ಸರಕಾರಿ ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ ಅಧಿಕ ದರಕ್ಕೆ ಮದ್ಯ ಮಾರಾಟ!
Team Udayavani, May 5, 2020, 3:09 PM IST
ಗಂಗಾವತಿ: ನಗರದ ಎಂಎಸ್ಐಎಲ್ ಸರಕಾರಿ ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮದ್ಯ ಖರೀದಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
120 ಎಂಎಲ್ ವಿಸ್ಕಿ ಮದ್ಯಕ್ಕೆ ಎಂಆರ್ ಪಿ ದರ 74 ರೂ.ಇದ್ದರೆ ಸರಕಾರಿ ಮದ್ಯದಂಗಡಿಯಲ್ಲಿ 120 ರೂ.ದರಕ್ಕೆ ಮಾರಾಟವಾಗುತ್ತಿದೆ. ಇದನ್ನು ಪ್ರಶ್ನಿಸುವ ಕೆಲ ಗ್ರಾಹಕರನ್ನು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಗದ್ದಲ ಮಾಡದಂತೆ ವಾಪಸ್ ಕಳಿಸುತ್ತಿದ್ದಾರೆ.
ಇನ್ನೂ ಖಾಸಗಿ ಬಾರ್ ಗಳಲ್ಲಿ ಸ್ಟಾಕ್ ಖಾಲಿ ಆಗಿದ್ದರೂ ಜನರು ಮಾತ್ರ ಬಿಸಿನಲ್ಲಿ ಕ್ಯೂ ನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
ಹೆಚ್ಚಿನ ದರ ಪಡೆಯಬಹುದು: ಸರಕಾರ ಮದ್ಯದ ದರ ಹೆಚ್ಚು ಮಾಡಿದ್ದು ಇನ್ನೂ ಆದೇಶ ಹೊರಬಿದ್ದಿಲ್ಲ ಸರಕಾರಿ ಮದ್ಯದಂಗಡಿಯಲ್ಲಿ ಮದ್ಯಕ್ಕೆ ಹೆಚ್ಚಿನ ದರ ಪಡೆದರೆ ತಪ್ಪಿಲ್ಲ ಖಾಸಗಿ ಬಾರ್ ಗಳಲ್ಲಿ ಹೆಚ್ಚಿನ ದರ ಪಡೆದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಅಬಕಾರಿ ಇನ್ಸಪೆಕ್ಟರ್ ಅಜಯಕುಮಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್