ಗ್ರಾಪಂ: ಅವಿರೋಧ ಆಯ್ಕಗೆ ಕಸರತ್ತು


Team Udayavani, Dec 14, 2020, 5:50 PM IST

ಗ್ರಾಪಂ: ಅವಿರೋಧ ಆಯ್ಕಗೆ ಕಸರತ್ತು

ಮಂಡ್ಯ: ಮೊದಲ ಹಂತದ ಚುನಾವಣೆಯ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ ಗ್ರಾಮ ಪಂಚಾಯಿತಿಗಳ ನಾಮಪತ್ರ ವಾಪಸ್‌ ಪಡೆಯಲು ಇಂದು ಕೊನೆ ದಿನವಾಗಿದೆ. ಇದರಿಂದ ಎದುರಾಳಿ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್‌ ತೆಗೆಸಲು ಇನ್ನಿಲ್ಲದಕಸರತ್ತು ನಡೆಸಲಾಗುತ್ತಿದೆ.

ಉಮೇದುವಾರಿಕೆ ವಾಪಸ್‌ಗೆ ಆಮಿಷ: ಈಗಾಗಲೇ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಾಮಪತ್ರ ಸಲ್ಲಿಸು ವಾಗಲೇ ಬೇರೆಯವರು ನಾಮಪತ್ರ ಸಲ್ಲಿಸದಂತೆ ನೋಡಿಕೊಳ್ಳಲಾಗಿದೆ. ಇದರಿಂದ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಮೂರು ಪಕ್ಷಗಳ ಬೆಂಬಲಿತ ಅಭ್ಯರ್ಥಿ ಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಉಮೇದುವಾರಿಕೆ ವಾಪಸ್‌ ತೆಗೆದುಕೊಳ್ಳುವಂತೆ ಒತ್ತಡ, ಆಮಿಷವೊಡ್ಡಲಾಗುತ್ತಿದೆ.

ಮಂಡ್ಯ ತಾಲೂಕಿನ 46, ಮದ್ದೂರಿನ 42 ಹಾಗೂ ಮಳವಳ್ಳಿಯ 38 ಗ್ರಾಮ ಪಂಚಾಯಿತಿಗಳ 2011 ಸ್ಥಾನಗಳಿಗೆ ಬಹುತೇಕ ಗ್ರಾಪಂಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಸೋಮವಾರ ಕೊನೆ ದಿನವಾಗಿರುವುದರಿಂದ ಇನ್ನಷ್ಟು ಸದಸ್ಯ ಸ್ಥಾನಗಳಿಗೆಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.

21 ವರ್ಷದ ತುಂಬದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತ: ಹುಲಿವಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಲಾಪುರ ವಾರ್ಡ್‌ 1ರಲ್ಲಿ ಮೂವರು ಪರಿಶಿಷ್ಟ ಪಂಗಡ ಮೀಸಲಾತಿಯಿಂದ ನಾಮಪತ್ರ ಸಲ್ಲಿಸಿರುವಅನು ಎಂಬ ಮಹಿಳೆಯ ನಾಮಪತ್ರವನ್ನು ಚುನಾವಣೆಗೆ ಸ್ಪರ್ಧಿಸಲು 21 ವರ್ಷ ತುಂಬದ ಕಾರಣ ನೀಡಿ ತಿರಸ್ಕೃತಗೊಳಿಸಲಾಗಿದೆ. ಅದರಂತೆ ಅದೇ ವಾರ್ಡ್‌ನ ತೊಳಸಮ್ಮ ಎಂಬುವರು ಜಾತಿ ಪ್ರಮಾಣ ಪತ್ರ ಮೀಸಲಾತಿಗೆ ಹೊಂದಿರುವಂತೆ ಸಲ್ಲಿಸಿಲ್ಲ ಎಂದು ತಿರಸ್ಕರಿಸಲಾಗಿದೆ. ಈ ಇಬ್ಬರೂ ನ್ಯಾಯಾಲಯ ಮೋರೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೆ.ಗೌಡಗೆರೆಯಲ್ಲಿ ಅವಿರೋಧ ಆಯ್ಕೆ: ಕೆ.ಗೌಡಗೆರೆಗ್ರಾಮ ಪಂಚಾಯಿತಿಯ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಮೂರು ಸಾಮಾನ್ಯ, ಒಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಇದರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷ ಅಭ್ಯರ್ಥಿಗಳಿದ್ದಾರೆ. ಸರಸ್ವತಿ ಶ್ರೀಧರ್‌, ವರಲಕ್ಷ್ಮೀ, ಸಿ.ಬೋರಯ್ಯ, ಸಿದ್ದಯ್ಯ ಚಿನ್ನಗಿರಿ ಎಂಬುವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅದರಂತೆ ಆಲಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ನೇತ್ರಾವತಿ ಎಂಬುವರು ಅವಿರೋಧ ಆಯ್ಕೆ ನಡೆದಿದೆ.

ಹಣ, ಆಮಿಷ ಹಾಗೂ ಪಾರ್ಟಿ: ಮೂರು ತಾಲೂಕುಗಳ ಗ್ರಾಮ ಪಂಚಾಯಿತಿಗಳಿಗೆ ಅವಿರೋಧ ಆಯ್ಕೆ ಮಾಡಲು ಗ್ರಾಮಗಳಲ್ಲಿ ಭಾನುವಾರ ಇಡೀ ದಿನ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಭ್ಯರ್ಥಿಗಳ ಮನವೊಲಿಸಲು ಗೌಪ್ಯ ಸಭೆ, ಹಣ, ಆಮಿಷವೊಡ್ಡುವುದರ ಜತೆಗೆ ಮದ್ಯಪಾನ ಪಾರ್ಟಿಗಳು ನಡೆದಿವೆ ಎನ್ನಲಾಗಿದೆ. ಹಣವಿರುವವರು ಎದುರಾಳಿ ಅಭ್ಯರ್ಥಿ  ಗಳನ್ನುಖರೀದಿಗೆ ಮುಂದಾಗಿದ್ದರು. ಅವರಿಗಾಗಿ ಪ್ರತ್ಯೇಕವಾಗಿ ಮದ್ಯಪಾನ ಪಾರ್ಟಿಗಳನ್ನು ಏರ್ಪಡಿಸಿ, ವಾಪಸ್‌ ತೆಗೆಸಲು ಇನ್ನಿಲ್ಲದ ಕಸರತ್ತು ನಡೆಸಲಾಗಿದೆ. ಗ್ರಾಮದ ಪ್ರಮುಖಮುಖಂಡರಜತೆ ಗೌಪ್ಯಸಭೆ ನಡೆಸಿಉಮೇದುವಾರಿಕೆ ವಾಪಸ್‌ ತೆಗೆಸಲು ಇಡೀ ದಿನ ಮೀಸಲಾಗಿತ್ತು.

ದೇಗುಲ ಅಭಿವೃದ್ಧಿಗೆ ಹಣ: ಅವಿರೋಧ ಆಯ್ಕೆಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನೀಪುರ ಗ್ರಾಮದ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ದೇಗುಲ ಅಭಿವೃದ್ಧಿಗೆಹಣ ನೀಡುತ್ತೇವೆ ಎಂಬ ಭರವಸೆ ಮೇರೆಗೆ ನಾಲ್ವರನ್ನು ಗ್ರಾಮಸ್ಥರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ನಾಲ್ವರು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದಂತೆ ಗ್ರಾಮದಲ್ಲಿ ಡಂಗೂರ ಸಾರಿಸಲಾಗಿತ್ತು. ಅದರಂತೆ ನಾಲ್ವರು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದಕಾರಣ ನಾಲ್ವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ2ನೇ ಬಾರಿಗೆ ಆಯ್ಕೆ ಬಯಸಿ ಸಿ.ಎಂ.ನಟೇಶ, ಸುಜಾತ ರಮೇಶ್‌, ಶಿಲ್ಪ ಮಾದೇಶ್‌ ಹಾಗೂ ಪುರದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಮಹಿಳೆಯೊಬ್ಬರನ್ನು ಅವಿರೋಧ ಆಯ್ಕೆ ಮಾಡಲು ನಿರ್ಧರಿಸಲಾಗಿತು.

324 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ :  ಮೊದಲ ಹಂತದಲ್ಲಿ ನಡೆಯುತ್ತಿರುವ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಿದ್ದ ನಾಮಪತ್ರಗಳಲ್ಲಿ324 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮೂರು ತಾಲೂಕುಗಳಿಂದ126 ಗ್ರಾಪಂಗಳಲ್ಲಿ2011 ಸದಸ್ಯ ಸ್ಥಾನಗಳಿಗೆ6316 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಶನಿವಾರ ನಾಮಪತ್ರಗಳಪರಿಶೀಲನೆ ನಡೆದಿದ್ದು, ಇದರಲ್ಲಿ ಮಂಡ್ಯ 145, ಮದ್ದೂರು133 ಹಾಗೂ ಮಳವಳ್ಳಿಯ 46 ಸೇರಿದಂತೆ ಒಟ್ಟು324 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತ ಗೊಂಡಿದ್ದು,5985 ನಾಮಪತ್ರಗಳುಕ್ರಮ ಬದ್ಧವಾಗಿದೆ. ಇದರಲ್ಲಿ ಮದ್ದೂರಿನ ಒಂದು ಗ್ರಾಪಂ ಸದಸ್ಯ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

414 ನಾಮಪತ್ರಗಳ ಸಲ್ಲಿಕೆ :  2ನೇ ಹಂತದಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ,  ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲೂಕುಗಳ104 ಗ್ರಾಪಂಗಳ 1786 ಸ್ಥಾನಗಳಿಗೆ ಶನಿವಾರ ಒಟ್ಟು414 ನಾಮಪತ್ರಗಳು ಸಲ್ಲಿಕೆಯಾಗಿದೆ. ಪಾಂಡವಪುರ68, ಶ್ರೀರಂಗಪಟ್ಟಣ67, ಕೆ.ಆರ್‌.ಪೇಟೆ142 ಹಾಗೂ ನಾಗಮಂಗಲ 137 ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದ್ದಾರೆ. ಇನ್ನೂ 1141 ಸದಸ್ಯ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಬೇಕಾಗಿದೆ.

 

ಎಚ್‌.ಶಿವರಾಜು

ಟಾಪ್ ನ್ಯೂಸ್

antarjala

ಅಂತರ್ಜಾಲದ ದಾಸ್ಯದಿಂದ ಮುಕ್ತರಾಗದ ವಿದ್ಯಾರ್ಥಿಗಳು

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

ಇಂದಿನಿಂದ 13ರವರೆಗೆ ಮಹದೇಶ್ವರ ಜ್ಯೋತಿ ಯಾತ್ರೆ

ಕುಂಭಮೇಳ ಅಚ್ಚುಕಟ್ಟಾಗಿ ನಿರ್ವಹಿಸಿ: ಡೀಸಿ

ಕುಂಭಮೇಳ ಅಚ್ಚುಕಟ್ಟಾಗಿ ನಿರ್ವಹಿಸಿ: ಡೀಸಿ

ಡಬಲ್‌ ಎಂಜಿನ್‌ ಸರ್ಕಾರದಿಂದ ಭ್ರಷ್ಟಾಚಾರ: ರಾಹುಲ್‌ ಗಾಂಧಿ

ಡಬಲ್‌ ಎಂಜಿನ್‌ ಸರ್ಕಾರದಿಂದ ಭ್ರಷ್ಟಾಚಾರ: ರಾಹುಲ್‌ ಗಾಂಧಿ

ರೈತರ ಬದುಕು ಹಸನಾಗಲು ಸಂಘಟಿತ ಹೋರಾಟ ಮುಖ್ಯ

ರೈತರ ಬದುಕು ಹಸನಾಗಲು ಸಂಘಟಿತ ಹೋರಾಟ ಮುಖ್ಯ

ಮಂಡ್ಯ; ಆಡುವಾಗ ಬಿದ್ದು ಮೃತಪಟ್ಟ ಎಂಟು ವರ್ಷದ ಬಾಲಕ

ಮಂಡ್ಯ; ಆಡುವಾಗ ಬಿದ್ದು ಮೃತಪಟ್ಟ ಎಂಟು ವರ್ಷದ ಬಾಲಕ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

antarjala

ಅಂತರ್ಜಾಲದ ದಾಸ್ಯದಿಂದ ಮುಕ್ತರಾಗದ ವಿದ್ಯಾರ್ಥಿಗಳು

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.