Udayavni Special

ಮದ್ದೂರು, ಮಳವಳ್ಳಿ ಕೆರೆಗಳಿಗೆ ನೀರು


Team Udayavani, Mar 18, 2021, 9:40 AM IST

ಮದ್ದೂರು, ಮಳವಳ್ಳಿ ಕೆರೆಗಳಿಗೆ ನೀರು

ಭಾರತೀನಗರ: ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆ ಪಂಪ್‌ಹೌಸ್‌ ಹಾಗೂ ರೈಸಿಂಗ್‌ ಮೆನ್‌ ಕಾಮಗಾರಿ ಯನ್ನು ಶಾಸಕ ಡಿ.ಸಿ.ತಮ್ಮಣ್ಣ ವೀಕ್ಷಣೆ ಮಾಡಿದರು.

ಈ ವೇಳೆ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಈಏತನೀರಾವರಿ ಕಾಮಗಾರಿ ಮದ್ದೂರು ಹಾಗೂಮಳವಳ್ಳಿ ಎರಡು ಕ್ಷೇತ್ರದ ಬಾಧಿತ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸುವ ಕಾಮಗಾರಿಯಾಗಿದೆ.ಮದ್ದೂರು ಕ್ಷೇತ್ರದ 4 ಕೆರೆ, ಮಳವಳ್ಳಿ ಕ್ಷೇತ್ರದ 12ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಈಭಾಗದ ನೂರಾರು ಎಕರೆ ಪ್ರದೇಶದ ಬೆಳೆಗಳಿಗೆಅನುಕೂಲವಾಗಲಿದೆ ಎಂದರು.

44 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಸೂಳೆಕೆರೆ ಕೋಡಿಯಿಂದ ಹಾಗೂ ವಿಸಿ ನಾಲಾ ಜಾಲದ ಅಚ್ಚುಗಟ್ಟು ಪ್ರದೇಶಗಳಿಂದ ಬರುವಹೆಚ್ಚುವರಿ ನೀರನ್ನು ಸಂಗ್ರಹಿಸಿ ಮಾಡಿ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಯಿಂದ ಹೆಬ್ಟಾಳ ಚೆನ್ನಯ್ಯನಾಲೆಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆಯಾಗಿದೆ ಎಂದರು.

ಬೊಪ್ಪಸಮುದ್ರದ ರೈತ ರಾಜಣ್ಣ ಮಾತನಾಡಿ, ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪದೆ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾಮಗಾರಿ ಪೂರ್ಣಗೊಂಡ ನಂತರ ಎರಡು ಬೆಳೆಗಳನ್ನು ಯಾವುದೇ ತೊಂದರೆ ಇಲ್ಲದೆ ಬೆಳೆಯಬಹುದು. ಈ ಏತ ನೀರಾವರಿ ಯೋಜನೆಯಿಂದ ನಮಗೆ ಸಂತಸ ತಂದಿದೆ ಎಂದರು.

ಗ್ರಾಪಂ ಸದಸ್ಯ ಉಮೇಶ್‌ ಮಾತನಾಡಿ, ವಿ.ಸಿ.ನಾಲೆಯಿಂದ ಹಾಗೂ ಹೆಬ್ಟಾಳ ಚೆನ್ನಯ್ಯನಾಲೆಯಿಂದ ನೀರು ಬಾರದೆ ಈ ಭಾಗದಲ್ಲಿ 2ನೇ ಬೆಳೆಬೆಳೆಯಲು ಸಾಧ್ಯವಾಗುತ್ತಿಲ್ಲ. ಬೊಪ್ಪಸಮುದ್ರದಿಂದಚಂದೂಪುರದವ ರೆಗೂ ರೈತರ ಬೆಳೆಗಳು ನೀರಿಲ್ಲದೆಒಣಗುತ್ತಿವೆ. ಶಾಸಕ ಡಿ.ಸಿ.ತಮ್ಮಣ್ಣ ಹೆಬ್ಟಾಳ ಚೆನ್ನಯ್ಯನಾಲೆಗೆ ತಡೆಗೋಡೆ ನಿರ್ಮಿಸಿ ಏತ ನೀರಾವರಿಮೂಲಕ ಈ ಭಾಗದ ಜಮೀನುಗಳಿಗೆ ನೀರೊದಗಿಸಲು ಮುಂದಾಗಿದ್ದಾರೆ ಎಂದರು.

ಅಧಿಕಾರಿಗಳಿಗೆ ಸೂಚನೆ: ವಿಸಿ ನಾಲೆ ಅಚ್ಚುಗಟ್ಟು ಪ್ರದೇಶಕ್ಕೆ ಏತನೀರಾವರಿ ಮೂಲಕ ನೀರನ್ನು ಸರಬರಾಜು ಮಾಡುವುದರ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಕಾಮಗಾರಿಯನ್ನು 4 ತಿಂಗಳಲ್ಲಿಮುಗಿಸಬೇಕೆಂದು ತಾಕೀತು ಮಾಡಿ ರೈತರಿಗೆ ಯಾವುದೇರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ನೀರಾವರಿ ಇಲಾಖೆಯ ಅಧಿಕಾರಿ ಎಇಇ ನಾಗರಾಜು, ಚಂದ್ರೇಗೌಡ, ಅವಿನಾಶ್‌, ಶೀಲ, ಶಿವಕುಮಾರ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ತಿಟ್ಟಮಾರನಹಳ್ಳಿ ಸುರೇಶ್‌, ವೆಂಕಟೇಶ, ಶ್ರೀನಿವಾಸ, ಮೆಣಸಗೆರೆ ಪಟೇಲ್‌ ಉಮೇಶ್‌ ಇದ್ದರು.

30ಕ್ಕೆ  ರೈತರೊಂದಿಗೆ ಮಾತುಕತೆ :

ಈ ಏತನೀರಾವರಿ ಕಾಮಗಾರಿ ಮಾಡಲು ಕೆಲವು ರೈತರ ಜಮೀನನ್ನು ಭೂಸ್ವಾಧೀನ ಇಲಾಖೆವಶಪಡಿಸಿಕೊಂಡಿದೆ. ಇದರಿಂದ ರೈತರುಆತಂಕಗೊಂಡು ಇನ್ನೂ ಪರಿಹಾರ ಸಿಕ್ಕಿಲ್ಲ,ಪರಿಹಾರ ಕೊಡಿಸಿಕೊಡಬೇಕೆಂದು ನನಗೆಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಮಾ.30ರಂದು ರೈತರೊಂದಿಗೆ ಮಾತುಕತೆ ನಡೆಸಿಬೆಲೆ ನಿಗದಿ ಪಡಿಸಲು ಮುಂದಾಗಿದ್ದಾರೆ. ಆಸಂದರ್ಭದಲ್ಲಿ ರೈತರಿಗೆ ಉತ್ತಮ ಪರಿಹಾರ ಕೊಡಿಸಲು ಒತ್ತಾಯಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ಸರ್‌ ಎಂ.ವಿಶ್ವೇಶ್ವರಯ್ಯ ರೈತರ ಜಮೀನುಗಳಿಗೆ ನೀರೊದಗಿಸಲುಒಂದನೆಯದು ಕನ್ನಂಬಾಡಿ ಕಟ್ಟೆ, ಎಡನೆಯದುಯತ್ತಂಬಾಡಿ ಕಟ್ಟೆಯನ್ನು ಕಟ್ಟಲು ಕನಸುಕಂಡಿದ್ದರು. ಆದರೆ, ಯತ್ತಂಬಾರಿ ಅಣೆಕಟ್ಟೆಯನ್ನು ಕಟ್ಟಲು ಸಾಧ್ಯ ವಾಗಿರಲಿಲ್ಲ. ವಿಶ್ವೇಶ್ವರಯ್ಯನವರ ಕನಸನ್ನು ಶಾಸಕ ಸಿ.ಡಿ.ತಮ್ಮಣ್ಣಅವರು ಈ ಭಾಗದ ಕೂಳಗೆರೆ ಮತ್ತುತಿಟ್ಟ ಮಾರನಹಳ್ಳಿ ಏತ ನೀರಾವರಿ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಉಮೇಶ್‌ ಪಟೇಲ್‌, ರೈತ ಮೆಣಸಗೆರೆ

ಟಾಪ್ ನ್ಯೂಸ್

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trafficking in illegal rice

ಅಕ್ರಮ ಅಕ್ಕಿ ಸಾಗಣೆ: ಬಂಧನ

Mandya Taluk covid Hotspot

ಮಂಡ್ಯ ತಾಲೂಕು ಕೋವಿಡ್ ಹಾಟ್‌ಸ್ಪಾಟ್‌

Sri Venkatasubbayya

ಪ್ರೊ.ವೆಂಕಟಸುಬ್ಬಯ್ಯಗೆ ಶ್ರೀರಂಗಪಟ್ಟಣ ನಾಗರಿಕರ ಶ್ರದ್ಧಾಂಜಲಿ

Siddhartha Theater is just a memory

ಸಿದ್ಧಾರ್ಥ ಚಿತ್ರಮಂದಿರ ಇನ್ನು ನೆನಪು ಮಾತ್ರ

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.