ಸಾಂಸ್ಕೃತಿಕ ನಗರದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ


Team Udayavani, Aug 16, 2019, 3:00 AM IST

sanskrutika

ಮೈಸೂರು: ನಗರದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಎಲ್ಲೆಡೆ ಬೆಳಗ್ಗೆ ಸರಕಾರಿ ಕಚೇರಿ, ಸಾರ್ವಜನಿಕ ಸಂಘ ಸಂಸ್ಥೆಗಳು ಸೇರಿದಂತೆ ರಾಜಕೀಯ ಪಕ್ಷಗಳ ಕಚೇರಿ ಆವರಣಗಳಲ್ಲಿ ಧ್ವಜಾರೋಹಣ ನೆರವೇರಿಸಿ, ಸಿಹಿ ವಿತರಿಸಲಾಯಿತು. ಜೊತೆಗೆ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಸ್ವತ್ಛತೆ, ಉಪನ್ಯಾಸ, ಮಾಜಿ ಸೈನಿಕರಿಗೆ ಸನ್ಮಾನ ಮತ್ತು ಸರಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನಿ ಸಾಮಗ್ರಿ ವಿತರಣೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಜರುಗಿದವು.

ಗಾಂಧಿ ಪುತ್ಥಳಿಗೆ ಮಾಲಾರ್ಪಣೆ: ಮೈಸೂರಿನ ನಗರ ಮತ್ತು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ(ಸುಬ್ಬರಾಯನ ಕೆರೆ)ದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಗಾಂಧೀಜಿ ಪುತ್ಥಳಿಗೆ ಮಾರ್ಲಾಪಣೆ ಮಾಡಿದರು. ನಂತರ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಸಭೆ ನಡೆಸಿ ತಮ್ಮ ಹೋರಾಟದ ನೆನಪುಗಳನ್ನು ಸ್ಮರಿಸಿದರು.

ಇಂದು ಸ್ವಾತಂತ್ರ್ಯ ಹೋರಾಟದ ಫ‌ಲ ಫ‌‌ಲಿಸುತ್ತಿಲ್ಲ, ರಾಜಕಾರಣಿಗಳು ದರೋಡೆಕೋರಾರರಾಗುತ್ತಿದ್ದಾರೆ. ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವವೇ ತಿಳಿಯುತ್ತಿಲ್ಲ, ರಾಷ್ಟ್ರಪೇಮ, ರಾಷ್ಟ್ರೀಯತೆ, ನಿರ್ದಿಷ್ಟ ಗುರಿಯೇ ಇಲ್ಲ ಎಂದು ಮರುಕ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ಟಿ.ವೆಂಕಟಲಯ್ಯ, ರಂಗಶೆಟ್ಟಿ, ಡಾ.ಎಂ.ಜಿ.ಕೃಷ್ಣಮೂರ್ತಿ, ವೈ.ಸಿ.ರೇವಣ್ಣ, ಟಿ.ಪುಟ್ಟಣ್ಣ, ಲಿಂಗಯ್ಯ, ವೆಂಕಟ್ರಾದಿ, ಅಶ್ವತ್ಥ್ ನಾರಾಯಣ ಮತ್ತಿತತರು ಭಾಗವಹಿಸಿದ್ದರು.

ಕೆ.ಸಿ.ಬಡಾವಣೆಯಲ್ಲಿರುವ ವೀರ ಯೋಧ ಎ.ಪಿ.ಪ್ರಶಾಂತ್‌ ಉದ್ಯಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ನಂತರ ಸೇನೆಯಲ್ಲಿರುವ ಸೈನಿಕರಿಗೆ ಸನ್ಮಾನಿಸಲಾಯಿತು. ಸೇನೆಯ ಆರ್‌.ಟಿ. ರೇಜಿಮೆಂಟ್‌ನ ಮಿಥನ್‌ ಸಿಂಗ್‌, ಎಂಆರ್‌ಸಿ ಮಂಜು ಮತ್ತು ನಿವೃತ್ತ ಸೈನಿಕ ಎಸ್‌.ಅನಿಲ್‌ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಟ್ಟಿಗೆ ಗೂಡಿನ ಕನ್ನಡ ಸಮಿತಿಯಿಂದ ಮಾಜಿ ಸೈನಿಕರಾದ ಎ.ಬಿ.ಪುರುಷೋತ್ತಮ್‌, ವಾಸು, ರಾಜೇಗೌಡ, ರಾಜ ರಾಮ ನಾಯಕ, ದೀಪಕ್‌ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ನ್‌.ನೀಲಕಂಠ, ಪಾಲಿಕೆ ಸದಸ್ಯೆ ಛಾಯಾದೇವಿ, ಸತ್ಯಪ್ಪ ಮತ್ತಿತರಿದ್ದರು.

ಗಂಗೋತ್ರಿ ಶಾಲೆ, ಪಿಯು ಕಾಲೇಜು: ನಗರದ ಭೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್‌ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಪಿ. ವೆಂಕಟರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಾಜಿ ಮೇಯರ್‌ ಟಿ.ಬಿ. ಚಿಕ್ಕಣ್ಣ, ಪಾಲಿಕೆ ಸದಸ್ಯೆ ವೇದಾವತಿ, ಕಾಲೇಜಿನ ಪ್ರಾಂಶುಪಾಲ ಸುನೀಲ್‌ ಕುಮಾರ್‌, ಮುಖ್ಯಶಿಕ್ಷಕಿ ಝರೀನಾ ಇದ್ದರು.

ತ್ರಿವೇಣಿ ವೃತ್ತ: ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ನಗರದ ತ್ರಿವೇಣಿ ವೃತ್ತದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬಿಜೆಪಿ ಮುಖಂಡ ಸಂದೆಶ ಸ್ವಾಮಿ, ಪಾಲಿಕೆ ಸದಸ್ಯ ಸಾತ್ವಿಕ್‌ ಸಂದೇಶ್‌ ಸ್ವಾಮಿ, ಬಿ. ಆನಂದ್‌, ನಾಗೇಶ್‌ ಮತ್ತಿತರರು ಧ್ವಜಾರೋಹಣ ಮಾಡಿದರು. ಈ ಸಂದರ್ಭ ನಿವೃತ್ತ ಸೈನಿಕರಾದ ರವಿಂದ್ರಕುಮಾರ್‌ ಜಟ್ಟಿ, ಕಿರಣ್‌, ಶಿವು, ಧನರಾಜ್‌ ಇದ್ದರು.

ಎನ್‌ಆರ್‌ ಫೌಂಡೇಷನ್‌ನ ರಂಗರಾವ್‌ ಸ್ಮಾರಕ ವಿಕಲಚೇತನರ (ಆರ್‌ಎಂಎಸ್‌ಡಿ) ಶಾಲೆಯ ಆವರಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ದೃಷ್ಟಿ ವಿಶೇಷಚೇತನ ವಿದ್ಯಾರ್ಥಿನಿಯರು ಪೆರೇಡ್‌ ನಡೆಸಿ, ತ್ರಿವರ್ಣ ಧ್ವಜ ಹಿಡಿದು ನೃತ್ಯ ಪ್ರದರ್ಶಿಸಿದರು. ಬಕಾರ್ಡಿ ಇಂಡಿಯಾ ಸಂಸ್ಥೆಯ ಸುಶೀಲ್‌ ಕುಂದರ್‌, ಸಂಸ್ಥೆಯ ಆರ್‌.ಗುರು, ನರ ವಿಜ್ಞಾನಿ ಡಾ.ರತ್ನವಳ್ಳಿು ಧ್ವಜಾರೋಹಣ ನೆರವೇರಿಸಿದರು.

73 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಡಿಕೆ ಕನ್‌ಸ್ಟ್ರಕ್ಷನ್‌ ಸಂಸ್ಥೆಯಿಂದ ಬೆಳಗ್ಗೆ ಧ್ವಜಾರೋಹಣ ಹಾಗೂ ನ್ಯೂ ಕಾಂತರಾಜ ಅರಸ್‌ ರಸ್ತೆಯ ಸ್ವತ್ಛತಾ ಕಾರ್ಯಕ್ರಮ ನಡೆಸಲಾಯಿತು. ಸ್ವರೂಪ, ಆನಂದ್‌, ಗೋಪಾಲ್‌ ರಾಜೇ ಅರಸ್‌, ಪಾಲಿಕೆ ಸದದ್ಯರಾದ ಸೌಮ್ಯಾ ಉಮೇಶ್‌ ಕುಮಾರ್‌ ಲೋಕೇಶ್‌, ಇತಿಹಾಸ ತಜ್ಞ ಡಾ.ಎನ್‌.ಎಸ್‌.ರಂಗನಾಥ, ಸಂಸ್ಥೆಯ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ದಶರಥ ಇತರರಿದ್ದರು.

ಕೆಎಸ್‌ಒಯುನಲ್ಲಿ ಆಚರಣೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಿವೃತ್ತ ಬ್ರಿಗೇಡಿಯರ್‌ ವಿನೋದ್‌ ಕುಮಾರ್‌ ಅಡಪ್ಪ ಅವರು ಧ್ವಜಾರೋಹಣ ಮಾಡಿದರು. ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಅಧ್ಯಕ್ಷತೆ ವಹಿಸಿದರು.ಶ್ರೀ ನಟರಾಜ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕರ್ನಲ್‌ ಶ್ರೀಕರಪ್ರಭು ಧ್ವಜಾರೋಹಣ ನೆರವೇರಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಹಾಜನ ಎಜುಕೇಷನ್‌ ಸೊಸೈಟಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಿ.ವಿ.ಗೋಪಿನಾಥ್‌ ಧ್ವಜಾರೋಹಣ ನೆರವೇರಿಸಿದರು.

ಮೈಸೂರು ವಿವಿ: ಮೈಸೂರು ವಿಶ್ವವಿದ್ಯಾಲಯದಿಂದ ಕ್ರಾಫ‌ರ್ಡ್‌ ಭವನದ ಎದುರ ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಧ್ವಜಾರೋಹಣ ನೆರವೇರಿಸಿದರು. ಕುಲಸಚಿವ ಪ್ರೊ.ಲಿಂಗರಾಜ, ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್‌, ವಿದ್ಯಾರ್ಥಿ ಕ್ಷೇಮಪಾಲನ ನಿಧಿ ನಿರ್ದೇಶಕ ಸೇರಿದಂತೆ ಮತ್ತಿತರಿದ್ದರು.

ಶಾರದಾ ಸಂಸ್ಥೆ: ಶಾರದಾ ವಿಲಾಸ ವಿದ್ಯಾಸಂಸ್ಥೆಗಳಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್‌.ಪಾರ್ಥಸಾರಥಿ ಧ್ವಜಾರೋಹಣ ನೆರವೇರಿಸಿದರು. ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಹಟ್ಟಿ ಚಿನ್ನದ ಗಣಿಯ ನಿವೃತ ಕಾರ್ಯನಿರ್ವಾಹಕ ನಿರ್ದೇಶಕ ವೈ.ವೆಂಕಟೇಶ್‌ ಧ್ವಜಾರೋಹಣ ಮಾಡಿದರು.

ಹಾಡ್ವಿìಕ್‌ ಶಿಕ್ಷಣ ಸಂಸ್ಥೆ, ತರಳಬಾಳು ವಿದ್ಯಾಸಂಸ್ಥೆ, ಮರಿಮಲ್ಲಪ್ಪನವರ ಪ್ರೌಢಶಾಲೆ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಲಯನ್‌ ಕ್ಲಬ್‌ ಜೆ.ಪಿ. ನಗರ, ಜೆಎಸ್‌ಎಸ್‌ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಜೆಎಸ್‌ಎಸ್‌ ಪದವಿ ಪೂರ್ವ ಕಾಲೇಜು, ಗೋಪಾಲಸ್ವಾಮಿ ಶಿಶು ವಿಹಾರ ಸಂಸ್ಥೆಗಳು, ಶಕ್ತಿ ನಗರ ನಿವಾಸಿಗಳ ಹಿತರಕ್ಷಣಾ ಸಮಿತಿ, ಆರ್ಯ ಈಡಿಗರ ವಿದ್ಯಾರ್ಥಿ ನಿಲಯ, ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಎಂಜಿನಿಯರ್‌ಗಳ ಸಂಸ್ಥೆ, ಮೈಸೂರು ನಗರ ಪಾತ್ರೆ ವ್ಯಾಪಾರಿಗಳ ಸಂಘ, ಉದಯ ಗಿರಿ ಕನ್ನಡ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಸ್ವಾತಂತ್ರ್ಯ ದಿನದ ಪ್ರಯುಕ್ತ ರೋಟರಿ ಹರಿಟೇಜ್‌, ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್‌ ಅವರು ಸೈನಿಕರಿಗೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ಮೂದ್ರವಳ್ಳಿ ಬೈರಾಚಾರ್ಯ ದೇವಮ್ಮ ಸ್ಮಾರಕ ಸ್ವಾತಂತ್ರ್ಯ ದಿನಾಚರಣೆ ಕವಿ ಗೋಷ್ಠಿ ನಡೆಯಿತು.

ಗಾಂಧಿ ವೃತ್ತದಲ್ಲಿ ರಾರಾಜಿಸಿದ ಧ್ವಜ: ಗಾಂಧಿ ವೃತ್ತದ ಫ‌ುಟ್‌ ಪಾತ್‌ ವ್ಯಾಪಾರಿಗಳು ಸ್ವಾತಂತ್ರ್ಯ ದಿನ ಅಂಗವಾಗಿ ಗಾಂಧಿ ವೃತ್ತದ ಸುತ್ತಲೂ ತ್ರಿವರ್ಣ ಧ್ವಜ ಹೊದಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. 150 ಅಡಿ ಉದ್ದದ ತ್ರಿವರ್ಣ ಧ್ವಜ ದೊಡ್ಡ ಗಡಿಯಾರದಿಂದ ಹೊದಿಸಿದ್ದು, ಗಾಂಧಿ ವೃತ್ತದ ಬಳಿ ಪ್ರತ್ಯೇಕವಾಗಿ 120 ಅಡಿಯ ತ್ರಿವರ್ಣ ಧ್ವಜ ಹೊದಿಸಿ ಸಂಭ್ರಮಾಚರಣೆ ಮಾಡಿದರು. ಗಾಂಧಿ ವೃತ್ತದ ಫ‌ುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವ ಎಲ್ಲಾ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಯನ್ನು ತೆರೆಯದೆ ಒಟ್ಟಾಗಿ ಸೇರಿ 73ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.