Koppala: ಮಹಾದಾಸೋಹದಲ್ಲಿ ಲಕ್ಷ ಲಕ್ಷ ಮಿರ್ಚಿ ಸೇವೆ

Team Udayavani, Jan 28, 2024, 5:42 PM IST

8-

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಮಹಾ ದಾಸೋಹದಲ್ಲಿ ಮಿರ್ಚಿ ಸೇವಾ ಸಮಿತಿಯಿಂದ ಜ.28ರ ಭಾನುವಾರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸದ್ಭಕ್ತರಿಗಾಗಿ ಬಿಸಿ-ಬಿಸಿ ರುಚಿಯ ಮಿರ್ಚಿ ಸೇವೆಯನ್ನು ಉಣಬಡಿಸುವ ಮೂಲಕ ಸೇವಾ ಸಮಿತಿಯು ಭಕ್ತ ಗಣ ಗಮನ ಸೆಳೆಯಿತು.

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷವೂ ಮಹಾ ದಾಸೋಹದ ಸೇವೆಯಲ್ಲಿ ಲಕ್ಷ ಲಕ್ಷ  ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವುದು ಜಾತ್ರೆಯ ವಿಶೇಷವಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಮಹಾ ದಾಸೋಹ ವ್ಯವಸ್ಥೆಯನ್ನು ಏರ್ಪಪಡಿಸಲಾಗಿದ್ದು ಮಹಾ ದಾಸೋಹಕ್ಕೆ ಈ ಭಾಗದ ಜನರು ತನು ಮನ ಧನ ಅರ್ಪಿಸುವ ಕಾರ್ಯ ನಡೆದು ಬಂದಿದೆ.

ಈ ದಾಸೋಹದಲ್ಲಿ ತಮ್ಮದು ಒಂದು ಅಳಿಲು ಸೇವೆ ಇರಲಿ ಎಂದು ಮಿರ್ಚಿ ಸೇವಾ ಸಮಿತಿಯು ಕಳೆದ ಕೆಲವು ವರ್ಷಗಳಿಂದ ಲಕ್ಷ ಲಕ್ಷ ಮಿರ್ಚಿಗಳನ್ನು ಸಿದ್ಧಪಡಿಸಿ ಭಕ್ತ ಜನ ಸಾಗರಕ್ಕೆ ಉಣಬಡಿಸುವ ಕಾಯಕದ ಸೇವೆಯಲ್ಲಿ ತೊಡಗಿರುವುದು ಈ ಜಾತ್ರಿಯ ವಿಶೇಷವಾಗಿದೆ. ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಿರ್ಚಿ ಸೇವಾ ಸಮಿತಿಯು ತನು ಮನ ಧನದಿಂದ ಶ್ರದ್ಧಾ ಭಕ್ತಿಯಿಂದ ಸೇವೆ ಮಾಡುತ್ತಿದೆ.

ಮಹಾ ರಥೋತ್ಸವ ಸಾಗಿದ ಮರು ದಿನಂದು ಮಿರ್ಚಿ ಸೇವೆ ಮಾಡುತ್ತಾ ಬಂದಿದೆ.  ಈ ಬಾರಿ ಜಾತ್ರಾ ಮಹೋತ್ಸವದ ದಾಸೋಹ ಭವನದಲ್ಲಿ ಸುಮಾರು 25 ಕ್ವಿಂಟಲ್ ಹಿಟ್ಟು, 22 ಕ್ವಿಂಟಲ್ ಹಸಿಮೆಣಸಿನಕಾಯಿ ಹಾಗೂ 400 ಬಾಣಸಿಗರು ಸೇರಿದಂತೆ 12 ಬ್ಯಾರಲ್ ಎಳ್ಳೆಣ್ಣಿ,  60 ಕೆಜಿ ಉಪ್ಪು ಹಾಗೂ 60 ಕೆಜಿ ಸೋಡಾಪುಡಿ ಒಳಗೊಂಡಂತೆ ಸುಮಾರು 4-5 ಲಕ್ಷ ಮಿರ್ಚಿಗಳನ್ನು ಸಿದ್ದಪಡಿಸಿ ಮಹಾ ದಾಸೋಹಕ್ಕೆ ಆಗಮಿಸುವ ಸದ್ಭಕ್ತರಿಗಾಗಿ ಉಣಬಡಿಸುವ ಕಾಯಕವೂ ಭಾನುವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಈ ಮಹಾ ದಾಸೋಹದಲ್ಲಿ ನಡೆದ ಮಿರ್ಚಿ ಸೇವಾ ಕಾರ್ಯ ವೀಕ್ಷಣೆಗೆ  ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ ಪಾಲ್ಗೊಂಡು ಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಡುವ ಮೂಲಕ ಮಿರ್ಚಿ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಇದಲ್ಲದೆ ಈ ಮಹಾದಾಸೋಹ ಸೇವೆ ನೋಡಲು ಆಗಮಿಸಿದ್ದ ಕೊಪ್ಪಳದ ಡಿಸಿ ನಲಿನ್ ಅತುಲ್ ಅವರು ಹಾಗೂ ಭಾರತದ ಪ್ಯಾರಿಸ್ ಮಾಜಿ ರಾಯಭಾರಿಯಾದ ಚಿರಂಜೀವಿ ಸಿಂಗ್ ಅವರು ಸಹ ಮಿರ್ಚಿ ಸೇವಾ ಕಾರ್ಯದ ಕುರಿತು ಪರಿಶೀಲಿಸಿ ಸ್ವತಃ ಮಹಾ ದಾಸೋಹ  ಭವನಕ್ಕೆ ತೆರಳಿ ಸೇವಾ ನಿರತರಾದ ಕಾರ್ಯಕರ್ತರ ಉತ್ಸಾಹ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲದೇ ಅವರು ಕೂಡಾ ಕಾದ ಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಡುವ ಮೂಲಕ ಕಾರ್ಯಕರ್ತರ ಸೇವಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.

ಒಟ್ಟಿನಲ್ಲಿ ಕೊಪ್ಪಳದ ಶ್ರೀ ಗಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಸದ್ಭಕ್ತ ವೃಂದಕ್ಕೆ ಇಲ್ಲಿನ ಭಕ್ತಗಣವು ತನು ಮನ ಧನ ಅರ್ಪಿಸುವ ಮೂಲಕ ತಮ್ಮ ಕಾಯಕ ಸೇವೆ ಅರ್ಪಿಸುತ್ತಿದೆ. ಭಾನುವಾರದ ಮಧ್ಯಾಹ್ನದ ವೇಳೆಗೆ ಸುಮಾರು 2.50  ಲಕ್ಷ ಮಿರ್ಚಿಗಳು ಭಕ್ತರಿಗಾಗಿ ದಾಸೋಹದಲ್ಲಿ ಸಿದ್ದಪಡಿಸಿ ಅರ್ಪಣೆ ಮಾಡಲಾಯಿತು. ಈ ಮಿರ್ಚಿ ಸೇವಾ ಕಾರ್ಯವು ಭಕ್ತಗಣದ ಮೆಚ್ಚುಗೆಗೆ ಪಾತ್ರವಾಯಿತು.

ಟಾಪ್ ನ್ಯೂಸ್

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.