ಜಾನುವಾರುಗಳ ಮೇವಿಗೆ ಗೋಮಾಳ ಕಾಯ್ದಿರಿಸಿ

ನೂರಾರು ಎಕರೆ ಇದ್ದ ಗೋಮಾಳ ಅಕ್ರಮ ಸಾಗುವಳಿ • ಜಾನುವಾರುಗಳಿಗೆ ತಕ್ಕಂತೆ ಜಮೀನು ಉಳಿಸಿ

Team Udayavani, Jul 4, 2019, 4:07 PM IST

ಮುಳಬಾಗಿಲು ತಾಲೂಕು ಆವಣಿ ಹೋಬಳಿಯಲ್ಲಿ ರೈತರು ಅಕ್ರಮವಾಗಿ ಸಾಗುವಳಿ ಮಾಡಿರುವ ಸರ್ಕಾರಿ ಗೋಮಾಳ.

ಮುಳಬಾಗಿಲು: ತಾಲೂಕಿನ ಆವಣಿ ಹೋಬಳಿಯ 75 ಹಳ್ಳಿಗಳಲ್ಲಿ 22 ಸಾವಿರ ಜಾನುವಾರುಗಳಿದ್ದು, ಗೋಮಾಳವಿಲ್ಲದೆ ಮೇವಿಗೆ ಪರದಾಡುವಂತಾಗಿದೆ. ನಿಯಮಾನುಸಾರ 6832 ಎಕರೆ ಕಾಯ್ದಿರಿಸಬೇಕು. ಆದರೆ, ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಅಕ್ರಮ ಸಕ್ರಮ ಮಾಡುವ ವೇಳೆಯಲ್ಲಾದ್ರೂ ಜಮೀನು ಕಾಯ್ದಿರಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ತಾಲೂಕಿನ ಆವಣಿ ಹೋಬಳಿಯ ಬಲ್ಲವೃತ್ತದಲ್ಲಿ ಕಾಶೀಪುರ, ಬಲ್ಲ, ಕೆ.ಚದುಮನಹಳ್ಳಿ, ಶೆಟ್ಟಿಬಣಕನಹಳ್ಳಿ ಬರಲಿದ್ದು, ಈ ಗ್ರಾಮಗಳಲ್ಲಿ 384 ಎಕರೆ ಸರ್ಕಾರಿ ಗೋಮಾಳವಿದೆ. ಬಲ್ಲ ಮತ್ತು ಕಾಶೀಪುರದಲ್ಲಿ ಉಳಿದ 44 ಎಕರೆ ಜಮೀನನ್ನು ರೈತರು ಅಕ್ರಮ ಸಾಗುವಳಿ ಮಾಡುತ್ತಿದ್ದು, 32 ಎಕರೆ ಉಳಿದಿದೆ. ಈ ಹಳ್ಳಿಗಳಲ್ಲಿ 1395 ಜಾನುವಾರುಗಳಿದ್ದು, ಸರ್ಕಾರಿ ಆದೇಶದಂತೆ 100 ಜಾನುವಾರುಗಳಿಗೆ 37 ಎಕರೆ ಜಮೀನು ಕಾಯ್ದಿರಿಸಬೇಕಿತ್ತು. ಆದರೆ, ಇದ್ಯಾವುದೂ ಮಾಡಿಲ್ಲ. ಹೀಗಾಗಿ ಇರುವ ಜಮೀನಾದ್ರೂ ಉಳಿಸಿದ್ರೆ ಅನುಕೂಲವಾಗುತ್ತದೆ.

ಉಳಿದಿರೋದು 25 ಮಾತ್ರ: ಎಮ್ಮೇನತ್ತ ವೃತ್ತಕ್ಕೆ ಜೋಗಲಕಾಷ್ಟಿ, ಕನ್ನತ್ತ, ಎಮ್ಮೇನತ್ತ, ಪದಕಾಷ್ಟಿ ಗ್ರಾಮಗಳಲ್ಲಿ 277 ಎಕರೆ ಸರ್ಕಾರಿ ಗೋಮಾಳದಲ್ಲಿ ಉಳಿದಿರುವ 66 ಎಕರೆಯನ್ನು ರೈತರು ಸಾಗುವಳಿ ಮಾಡುತ್ತಿದ್ದಾರೆ. ಇಲ್ಲಿ 1152 ಜಾನುವಾರುಗಳಿದ್ದು, 343 ಎಕರೆ ಕಾಯ್ದಿರಿಸಬೇಕಾಗಿದೆ. ಆದರೆ, 18 ಎಕರೆ ಮಾತ್ರ ಉಳಿದೆ. ವಿ.ಗುಟ್ಟಹಳ್ಳಿ ವೃತ್ತದಲ್ಲಿ ವಿಜಲಾಪುರ, ವಿ.ಗುಟ್ಟಹಳ್ಳಿ, ಕುಮದೇನಹಳ್ಳಿ, ಎಸ್‌.ಐ.ಅನಂತಪುರ, ಅಸಲಿ ಅತ್ತಿಕುಂಟೆ, ಜಮ್ಮನಹಳ್ಳಿ, ಕುರುಬರಹಳ್ಳಿ, ವರದಗಾನಹಳ್ಳಿ, ದೊಡ್ಡಮಾದೇನಹಳ್ಳಿ ಗ್ರಾಮಗಳಲ್ಲಿ 1408 ಎಕರೆ ಗೋಮಾಳದಲ್ಲಿ ಉಳಿದಿರುವುದು 549 ಎಕರೆ, ಇದರಲ್ಲಿ ಅಕ್ರಮ ಸಾಗುವಳಿ ಮಾಡಲಾಗುತ್ತಿದೆ. ಇಲ್ಲಿ 2747 ಜಾನುವಾರುಗಳಿದ್ದು, 1039 ಎಕರೆ ಜಮೀನು ಕಾಯ್ದಿರಿಸಬೇಕಾಗಿತ್ತು. ಆದರೆ, 25 ಎಕರೆ ಜಮೀನು ಮಾತ್ರ ಉಳಿದಿದೆ.

ಇದ್ದ ಜಮೀನು ಅಕ್ರಮ ಸಾಗುವಳಿ: ಆವಣಿ ವೃತ್ತದಲ್ಲಿ ಆವಣಿ, ಚೋಳಂಗುಂಟೆ, ಗಂಜಿಗುಂಟೆ, ಬಟ್ಲಬಾವನಹಳ್ಳಿ, ರಾಮೇನಲ್ಲೂರು ಗ್ರಾಮಗಳಲ್ಲಿನ 658 ಎಕರೆ ಸರ್ಕಾರಿ ಗೋಮಾಳದಲ್ಲಿ ಉಳಿದ 50 ಎಕರೆ ಜಮೀನಿನಲ್ಲಿ ರೈತರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, 2255 ಜಾನುವಾರುಗಳಿಗೆ 676 ಎಕರೆ ಜಮೀನು ಕಾಯ್ದಿರಿಸಬೇಕಾಗಿತ್ತು. ಆದರೆ, 225 ಎಕರೆ ಜಮೀನು ಇದೆ. ಮೇಲಾಗಾಣಿ ವೃತ್ತದಲ್ಲಿ ಕೀಲಾಗಾಣಿ, ಮೇಲಾಗಾಣಿ, ಮಲ್ಲಕಚ್ಚನಹಳ್ಳಿ, ಕಾಡುಕಚ್ಚನಹಳ್ಳಿ, ಸಂಗೊಂಡಹಳ್ಳಿ, ಗೊಟ್ಟಿಕುಂಟೆ ಈ ಹಳ್ಳಿಗಳಲ್ಲಿ 971 ಎಕರೆ ಸರ್ಕಾರಿ ಗೋಮಾಳ ಪೈಕಿ 469 ಎಕರೆ ಮಂಜೂರಾಗಿದೆ. 431 ಎಕರೆ ಪ್ರದೇಶದಲ್ಲಿ ರೈತರು ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ, 1350 ಜಾನುವಾರುಗಳಿಗೆ 403 ಎಕರೆ ಕಾಯ್ದಿರಿಸಬೇಕಾಗಿತ್ತು. ಆದರೆ, 63 ಎಕರೆ ಉಳಿದಿದೆ.

ಅಕ್ರಮ ಸಾಗುವಳಿ: ರೆಡ್ಡಿಹಳ್ಳಿ ವೃತ್ತದಲ್ಲಿ ಚೆನ್ನಾಪುರ, ರೆಡ್ಡಿಹಳ್ಳಿ, ಕಗ್ಗಿನಹಳ್ಳಿ, ಯಡಹಳ್ಳಿ, ಬೊಮ್ಮಸಂದ್ರ, ಶೇಷಾಪುರ, ವೀರಶೆಟ್ಟಿಹಳ್ಳಿ, ಚಿತ್ತೇರಿ, ಕಮ್ಮರಕುಂಟೆ ಗ್ರಾಮಗಳಲ್ಲಿನ 497 ಎಕರೆ ಸರ್ಕಾರಿ ಗೋಮಾಳದಲ್ಲಿ 2562 ಜಾನುವಾರುಗಳಿಗೆ 765 ಎಕರೆ ಕಾಯ್ದಿರಿಸಬೇಕಾಗಿದ್ದು, 52 ಎಕರೆ ಮಾತ್ರ ಉಳಿದಿದೆ.

ಅಂಗೊಂಡಹಳ್ಳಿ ವೃತ್ತದಲ್ಲಿ ಸುಣ್ಣಂಗೂರು, ಅಂಗೊಂಡ ಹಳ್ಳಿ, ಹೊನಗಾನಹಳ್ಳಿ, ಬೆಳಪನಹಳ್ಳಿ, ಕೊರವೇನೂರು ಗ್ರಾಮಗಳಲ್ಲಿನ 434 ಎಕರೆ ಸರ್ಕಾರಿ ಗೋಮಾಳದಲ್ಲಿ ಉಳಿದಿರುವ 126 ಎಕರೆ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ.

ಜಮೀನು ಕಾಯ್ದಿರಿಸಿಲ್ಲ: 2381 ಜಾನುವಾರುಗಳಿಗೆ 711 ಎಕರೆ ಕಾಯ್ದಿರಿಸಬೇಕಾಗಿತ್ತಾದರೂ ಒಂದೇ ಒಂದು ಎಕರೆ ಜಮೀನು ಉಳಿದಿಲ್ಲ.

ದೇವರಾಯಸಮುದ್ರ ವೃತ್ತದಲ್ಲಿ ಬೆಳ್ಳಂಬಳ್ಳಿ, ದೇವರಾಯಸಮುದ್ರ, ದೊಡ್ಡಿಗಾನಹಳ್ಳಿ, ಕನ್ನಸಂದ್ರ ವೃತ್ತಕ್ಕೆ ಬಾದೇನಹಳ್ಳಿ, ಮಜರಾ ಅತ್ತಿಕುಂಟೆ, ತಿರುಮನಹಳ್ಳಿ, ಕನ್ನಸಂದ್ರ ಗ್ರಾಮಗಳಲ್ಲಿನ 1721 ಎಕರೆ ಸರ್ಕಾರಿ ಗೋಮಾಳದಲ್ಲಿ 1459 ಜಾನುವಾರುಗಳಿಗೆ 437 ಎಕರೆ ಕಾಯ್ದಿರಿಸಬೇಕಾಗಿತ್ತು. ಆದರೆ, 141 ಎಕರೆ ಉಳಿದಿದೆ.

ಹುಲ್ಲುಗಾವಲು ಇಲ್ಲದೇ ಪರದಾಟ: ಯಳಗೊಂಡಹಳ್ಳಿ ವೃತ್ತಕ್ಕೆ ಮಿಣಜೇನಹಳ್ಳಿ, ಯಳಗೊಂಡಹಳ್ಳಿ, ಪಿಚ್ಚಗುಂಟ್ಲಹಳ್ಳಿ, ಚಿಯಾಂಡಹಳ್ಳಿ, ಕೀಲುಹೊಳಲಿ, ದೊಡ್ಡಹೊನ್ನಶೆಟ್ಟಿಹಳ್ಳಿ, ಕೆಂಂಪಾಪುರ, ಹೊಸಕೆರೆ, ಪುತ್ತೇರಿ ಗ್ರಾಮಗಳಲ್ಲಿನ 1721 ಎಕರೆ ಗೋಮಾಳದಲ್ಲಿ 1459 ಜಾನುವಾರುಗಳಿಗೆ 437 ಎಕರೆ ಕಾಯ್ದಿರಿಸಬೇಕಾಗಿತ್ತು. ಆದರೆ, 141 ಎಕರೆ ಮಾತ್ರ ಉಳಿದಿದ್ದು, ಯಾವುದೇ ಹಳ್ಳಿಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಹುಲ್ಲುಗಾವಲು ಇಲ್ಲದೇ ರೈತರು, ದನಗಾಹಿಗಳು ಪರದಾಡುವಂತಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ