Udayavni Special

ಸಿಡಿಹಬ್ಬದಲ್ಲಿ ಕಂಬಕ್ಕೆ ಮನುಷ್ಯರನ್ನು ಕಟ್ಟದಂತೆ ಆದೇಶ

ದೊಡ್ಡರಸಿನಕೆರೆ ಗ್ರಾಮದಲ್ಲಿ ಏಳೂರಮ್ಮ ದೇವತೆ ಸಿಡಿಹಬ್ಬ!  ನಾಳೆಯಿಂದ ಮೂರು ದಿನಗಳ ಕಾಲ ಆಚರಣೆ

Team Udayavani, Feb 25, 2021, 8:01 PM IST

sidi fest

ಭಾರತೀನಗರ: ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಏಳೂರಮ್ಮ ದೇವತೆಯ ಸಿಡಿ ಹಬ್ಬ ಫೆ.26ರಿಂದ 28ವರೆಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಸಿಡಿಹಬ್ಬದಲ್ಲಿ ಕಂಬಕ್ಕೆ ಮನುಷ್ಯನನ್ನು ಕಟ್ಟ ದಂತೆ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ. ಐತಿಹಾಸಿಕ ಶ್ರೀಏಳೂರಮ್ಮ ಸಿಡಿಗೆ ಮನುಷ್ಯರನ್ನು ಸಿಡಿಕಂಬಕ್ಕೆ ಕಟ್ಟಿ ಎಳೆಯುವ ಬದಲು ಹೊಂಬಾಳೆ ಅಥವಾ ಗೊಂಬೆ ಕಟ್ಟಿ ರಥ ಎಳೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.

ತಾಲೂಕು ಆಡಳಿತದ ಕಳೆದ ವರ್ಷವೇ ಸಿಡಿ ಕಂಬಕ್ಕೆ ಮನುಷ್ಯರನ್ನು ಕಟ್ಟದಂತೆ ತೀರ್ಮಾನದ ಹಿನ್ನೆಲೆಯಲ್ಲಿ ಸಿಡಿಹಬ್ಬವನ್ನೇ ನಿಲ್ಲಿಸಲಾಗಿತ್ತು. ಸಿಡಿ ಮಹೋತ್ಸವ ಜನಪ್ರಿಯ: ಮಂಡ್ಯ ಜಿಲ್ಲೆ ಹಾಗೂ ವಿವಿಧ ಗ್ರಾಮದಲ್ಲಿ ಅಪಾರ ಭಕ್ತರನ್ನು ಹೊಂದಿರುವ ಶ್ರೀ ಏಳೂರಮ್ಮ ಮತ್ತು ಕಾಳಮ್ಮ ದೇವತೆಗಳ ಸಿಡಿ ಮಹೋತ್ಸವ ಜನಪ್ರಿಯವಾಗಿದೆ. ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದ ಹಬ್ಬವನ್ನು ಕಳೆದ

ವರ್ಷ ನಿಲ್ಲಿಸಲಾಗಿತ್ತು. ಇದರಿಂದ ಗ್ರಾಮದಲ್ಲಿ ಸಮ ಸ್ಯೆಗಳಾಗಿದ್ದು, ಕಂಬಕ್ಕೆ ಮನುಷ್ಯನನ್ನು ಕಟ್ಟಲು ಅನುಮತಿ ನೀಡಬೇಕು ಎಂದು ಗ್ರಾಮದ ಮುಖಂಡರು ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತು ಕೆ.ಎಂ.ದೊಡ್ಡಿ ಠಾಣೆಗೆ ಮನವಿ ನೀಡಿದ್ದಾರೆ. ಆದರೆ, ತಹಶೀಲ್ದಾರ್‌ ವಿಜಯ್‌ ಕುಮಾರ್‌ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ, ಹಬ್ಬ ಆಚರಣೆ ಮಾಡಿ. ಆದರೆ, ಯಾವುದೇ ಕಾರ ಣಕ್ಕೂ ಕಂಬಕ್ಕೆ ಮನುಷ್ಯನನ್ನು ಕಟ್ಟಲು ಅವಕಾಶವಿಲ್ಲ. ನಾವುಅನುಮತಿ ನೀಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮನುಷ್ಯರನ್ನು ಕಟ್ಟಿ ಸಿಡಿ ಆಚರಣೆ ರದ್ದು: 75 ಅಡಿಯ ಮರಕ್ಕೆ ದೊಡ್ಡರಸಿನಕೆರೆ ಗ್ರಾಮದ ಎಲ್ಲೆಯಲ್ಲಿ ಗಂಗಮತಸ್ಥ ಜನಾಂಗದ ಮನೆಯ ಹಿರಿಯ ಮಕ್ಕಳು ಹಾಗೂ ಮುಟ್ಟನಹಳ್ಳಿ ಗ್ರಾಮದ ಎಲ್ಲೆಯಲ್ಲಿಒಕ್ಕಲಿಗ ಜಾತಿಯಲ್ಲಿ ಮದುವೆಯಾದ ಮನೆಯಹಿರಿಯ ಮಕ್ಕಳನ್ನು ಮೊದಲ ವರ್ಷ ತೇರಿನ ಕಂಬಕ್ಕೆನೇತು ಹಾಕಿ, ಅದನ್ನು ರಥಕ್ಕೆ ಕಟ್ಟಿ ಎಳೆಯುವ ಸಂಪ್ರದಾಯ ಈಗ ಮುರಿದು ಬಿದ್ದಿದೆ.

ಸಾವಿರಾರು ಭಕ್ತರ ನಿರೀಕ್ಷೆ: ಈ ಹಬ್ಬವನ್ನು ಚಿಕ್ಕರಸಿ ನಕೆರೆ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗುರುದೇವರಹಳ್ಳಿ, ಗೌಡಯ್ಯನ  ದೊಡ್ಡಿ ಸೇರಿದಂತೆ 7 ಗ್ರಾಮಗಳ ಸಾವಿರಾರು ಭಕ್ತರು ಹಬ್ಬ ದಲ್ಲಿ ಪಾಲ್ಗೊಂಳ್ಳುವ ನಿರೀಕ್ಷೆಯಿದೆ.

ಕೊಂಡಾಬಂಡಿ ಉತ್ಸವ: ಫೆ.26ರ ಶುಕ್ರವಾರ ರಾತ್ರಿ 7 ಗಂಟೆಗೆ ಶ್ರೀಮಾರಮ್ಮ ದೇಗುಲದಲ್ಲಿ 5  ಕೊಂಡಾಬಂಡಿಗಳನ್ನು ಕಟ್ಟಿ ಏಳೂರಮ್ಮ, ಕಾಳಮ್ಮ, ಹಿರಿಯಮ್ಮ ದೇವಸ್ಥಾನದ ಸುತ್ತ ಪ್ರದರ್ಶನ ಮಾಡಲಾಗುವುದು,ಗ್ರಾಮದ ಪ್ರಮುಖ ರಸ್ತೆಯಲ್ಲಿ ಕೊಂಡಾಬಂಡಿ ಮೆರವಣಿಗೆ ನೆಡಸಲಾಗುವುದು.

ದೇವತೆ, ಚಿಕ್ಕಮ್ಮ ದೇವತೆ ಈ ದೇವತೆಗಳು ಏಳೂರಮ್ಮ ದೇವಸ್ಥಾನಕ್ಕೆ ಹೋಗಿ ಹೂ - ಹೊಂಬಾಳೆ ಮಾಡಲಾಗುವುದು. ಇದನ್ನು ಏಳೂರಮ್ಮ ಗುಡ್ಡಪ್ಪ, ಕಾಳಮ್ಮನ ಗುಡ್ಡಪ್ಪಂದಿರು ರಥೋತ್ಸವದ ಹತ್ತಿರ ಬಂದು ಪೂಜೆಸಲ್ಲಿಸುತ್ತಾರೆ. ನಂತರ ರಥದ ಮೇಲೆ ಎಡ-ಬಲದ ಇಬ್ಬರು ಗುಡ್ಡಪ್ಪಂದಿರು ಕುಳಿತು ರಥೋ ತ್ಸವ ನಡೆಯಲಿದೆ. ಗ್ರಾಮದ ಸಾವಿರಾರು ಮಹಿಳೆಯರು 27ರ ಶನಿವಾರ ಬೆಳಗ್ಗೆ 7 ಗಂಟೆಗೆ ಏಳೂರಮ್ಮ ದೇವಸ್ಥಾಕ್ಕೆ ಕಿಚಡಿ ಅನ್ನ ಮಾಡಿಕೊಂಡು ಹೋಗಿ ಪೂಜೆಸಲ್ಲಿಸುತ್ತಾರೆ. ನಂತರ ಈಡಿಗರ ಜನಾಂಗ ದವರು ಪೋತಲಿಂಗೇಶ್ವರ ದೇಗುಲದ ಹತ್ತಿರ ಆರತಿ ಮಾಡುತ್ತಾರೆ.

ಕೊಂಡೋತ್ಸವ: ಶನಿವಾರ 9 ಗಂಟೆಗೆ ಏಳೂರಮ್ಮ ದೇವಸ್ಥಾನದ ಹತ್ತಿರ ನಡೆಯುವ ಕೊಂಡೋತ್ಸವಕ್ಕೆ ಶುಕ್ರವಾರ ಸಂಜೆ ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗುರುದೇವರಹಳ್ಳಿ, ಗೌಡಯ್ಯನದೊಡ್ಡಿ ಗ್ರಾಮಸ್ಥರು ಸೌದೆ ತಂದು ಹಾಕುತ್ತಾರೆ. ಪೂಜೆ ಸಲ್ಲಿಸಿ ಸೌದೆಗೆ ಬೆಂಕಿಹಾಕುತ್ತಾರೆ. ಏಳೂರಮ್ಮನ ಗುಡ್ಡಪ್ಪ, ಕಾಳಮ್ಮನ ಪೂಜಾರಿ, ಕ್ಯಾತಮ್ಮನ ಪೂಜಾರಿ ಕರಗಹೊತ್ತು ಕೊಂಡೋತ್ಸವ ನಡೆಸುತ್ತಾರೆ.

 

ಅಣ್ಣೂರು ಸತೀಶ್‌

 

ಟಾಪ್ ನ್ಯೂಸ್

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನ

Book Review On Huli Kadjila by Shreeraj Vakwady , Authoured by Harish T G

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

gdfgdfg

ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ : ಮೂರು ಜನ ಕಾರ್ಮಿಕರು ಸ್ಥಳದಲ್ಲೇ ಸಾವು

ಹೊಸ ‘ಹೋಪ್‌’ನಲ್ಲಿ ಶ್ವೇತಾ: ಕೆಎಎಸ್‌ ಆಫೀಸರ್‌ ಆಗಿ ನಟನೆ

ಹೊಸ ‘ಹೋಪ್‌’ನಲ್ಲಿ ಶ್ವೇತಾ: ಕೆಎಎಸ್‌ ಆಫೀಸರ್‌ ಆಗಿ ನಟನೆ

ಹ್ಯಾಟ್ರಿಕ್ ಜಯದ ಕಾತರದಲ್ಲಿ ಆರ್ ಸಿಬಿ: ಟಾಸ್ ಗೆದ್ದ ವಿರಾಟ್ ಮಾರ್ಗನ್

ಹ್ಯಾಟ್ರಿಕ್ ಜಯದ ಕಾತರದಲ್ಲಿ RCB: ಟಾಸ್ ಗೆದ್ದ ವಿರಾಟ್, 3 ವಿದೇಶಿ ಆಟಗಾರರೊಂದಿಗೆ ಕಣಕ್ಕೆ

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

Didi Demoralised As BJP Much Ahead After 5 Phases Of Polls: Amit Shah

ಐದು ಹಂತಗಳ ಚುನಾವಣೆಯಲ್ಲಿ 122 ಸ್ಥಾನಗಳು ಬಿಜೆಪಿಗೆ ಖಚಿತ : ಅಮಿತ್ ಶಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ ಮಾಡಿದ ದಾವಣಗೆರೆ ಎಸ್ ಪಿ     

Awarding of awards to 10 journalists

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Fire if gas is refilling

ಗ್ಯಾಸ್‌ ರೀಪೀಲ್ಲಿಂಗ್‌ ವೇಳೆ ಬೆಂಕಿ: ಆಟೋ ಭಸ್ಮ

MUST WATCH

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನ

Book Review On Huli Kadjila by Shreeraj Vakwady , Authoured by Harish T G

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

gdfgdfg

ಕೆಮಿಕಲ್ ಕಾರ್ಖಾನೆಯಲ್ಲಿ ಅಗ್ನಿ ದುರಂತ : ಮೂರು ಜನ ಕಾರ್ಮಿಕರು ಸ್ಥಳದಲ್ಲೇ ಸಾವು

ಕೋವಿಡ್ ಕಾರಣದಿಂದ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ

ಕೋವಿಡ್ ಕಾರಣದಿಂದ ಜಾನಪದ ಕಲಾವಿದರ ಮಾಸಾಶನ ಸಂದರ್ಶನ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.