“ಕನಕ’ ಪಟ್ಟಣ ಅಧಿಪತ್ಯಕ್ಕೆ ಪೈಪೋಟಿ


Team Udayavani, Mar 18, 2020, 3:32 PM IST

“ಕನಕ’ ಪಟ್ಟಣ ಅಧಿಪತ್ಯಕ್ಕೆ  ಪೈಪೋಟಿ

ಕನಕಗಿರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಅಧಿಕಾರಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿಯೇ ನಡೆದಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ 2ಎ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾತಿ ಪ್ರಕಟವಾಗಿದೆ. ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ 17 ಜನ ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್‌ ಪಕ್ಷದಿಂದ 9 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 3 ಜನ ಪಕ್ಷೇತರ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದವರು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್‌ ಪಕ್ಷದ ಸದಸ್ಯ ಸಂಖ್ಯೆ 12 ಏರಿಕೆಯಾಗಿದೆ. ಬಿಜೆಪಿಯಿಂದ 5 ಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಆಕಾಂಕ್ಷಿಗಳಿದ್ದು, ಇದರಿಂದ ಅಸಮಾಧಾನ ಉಂಟಾಗುವ ಸಾಧ್ಯತೆಯನ್ನೂ ತಳಿ ಹಾಕುವಂತಿಲ್ಲ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು: ಕಾಂಗ್ರೆಸ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಲು ಹುಸೇನಸಾಬ್‌ ಸುಳೇಕಲ್‌, ಹುಲಗಪ್ಪ ವಾಲೇಕಾರ, ಭಾಗ್ಯಲಕ್ಷ್ಮೀ ಕನಕದಾಸರ ಹೆಸರು ಕೇಳಿ ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ಇದ್ದು, ಬಿಜೆಪಿಯಲ್ಲಿ ಈ ವರ್ಗಕ್ಕೆ ಸೇರಿದ ಸದಸ್ಯ ರವಿ ಸಜ್ಜನ್‌ ಅವರು ಒಬ್ಬರೇ ಇದ್ದಾರೆ. ಇದರಿಂದ ಬಿಜೆಪಿಯಲ್ಲಿ ಅವರು ಹೆಸರೂ ಕೇಳಿ ಬರುತ್ತಿದೆ.

ಉಪಾಧ್ಯಕ್ಷ ಸ್ಥಾನ ಖಚಿತ: ಕನಕಗಿರಿ ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಿರುವ ಪರಿಶಿಷ್ಟ ಜಾತಿ (ಮಹಿಳೆ) ಬಿಜೆಪಿ ಪಕ್ಷದಲ್ಲಿ ಮಾತ್ರ ಇದ್ದು, ಇದರಿಂದ ಬಿಜೆಪಿಯ ಸರಸ್ವತಿ ಸಣ್ಣ ಕನಕಪ್ಪ ಬಹುತೇಕ ಉಪಾಧ್ಯಕ್ಷ ಸ್ಥಾನ ಖಚಿತವಾಗಿದೆ. ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಅವಧಿಯಲ್ಲಿಕನಕಗಿರಿಯು ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದೆರ್ಜೆಗೆ ಏರಿತ್ತು. ಆಗಿನ ಶಾಸಕರಾಗಿದ್ದ ಶಿವರಾಜ ತಂಗಡಗಿ ಅವರು ಬೆಂಬಲದಿಂದ 9 ಜನ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದರು. ಇನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದ ಮೂವರು ಸದಸ್ಯರು ಕೂಡಾ ಕಾಂಗ್ರೆಸ್‌ ಗೆ ಸೇರ್ಪಡೆಯಾಗಿ ಬೆಂಬಲ ನೀಡಿದ್ದರು. ಪ.ಪಂ ಮೊದಲ ಅವಧಿಗೆ ಅಧ್ಯಕ್ಷರಾಗಿ ರವಿ ಭಜಂತ್ರಿ ಆಯ್ಕೆಯಾಗಿದ್ದರು.

ಆದರೆ ರವಿ ಭಜಂತ್ರಿ ಅವರಿಗೆ ಸ್ವಪಕ್ಷದವರೇ ಆಡಳಿತ ನಡೆಸಲು ಬಿಡದೇ ಇರುವ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ  ಬಿಜೆಪಿಯಿಂದ ಶಾಸಕ ಬಸವರಾಜ ದಢೇಸೂಗೂರು ಆಯ್ಕೆಯಾಗಿದ್ದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಪಂ ಬಿಜೆಪಿ ವಶವಾಗಿತು. ಈಗ ಮೀಸಲಾತಿ ಪ್ರಕಟವಾಗಿದ್ದು, ಈಗಾಗಲೇ ಕಾಂಗ್ರೆಸ್‌ದಲ್ಲಿ 12 ಜನ ಸದಸ್ಯರು ಇದ್ದು, ಸಷ್ಟ ಬಹುಮತವಿದೆ. ಮಾಜಿ ಶಾಸಕ ಶಿವರಾಜ ತಂಗಡಗಿ ಕೈಗೊಳ್ಳುವ ನಿರ್ಧಾರದ ಮೇಲೆ ಅಧ್ಯಕ್ಷ ಸ್ಥಾನ ನಿಂತಿದೆ. ಒಂದು ವೇಳೆ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾದರೂ ಕೂಡಾ ಅಚ್ಚರಿ ಪಡುವಂತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಲಿದ್ದು, ಪಪಂ ಯಾರ ವಶವಾಗಲಿದೆ ಎನ್ನುವುದು ಕಾದು ನೋಡಬೇಕಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಭಿನ್ನ  ಅಭಿಪ್ರಾಯಗಳಿಲ್ಲ. ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಶಿಪಾರಸ್ಸು ಮಾಡಿದವರನ್ನು ಪಪಂ ಅಧ್ಯಕ್ಷರನ್ನಾಗಿ ಮಾಡಲಾಗುವುದು. ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ವಶವಾಗುವುದು ಖಚಿತ. -ರೆಡ್ಡಿ ಶ್ರೀನಿವಾಸ, ಅಧ್ಯಕ್ಷರು, ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌

 

-ಶರಣಪ್ಪ ಗೋಡಿನಾಳ

ಟಾಪ್ ನ್ಯೂಸ್

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

Mecca Heat Wave: ವಿಪರೀತ ಬಿಸಿಲ ತಾಪ-500ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಮೃತ್ಯು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

Judge

ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ

7-sagara

Sagara: ಸಿಗಂದೂರು ಲಾಂಚ್; ವಾಹನಗಳ ಸಾಗಾಣಿಕೆ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Koppal: ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

8-kushtagi

Kushtagi: ಅರೆಸ್ಟ್ ಮಾಡುವುದಾದರೆ 3 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಅರೆಸ್ಟ್ ಮಾಡಿ

8-

Tawargera: ವಿದ್ಯುತ್ ತಂತಿ ತಗುಲಿ ರೈತ ಮತ್ತು ಎತ್ತು ಸಾವು

1-asdsadsad

Bakrid ಶಾಂತಿಸಭೆ: ಗಂಗಾವತಿಯಲ್ಲಿ ಮುಸ್ಲಿಂ ಮುಖಂಡರ ಪರಸ್ಪರ ವಾಗ್ವಾದ

9-dotihala-1

Dotihala: ಬಸವಣ್ಣ ಮೂರ್ತಿಯ ಮುಂದೇ ಶಿವ; ವಿಶಿಷ್ಟ ದಿಡಗಿನ ಬಸವೇಶ್ವರ ದೇವಸ್ಥಾನ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

BRural

Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Chilli chicken Movie: ಜೂ. 21ಕ್ಕೆ ಚಿಲ್ಲಿ ಚಿಕನ್‌

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Sandalwood: ಶಿವಣ್ಣ ಭೈರತಿ ಮುಂದಕ್ಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.