ ಲೈನ್ ಪಾಠದ ಮಾದರಿ ಸರಕಾರದ ಮೆಚ್ಚುಗೆ ಪಡೆದಿರುವುದು ಸಂತೋಷದ ಸಂಗತಿ. ಕಾರ್ಯಸಾಧನೆ ಮಾಡಿದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಕಾಲೇಜು ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್