Udayavni Special

ಎಂಡಿಸಿಸಿ ಬ್ಯಾಂಕ್‌ ಗದ್ದುಗೆಗಾಗಿ ಗುದ್ದಾಟ

ಅಧಿಕಾರಕ್ಕಾಗಿ ದಳ-ಕಮಲ ತಂತ್ರ, ಅಧಿಕಾರ ಉಳಿಸಿಕೊಳ್ಳಲು "ಕೈ'ಕುತಂತ್ರ

Team Udayavani, Nov 16, 2020, 4:38 PM IST

ಎಂಡಿಸಿಸಿ ಬ್ಯಾಂಕ್‌ ಗದ್ದುಗೆಗಾಗಿ ಗುದ್ದಾಟ

ಮಂಡ್ಯ: ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಗದ್ದುಗೆ ಹಿಡಿಯಲು ಪೈಪೋಟಿ ಎದುರಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಅಧಿಕಾರ ಹಿಡಿಯಲು ತಂತ್ರ ಹೆಣೆದಿದೆ. ಇದರಿಂದ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್‌ಗೆ ಅಧಿಕಾರ ಉಳಿಸಿಕೊಳ್ಳುವ ಆತಂಕ ಎದುರಾಗಿದೆ. ನ.17ರಂದು ಚುನಾವಣೆ ನಡೆಯಲಿದೆ.

ಈಗಾಗಲೇ 12 ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌8 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಆದರೆ, ಪ್ರಸ್ತುತ ಬದಲಾದ ರಾಜಕೀಯದಿಂದ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ರಣತಂತ್ರ ಹೆಣೆಯುತ್ತಿವೆ.

ಒಗ್ಗಟ್ಟು ಪ್ರದರ್ಶನ: ಡಿಸಿಸಿ ಬ್ಯಾಂಕ್‌ನ 15 ನಿರ್ದೇಶಕ ಸ್ಥಾನಗಳ ಬಲಾಬಲವಿದ್ದು, ಕಾಂಗ್ರೆಸ್‌8, ಜೆಡಿಎಸ್‌ 4 ಹಾಗೂ 3 ಸರ್ಕಾರದ ನಾಮ ನಿರ್ದೇಶಕರಿದ್ದಾರೆ. ಆಡಳಿತ ಮಂಡಳಿ ರಚಿಸಲು 8 ಬಹುಮತ ಅಗತ್ಯವಿದೆ. ಈಗಾಗಲೇ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದ್ದು, ಅಧಿಕಾರ ಹಿಡಿಯಲು ಒಗ್ಗಟ್ಟು ‌ ಪ್ರದರ್ಶನಕ್ಕೆ ಮುಂದಾಗಿದೆ.

ಈಹಿ ನ್ನೆಲೆಯಲ್ಲಿ ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದರು. ದಳ-ಕಮಲ ಮೈತ್ರಿ:ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಈಗಾಗಲೇ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ ಎನ್ನಲಾಗುತ್ತಿದೆ. ಜೆಡಿಎಸ್‌ನ 4, ಸರ್ಕಾರದ ನಾಮನಿರ್ದೇಶಕ 3 ಸೇರಿದಂತೆ ಒಟ್ಟು 7 ಸದಸ್ಯರ ಬಲ ಸಿಗಲಿದೆ. ಕಾಂಗ್ರೆಸ್‌ನಿಂದ ಅತೃಪ್ತರನ್ನು ಸೆಳೆದು ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿವೆ.

ದಳಪತಿ ಭೇಟಿ ಮಾಡಿದ ಅಶ್ವಥ್‌: ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಅಶ್ವಥ್‌ ಈಗಾಗಲೇ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದ್ದಾರೆ. ಇದರಿಂದ ಅಶ್ವಥ್ ರನ್ನು ಸೆಳೆದುಕೊಂಡು  ಅಧ್ಯಕ್ಷನ್ನಾಗಿ ಮಾಡುವ ‌ ಮೂಲಕ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಜೆಡಿಎಸ್‌ ಮುಂದಾಗಿದೆ. ಇತ್ತ ಅಶ್ವಥ್ ಕಾಂಗ್ರೆಸ್‌ನಿಂದಾಗಲಿ ಅಥವಾ ಜೆಡಿಎಸ್‌ ಬೆಂಬಲದಿಂದಾಗಲಿ ಅಧ್ಯಕ್ಷನಾಗಲೇಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಪಿಎಂಎನ್‌ ನಿರ್ದೇಶಕ ಸ್ಥಾನ ತಪ್ಪಿಸಲು ಒಂದಾದ ದಳಪತಿಗಳು: ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿರುವ ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರನ್ನು ಅಪೆಕ್ಸ್‌ ಬ್ಯಾಂಕ್‌ನಿರ್ದೇಶಕರಾಗಿ ಆಯ್ಕೆಯಾಗುವುದನ್ನು ತಪ್ಪಿಸಲು ದಳಪತಿಗಳು ಒಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಶಾಸಕರಾದ ಸಿ.ಎಸ್‌.ಪುಟ್ಟರಾಜು ಹಾಗೂ ಕೆ. ಅನ್ನದಾನಿ ಅಖಾಡಕ್ಕೆ ಇಳಿದಿದ್ದು, ಜೆಡಿಎಸ್‌ ನಿರ್ದೇಶಕರು ಸೇರಿದಂತೆಕಾಂಗ್ರೆಸ್‌ನ ಅಶ್ವಥ್‌ ಅವರು ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್‌ನಿಂದ ಎಚ್‌.ಸಿ.ಕಾಳೇಗೌಡ ರೇಸ್‌ನಲ್ಲಿದ್ದಾರೆ.

ಜಿಲ್ಲಾ ಉಪ ನಿಬಂಧಕರ ವರ್ಗಾವಣೆ : ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಸಿಎಂ ಸೂಚನೆಯಂತೆ ಜಿಲ್ಲಾ ಉಪನಿಬಂಧಕ ವಿಕ್ರಮರಾಜ್‌ಅರಸ್‌ ಅವರನ್ನು ದಿಢೀರ್‌ ವರ್ಗಾವಣೆ ಮಾಡಿದೆ. ನಾಮನಿರ್ದೇಶಕರಾಗಿರುವ ಜಿಲ್ಲಾ ಉಪನಿಬಂಧಕರನ್ನು ವರ್ಗಾವಣೆ ಮಾಡಿರುವುದುಕಾಂಗ್ರೆಸ್‌ ವಲಯದಲ್ಲಿ ತಳಮಳ ಶುರುವಾಗಿದೆ. ಆ ಜಾಗಕ್ಕೆ ಸಹಾಯಕ ಉಪನಿಬಂಧಕ ಶಂಕರ್‌ ಅವರಿಗೆ ಪ್ರಭಾರ ವಹಿಸಲಾಗಿದೆ. ಜಿಲ್ಲಾ ರಿಜಿಸ್ಟ್ರಾರ್‌, ಅಪೆಕ್ಸ್‌ಬ್ಯಾಂಕ್‌ ಅಧಿಕಾರಿ, ಬಿಜೆಪಿ ಸರ್ಕಾರದ ನಾಮನಿ ರ್ದೇಶಕರೊಬ್ಬರು ಮತ ಹಕ್ಕು ಹೊಂದಿದ್ದಾರೆ.

ಅಶೋಕ್‌-ಅಶ್ವಥ್‌ ಪ್ರಬಲ ಆಕಾಂಕ್ಷಿಗಳು :  ಕಾಂಗ್ರೆಸ್‌ನಿಂದ ಮಂಡ್ಯ ತಾಲೂಕುಪ್ರಾ ಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೆದ್ದಿರುವ ಅಶ್ವಥ್‌ ಹಾಗೂ ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳುಮತ್ತು ನಗರ ಸಹಕಾರಬ್ಯಾಂಕ್‌ಹಾಗೂವ್ಯವಸಾಯೇತರಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಹಾಲಹಳ್ಳಿ ಎಚ್‌.ಅಶೋಕ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.ಆದರೆ,ಅಶ್ವಥ್‌ ಅವರು ಚುನಾವಣೆಯಲ್ಲಿ ಕಾಂಗ್ರೆಸ್‌ಪಕ್ಷದ ನಾಯಕರು ನನಗೆಬೆಂಬಲನೀಡಿಲ್ಲಎಂದು ಅಸಮಾಧಾನ ಹೊರ ಹಾಕಿದ್ದರು.ಇದು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಇದೆ.

 

 –ಎಚ್‌.ಶಿವರಾಜು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

WhatsApp-launches-disappearing-messages-feature

ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !

google-photos

ಉಚಿತ ಪೋಟೋ ಅಪ್ಲೋಡ್ ಸೇವೆ ಅಂತ್ಯಗೊಳಿಸಿದ “Google Photos’ : ಹೊಸ ನಿಯಮವೇನು ?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಡಿಜಿಟಲ್ ಸಹಿ ಮಾಡುವುದು ಹೇಗೆ?

ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ !

bidder

ಬೀದರ್: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕಳ್ಳತನ ಪ್ರಕರಣದ ಆರೋಪಿಗಳು

farm-bill

ಸರ್ಕಾರದ ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು: ತೀವ್ರ ಹೋರಾಟದ ಎಚ್ಚರಿಕೆ

kohli

ಸರಣಿ ಸೋತರೂ, ಹೊಸ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya

ಮoಡ್ಯ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ನಿಗಮ,ನಾಮ ನಿರ್ದೇಶನಕ್ಕೆ ಆಕಾಂಕ್ಷಿಗಳ ದಂಡು

ನಿಗಮ,ನಾಮ ನಿರ್ದೇಶನಕ್ಕೆ ಆಕಾಂಕ್ಷಿಗಳ ದಂಡು

ರೈತರ ಬಿಡುಗಡೆಗೆ ಆಗ್ರಹಿಸಿ‌ ಪ್ರತಿಭಟನೆ

ರೈತರ ಬಿಡುಗಡೆಗೆ ಆಗ್ರಹಿಸಿ‌ ಪ್ರತಿಭಟನೆ

mandya-tdy-1

ಅನ್ಯ ಭಾಷೆಯಿಂದ ಕನ್ನಡಕ್ಕೆ ಕುತ್ತು

ಸಕಾಲ ಪರಿಣಾಮಕಾರಿ ಜಾರಿಗೆ ಕ್ರಮ

ಸಕಾಲ ಪರಿಣಾಮಕಾರಿ ಜಾರಿಗೆ ಕ್ರಮ

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

WhatsApp-launches-disappearing-messages-feature

ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !

google-photos

ಉಚಿತ ಪೋಟೋ ಅಪ್ಲೋಡ್ ಸೇವೆ ಅಂತ್ಯಗೊಳಿಸಿದ “Google Photos’ : ಹೊಸ ನಿಯಮವೇನು ?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಡಿಜಿಟಲ್ ಸಹಿ ಮಾಡುವುದು ಹೇಗೆ?

ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ !

bidder

ಬೀದರ್: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕಳ್ಳತನ ಪ್ರಕರಣದ ಆರೋಪಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.