Udayavni Special

ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ

Team Udayavani, Aug 9, 2020, 11:07 AM IST

ಜಿಲ್ಲೆಯಲ್ಲಿ ತುಸು ತಗ್ಗಿದ ಮಳೆಯ ಪ್ರಮಾಣ

ಮೈಸೂರು: ಕೇರಳದ ವೈನಾಡು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದ್ದು, ಕಬಿನಿ, ನುಗು, ತಾರಕ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭಾನುವಾರ ಕಪಿಲಾ ನದಿಯ ಹೊರ ಹರಿವಿನ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ಇದೆ.

ಕೇರಳದಲ್ಲಿ ಕಳೆದೊಂದು ವಾರದಿಂದ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯ ನೀರಿನ ಮಟ್ಟ ಏರಿಕೆ ಕಂಡಿದ್ದು, ಜಲಾಶಯದಿಂದ 70 ಸಾವಿರ ಕ್ಯೂಸೆಕ್‌ ನೀರನ್ನು ಕಪಿಲಾ ನದಿಗೆ ಹರಿ ಬಿಡಲಾಗಿದೆ. ಪರಿಣಾಮ ಮೈಸೂರು- ನಂಜನ ಗೂಡು ರಸ್ತೆ ಬಂದ್‌ ಆಗಿದೆ. ಅಪಾಯದ ಮಟ್ಟ ಮೀರಿ ಕಪಿಲಾ ನದಿ ಹರಿಯುತ್ತಿದ್ದು, ಮೈಸೂರು-ಊಟಿ ಹೆದ್ದಾರಿಗೆ ಕಪಿಲಾ ನದಿ ನೀರು ನುಗ್ಗಿದೆ. ಪರಿಣಾಮ ರಸ್ತೆ ಮೇಲೆ ಉಕ್ಕಿಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸು ತ್ತಿವೆ. ನಂಜನಗೂಡು ತಾಲೂಕು ಮಲ್ಲನ ಮೂಲೆ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು, ಕಾರು ಸೇರಿದಂತೆ ಎಲ್ಲಾ ವಾಹನ ಗಳು ಅಪಾಯದಲ್ಲಿಯೇ ಸಂಚರಿಸುವಂತಾಗಿದೆ.

ದೇಗುಲ ಜಲಾವೃತ: ನಂಜನಗೂಡಿನ ಮಲ್ಲನಮೂಲೆ ಮಠದ ಬಳಿಯ ಬಸವೇಶ್ವರ ದೇವಾ ಲಯ ಜಲಾವೃತವಾಗಿದ್ದು, ಕಬಿನಿ ಜಲಾಶಯದಿಂದ ಮತ್ತಷ್ಟು ನೀರನ್ನು ಬಿಟ್ಟರೆ ಹೆದ್ದಾರಿ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೆ ಮಲ್ಲನಮೂಲೆ ಮಠದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಾರ್ಗ ಬದಲಾವಣೆ: ಕಪಿಲಾ ನದ ಉಕ್ಕಿ ಹರಿ ಯುತ್ತಿರುವ ಪರಿಣಾಮ ಮೈಸೂರು-ಸುತ್ತೂರು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸುತ್ತೂರಿನಿಂದ ಮೈಸೂರು ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಪ್ರಯಾಣಿಕರಿಗೆ ತಾಯೂರು ಮಾರ್ಗದಿಂದ ಕುಪ್ಪೇಗಾಲ ಸೇತುವೆ ಮೂಲಕ ಸಾಗುವಂತೆ ತಿಳಿಸಲಾಗಿದೆ. ಜೊತೆಗೆ ಈಗಾಗಲೇ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಮುಡಿಕಟ್ಟೆ ಅರ್ಧಭಾಗ, ಹೆಜ್ಜಿಗೆ ಸೇತುವೆ, ಸೋಪಾನಕಟ್ಟೆ, ಹದಿನಾರು ಕಾಲು ಕಂಬ ಸೇರಿ ದಂತೆ ದೇಗುಲ ಸಮೀಪದ ಕೆಲ ಬಡಾವಣೆಗಳು ಮುಳುಗಡೆಯಾಗಿವೆ.

ಹಳ್ಳಿಗಳ ಸಂಪರ್ಕ ಕಡಿತ: ಹುಣಸೂರು ತಾಲೂಕಿನಲ್ಲಿ ಲಕ್ಷ್ಮಣ ತೀರ್ಥ ನದಿ ಉಕ್ಕಿಹರಿಯುತ್ತಿದ್ದು, ತಾಲೂಕಿನ ಹುಣಸೂರು- ಹನಗೋಡು, ಹನಗೋಡು – ಕೊಳುವಿಗೆ, ಕೊಳುವಿಗೆ-ಕೋಣನಹೊಸ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ 30ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ ಗೊಂಡಿದ್ದು, ನೆರೆ ಹಾವಳಿ ಪ್ರದೇಶದ ಜನ-  ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಗಿದೆ.

ರಸ್ತೆ ಸಂಪರ್ಕ ಬಂದ್‌: ಪಿರಿಯಾಪಟ್ಟಣ ತಾಲೂಕಿನಲ್ಲಿ ಮಳೆ ತುಸು ಕಡಿಮೆಯಾಗಿದ್ದರೂ, ಕಾವೇರಿ ನದಿ ಆರ್ಭಟ ಮುಂದುವರಿದಿದೆ. ತಾಲೂಕಿನ ಆವರ್ತಿ-ಕೊಪ್ಪ, ದಿಂಡಗಾಡು-ಮುತ್ತಿನಮುಳು ಸೋಗೆ, ಕೊಪ್ಪ-ರಾಣಿಗೇಟ್‌ ಮಾರ್ಗದ ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಬಂದ್‌ ಆಗಿದೆ. ಜೊತೆಗೆ ಕಾವೇರಿ ನದಿ ಪಾತ್ರದಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.

ಕೇರಳ ವೈನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಕಬಿನಿ ಜಲಾ ಶಯಕ್ಕೆ ಒಳ ಹರಿವು ಸ್ವಲ್ಪ ಮಟ್ಟಿಗೆ ತಗ್ಗಿದೆ ಎಚ್‌.ಡಿ. ಕೋಟೆ ತಾಲೂಕಿ ನಲ್ಲಿ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಬಿದರಹಳ್ಳಿ ಸರ್ಕಲ್‌- ಎನ್‌. ಬೇಗೂರು, ಮಾದಪುರ- ಕೆ.ಬೆಳ ತೂರು ಸಂಪರ್ಕ ರಸ್ತೆ ಬಂದ್‌ ಆಗಿದ್ದು, 25ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅರ್ಕೇಶ್ವರ ದೇವಸ್ಥಾನ ಘಟನೆ ನೆನಪು ಮಾಸು ಮುನ್ನವೇ ಮತ್ತೊಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು

ಅರ್ಕೇಶ್ವರ ದೇವಸ್ಥಾನ ಘಟನೆ ನೆನಪು ಮಾಸು ಮುನ್ನವೇ ಮತ್ತೊಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು

vishnuvardhan

ಹೃದಯವಂತ ವಿಷ್ಣು ಜನ್ಮದಿನ: ಅವರ ಜೀವನಚರಿತ್ರೆ ಹಾಗೂ ನೋಡಲೇಬೇಕಾದ ಚಿತ್ರಗಳು ಇಲ್ಲಿವೆ !

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ಕೇಂದ್ರದ ಕೃಷಿ ಕ್ಷೇತ್ರದ ಮಸೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹುಣಸೂರು: ಗಂಧದ ಮರದ ತುಂಡುಗಳ ಅಕ್ರಮ ಸಾಗಾಟ; ಓರ್ವನ ಬಂಧನ; ನಾಲ್ವರು ಪರಾರಿ

ಹುಣಸೂರು: ಗಂಧದ ಮರದ ತುಂಡುಗಳ ಅಕ್ರಮ ಸಾಗಾಟ; ಓರ್ವನ ಬಂಧನ; ನಾಲ್ವರು ಪರಾರಿ

ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಬಂಧನ! ಬಂಧಿತರಿಂದ ಸೊತ್ತುಗಳ ವಶ

ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಬಂಧನ! ಬಂಧಿತರಿಂದ ಸೊತ್ತುಗಳ ವಶ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಹೊರೆಯಾದ ಉನ್ನತ ಶಿಕ್ಷಣ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತಷ್ಟು ಹೊರೆಯಾದ ಉನ್ನತ ಶಿಕ್ಷಣ

MYSURU-TDY-3

19ರಿಂದ ಕಿಸಾನ್‌ ವಿಶೇಷ ರೈಲು ಸೇವೆ ಆರಂಭ

ನಾಳೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಹಲವುಕಾರ್ಯಕ್ರಮ: ಶಾಸಕ ರಾಮದಾಸ್‌

ನಾಳೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಹಲವುಕಾರ್ಯಕ್ರಮ: ಶಾಸಕ ರಾಮದಾಸ್‌

MUST WATCH

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary

udayavani youtube

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್ ಸ್ಪಷ್ಟನೆಹೊಸ ಸೇರ್ಪಡೆ

ಅರ್ಕೇಶ್ವರ ದೇವಸ್ಥಾನ ಘಟನೆ ನೆನಪು ಮಾಸು ಮುನ್ನವೇ ಮತ್ತೊಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು

ಅರ್ಕೇಶ್ವರ ದೇವಸ್ಥಾನ ಘಟನೆ ನೆನಪು ಮಾಸು ಮುನ್ನವೇ ಮತ್ತೊಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು

vishnuvardhan

ಹೃದಯವಂತ ವಿಷ್ಣು ಜನ್ಮದಿನ: ಅವರ ಜೀವನಚರಿತ್ರೆ ಹಾಗೂ ನೋಡಲೇಬೇಕಾದ ಚಿತ್ರಗಳು ಇಲ್ಲಿವೆ !

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ಕೇಂದ್ರದ ಕೃಷಿ ಕ್ಷೇತ್ರದ ಮಸೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

bng-tdy-3

ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಿಸುವ ಗುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.