ಸಂಕಷ್ಟದಲ್ಲಿ ಕುಂಚ ಕಲಾವಿದರ ಬದುಕು

Team Udayavani, Nov 11, 2019, 4:34 PM IST

ಕೆ.ಆರ್‌.ಪೇಟೆ: ರಾಜ್ಯದಲ್ಲಿ ಕಾರ್ಯನಿರ್ವಸುತ್ತಿರುವ ಚಿತ್ರ ಕಲಾವಿದರ ಬದುಕು ಅತ್ಯಂತ ಶೊಚನೀಯವಾಗಿದ್ದು ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ನೀಡಿ ಬೀದಿ ಬದಿಯಲ್ಲಿಯೇ ಜೀವನ ನಡೆಸುತ್ತಿರುವ ಕಲಾವಿದರಿಗೆ ಒಂದು ನೆಲೆ ನೀಡಬೇಕಾಗಿದೆ ಎಂದು ಕುಂಚಕಲಾವಿದರ ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್‌ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲೂಕು ಕುಂಚ ಕಲಾವಿದರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡತನ ಸೇರಿದಂತೆ ಇತರೆ ಕಾರಣಗಳಿಂದ ನಾವುಗಳು ಚಿತ್ರಕಲಾವಿದರಾಗಿ ಕಾಯಕ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಚಿತ್ರಕಲಾದರ ಸಂಖ್ಯೆ ಕಡಿಮೆ ಇರುವುದರಿಂದ ಯಾವುದೇ ಸರ್ಕಾರವಾಗಲಿ, ರಾಜಕೀಯ ಪಕ್ಷವಾಗಲಿ ನಮ್ಮ ಬೆಂಬಲಕ್ಕೆ ಬಂದಿಲ್ಲ. ಆದರೆ ಇಂದು ಚಿತ್ರ ಕಲಾವಿದರಿಗೆ ತಿಂಗಳಲ್ಲಿ 10 ದಿನಗಳು ಕೆಲಸ ಸಿಗುವುದಿಲ್ಲ.

ಏಕೆಂದರೆ ಈಗ ಆಧುನಿತ ತಂತ್ರಜಾನದ ಬೋರ್ಡ್‌ಗಳು, ಫ್ಲೆಕ್ಸ್‌ಗಳು ಮಾರುಕಟ್ಟೆಗೆ ಬಂದಿವೆ. ಇಂಥ ಪರಿಸ್ಥಿತಿಯಲ್ಲಿ ನಾವು ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡು ನಮಗೆ ಏನಾದರೂ ವಿಶೇಷ ಯೋಜನೆ ಜಾರಿಗೆ ತಂದರೆ ಮಾತ್ರ ನಾವುಗಳು ಜೀವನ ನಡೆಸಬಹುದಾಗಿದೆ ಇಲ್ಲವಾದೆ ನಮ್ಮಂತಹ ಕಲಾವಿದರೂ ಜೀವನ ಮಾಡುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾವುಗಳು ಸಂಘಟಿತರಾದಾಗ ಮಾತ್ರ ನಾವು ಸರ್ಕಾರದಿಂದ ಏನಾದರೂ ಸೌಲಭ್ಯಗಳನ್ನು ಪಡೆದು ಕೊಳ್ಳಲು ಸಾಧ್ಯ ಆದ್ದದರಿಂದ ಎಲ್ಲರೂ ಒಟ್ಟಾಗಿ ನಮ್ಮ ಜೀವನದ ಹಕ್ಕಿಗಾಗಿ ಹೋರಾಟ ಮಾಡೋಣ ಎಂದು ಸಭೆಯಲ್ಲಿ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ರಾಜ್ಯ ಕುಂಚ ಕಲಾವಿದರ ಸಂಘದ ರಾಜ್ಯ ಕಾರ್ಯದರ್ಶಿ ಸಂತೋಷ್‌, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌, ಹಿರಿಯ ಕಲಾವಿದ ಕೃಷ್ಣಮೂರ್ತಿ, ಸುರೇಶ್‌, ಮುರುಗೇಶ್‌ವರ್ಧನ್‌, ಅಕ್ಕಿಹೆಬ್ಟಾಳುಆನಂದ್‌, ಹೊಸಹೊಳಲು ಹರೀಶ್‌, ವಿನಯ್‌, ಮಂಜುನಾಥ್‌ ಮತ್ತಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ