ಮೈತ್ರಿಗೆ ಪೂರಕ ವಾತಾವರಣ, ಗೆಲುವು ನಮ್ಮದೇ

Team Udayavani, Apr 21, 2019, 3:00 AM IST

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮೈತ್ರಿಗೆ ಉತ್ತಮ ವಾತಾವರಣವಿದ್ದು, ತಮ್ಮ ಗೆಲುವು ನಿಶ್ಚಿತ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ.

ಜೊತೆಗೆ ಪಿರಿಯಾಪಟ್ಟಣ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ನನಗೆ ಹೆಚ್ಚು ಮತಗಳು ಲಭ್ಯವಾಗಿದೆ. ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷಕ್ಕೆ ಪೂರಕವಾದ ವಾತಾವರಣವಿದ್ದು, ಈ ಚುನಾವಣೆಯಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಮತದಾರರು ಸೂಕ್ಷ್ಮಮತಿಗಳು: ನಾನು ಈವರೆಗೆ 6 ಲೋಕಸಭಾ ಚುನಾವಣೆ ಸೇರಿದಂತೆ ಒಟ್ಟು 9 ಚುನಾವಣೆ ಎದುರಿಸಿದ್ದು, ಮತದಾರರ ನಾಡಿಮಿಡಿತ ಅರ್ಥಮಾಡಿಕೊಂಡಿದ್ದೇನೆ, ಅದರ ಆಧಾರದ ಮೇಲೆ ಹೇಳುವುದಾದರೆ, ಮೈಸೂರು-ಕೊಡಗು ಮತದಾರರು ಸೂಕ್ಷ್ಮ ಮತಿಗಳಾಗಿದ್ದು, ಅವರು ಎಲ್ಲವನ್ನು ಆವಲೋಕಿಸುತ್ತಾರೆ.

ಶಿಸ್ತುಬದ್ಧ, ಯೋಗ್ಯ ಹಾಗೂ ಪ್ರಾಮಾಣಿಕ ಅಭ್ಯರ್ಥಿಯನ್ನು ಅವರು ಆಯ್ಕೆ ಮಾಡಿರುತ್ತಾರೆ ಎಂಬ ದೃಢ ನಂಬಿಕೆ ಇದೆ. ಜೊತೆಗೆ ನಮ್ಮ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರರಲ್ಲೂ ಪ್ರಜ್ಞಾವಂತಿಕೆ ಕಾಣಬಹುದಾಗಿದ್ದು, ಸಾರ್ವಜನಿಕ ಜೀವನದಲ್ಲಿ ಯಾರು ಬದ್ಧತೆಯಿಂದ ಹಾಗೂ ಆದರ್ಶರಾಗಿದ್ದಾರೊ ಅಂತಹವರನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃತಜ್ಞತೆ: ಚುನಾವಣೆ ಪ್ರಚಾರದಿಂದ ಮತದಾನದವರೆಗೂ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನಗೆ ಕೈಜೋಡಿಸಿದ್ದಾರೆ. ಜೊತೆಗೆ ಚುನಾವಣೆ ಯಶಸ್ಸಿಗೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಚುನಾವಣಾ ಆಯೋಗದ ಪಾತ್ರ ಮಹತ್ವದ್ದು. ಈ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಆರೋಪ ಸಲ್ಲದು: ಚುನಾವಣೆಯಲ್ಲಿ ಮತದಾರರ ಕೈ ಬೆರಳಿಗೆ ಹಚ್ಚುವ ಅಳಿಸಲಾಗದ ಶಾಯಿ ಮೈಸೂರಿನಲ್ಲಿ ತಯಾರಿಸುವುದು ನಮ್ಮ ಹೆಮ್ಮೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿಯ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಎಂದಿಗೂ ನಷ್ಟ ಅನುಭವಿಸಿಲ್ಲ.

ದೇಶ- ವಿದೇಶಗಳಿಗೆ ಅಳಿಸಲಾಗದ ಶಾಯಿಯನ್ನು ರಫ್ತು ಮಾಡುತ್ತಿದ್ದು, ಗುಣಮಟ್ಟದಲ್ಲಿ ಎಂದಿಗೂ ರಾಜಿಮಾಡಿಕೊಂಡಿಲ್ಲ. ಅಂತಹ ಕಾರ್ಖಾನೆ ಬಗ್ಗೆ ಆರೋಪ ಸಲ್ಲದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌, ಪಾಲಿಕೆ ಮಾಜಿ ಮೇಯರ್‌ ನರಸಿಂಹ ಅಯ್ಯಂಗಾರ್‌ ಮತ್ತಿತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

  • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

  • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

  • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

  • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

  • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...