ಹುಣಸೂರು: ಚಿರತೆ ದಾಳಿಗೆ ಕರು ಬಲಿ
Team Udayavani, Sep 28, 2022, 12:57 PM IST
ಹುಣಸೂರು: ಮನೆ ಮುಂದೆ ಕಟ್ಟಿ ಹಾಕಿದ್ದ ಇಲಾತಿ ಕರುವನ್ನು ಚಿರತೆ ಕೊಂದು ಹಾಕಿರುವ ಘಟನೆ ತಾಲೂಕಿನ ಪೆಂಜಹಳ್ಳಿಯಲ್ಲಿ ಸೆ.27ರ ರಾತ್ರಿ ನಡೆದಿದೆ.
ಹನಗೋಡು ಹೋಬಳಿಯ ನಿವಾಸಿಯೊಬ್ಬರಿಗೆ ಸೇರಿದ ಇಲಾತಿ ಕರು ಇದಾಗಿದ್ದು, ಸಂಜೆ ಮನೆ ಬಳಿ ಹಸುಗಳನ್ನು ಕಟ್ಟಿ ಹಾಕಿದ್ದರು. ರಾತ್ರಿ ಹಸುಗಳ ಚೀರಾಟ ಕೇಳಿ ಹೊರ ಬಂದ ಸಂದರ್ಭ ಚಿರತೆ ಕಂಡು ಕೂಗಿಕೊಂಡಿದ್ದಾರೆ. ಕೂಗಾಟ ಕೇಳಿ ಕರುವಿನ ಕುತ್ತಿಗೆಯನ್ನು ಕಚ್ಚಿ ಎಳೆದೊಯ್ಯುಲು ಪ್ರಯತ್ನಿಸುತ್ತಿದ್ದ ಚಿರತೆ ಕರುವನ್ನು ಬಿಟ್ಟು ಪರಾರಿಯಾಗಿದೆ. ತಕ್ಷಣವೇ ಗ್ರಾಮಸ್ಥರು ಕರುವಿಗೆ ಉಪಚರಿಸಿದರಾದರೂ ಕರು ಸಾವನ್ನಪ್ಪಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೇವರ ಸ್ಮರಣೆಗೂ ಲಿಂಗತಟಸ್ಥ ಪದ ! ಇಂಗ್ಲೆಂಡ್ ಚರ್ಚ್ ಧರ್ಮಗುರುಗಳ ಸಲಹೆ
ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!
ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು
ರಾಶಿ ಫಲ: ಪರರಿಗೆ ಸಹಾಯ ಮಾಡಿದ ತೃಪ್ತಿ, ಉದ್ಯೋಗ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ
ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ