Udayavni Special

ಕಪಿಲಾ ನದಿಯಲ್ಲಿ ವೈಭವದ ಶ್ರೀಕಂಠೇಶ್ವರನ ತೆಪ್ಪೋತ್ಸವ


Team Udayavani, Dec 14, 2019, 3:00 AM IST

kapila

ನಂಜನಗೂಡು: ಪಂಚ ಮಹಾರಥೋತ್ಸವ ಅಂಗವಾಗಿ ಶ್ರೀಕಂಠೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಶುಕ್ರವಾರ ಸಡಗರ, ಸಂಭ್ರಮದಿಂದ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಈ ವೈಭವದ ಶ್ರೀಕಂಠನ ಉತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.

ಸಂಜೆ 7.30ಕ್ಕೆ ಸರಿಯಾಗಿ ದೇಗುಲದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್‌ ಅವರು ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿದ್ದಲ್ಲದೇ ಶ್ರೀಕಂಠಮುಡಿ ಧಾರಣೆಯಿಂದ ವಿಶೇಷವಾಗಿ ಕಂಗೊಳಿಸುತ್ತಿತ್ತು. ಈ ದೃಶ್ಯವನ್ನು ವೀಕ್ಷಿಸಿದ ಭಕ್ತರು ಭಾವಪರವಶರಾದರು.

ನಂತರ ವಿದ್ಯುತ್‌ ದೀಪದಿಂದ ಅಲಂಕೃತಗೊಂಡ ತೇಲುವ ವಾಹನದಲ್ಲಿ ಶ್ರೀ ಕಂಠೇಶ್ವರಸ್ವಾಮಿಯನ್ನು ಪ್ರತಿಷ್ಠಾಪಿಸಿ, ಕಪಿಲಾ ನದಿಯಲ್ಲಿ ಮೂರು ಸುತ್ತು ಪ್ರದಕ್ಷಣೆ ಮಾಡಲಾಯಿತು. ನಂಜನಗುಡಿನಾಧಿಶ್ವರ ನಂಜುಂಡಪ್ಪ ದಂಪತಿಗಳ ಈ ಜಲ ಉತ್ಸವದ ಸೊಬಗ‌ನ್ನು ಕಪಿಲಾ ನದಿ ಸ್ನಾನಘಟ್ಟದ ಸುತ್ತ ನೆರೆದಿದ್ದ ಭಕ್ತರು ಸೋಪಾನಕಟ್ಟೆ ಸೇರಿದಂತೆ ನದಿಯ ಇಕ್ಕೆಲಗಳ ದಂಡೆಯ ಮೇಲೆ ಕುಳಿತು ಕಣ್ತುಂಬಿಕೊಂಡರು.

ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜ್ಜಿಗೆ, ತೋರೆಮಾವು, ಕೆಂಪಿಸಿದ್ದನಹುಂಡಿ, ಬಸವನಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆ ಕಡೆ ದಡದಲ್ಲಿ ನಿಂತು ಶ್ರೀಕಂಠೇಶ್ವರನ ವೈಭವದ ತಪ್ಪೋತ್ಸವವನ್ನು ವೀಕ್ಷಣೆ ಮಾಡಿ ಧನ್ಯತಾ ಭಾವ ಮೆರೆದರು. ಜಾತ್ರಾ ಮಹೋತ್ಸವ ಪ್ರಯುಕ್ತ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮುಡಿ ಸೇವೆ ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಿ ಪುನೀತರಾದರು.

ಈ ಸಂದ‌ರ್ಭದಲ್ಲಿ ದೇವಾಲಯದ ನೂತನ ಕಾರ್ಯನಿರ್ವಹಕ ಅಧಿಕಾರಿ ಶಿವಕುಮಾರಯ್ಯ, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶಿವನಂಜು, ಸದಸ್ಯರಾದ ಶ್ರೀಧರ್‌, ಮಂಜಳಾ ಮಧು, ಇಂಧನ್‌ ಭಾಬು, ಪುಟ್ಟನಿಂಗ ಶೆಟ್ಟಿ , ಶಶಿರೇಖಾ, ದೇವಾಲಯದ ಸ್ಥಳಪುರೋಹಿತ ಸಪ್ತರ್ಷಿ ಜೋಯಿಸ್‌, ಅರ್ಚಕರಾದ ನೀಲಕಂಠ ದೀಕ್ಷಿತರು, ವಿಶ್ವಾನಾಥ ದೀಕ್ಷಿತರು, ಸದಾಶಿವು ಸೇರಿದಂತೆ ಅರ್ಚಕ ವೃಂದ ಹಾಗೂ ಅಪಾರ ಭಕ್ತ ಸಮೂಹ ನೆರೆ‌ದಿತ್ತು.

ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೋಲಿಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಟಾಪ್ ನ್ಯೂಸ್

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಮೊದಲ ಬಾರಿ ಸಚಿವರಾದವರು

ಮೊದಲ ಬಾರಿ ಸಚಿವರಾದವರು

ಬಿಎಸ್‌ವೈ ಸಂಪುಟದ ಪಡಿಯಚ್ಚು

ಬಿಎಸ್‌ವೈ ಸಂಪುಟದ ಪಡಿಯಚ್ಚು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಕೋವಿಡ್, ಪ್ರವಾಹವೇ ಹೊಸ ಸಂಪುಟದ ಮುಂದಿರುವ ಸವಾಲು

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt-Hospital

ವರ್ಷ ಕಳೆದರೂ ಸಾರ್ವಜನಿಕ ಆಸ್ಪತ್ರೆ ದುರಸ್ತಿ ಕಾರ್ಯ ಅಪೂರ್ಣ

surjewala

ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ ಕಿಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

Mysore News, Piriyapattana Udayavani

ಕರಡಿಲಕ್ಕನ ಕೆರೆ ಏತನೀರಾವರಿ ಘಟಕದಿಂದ  ನೀರು ಬಿಡುವ ಕಾರ್ಯಕ್ಕೆ ಶಾಸಕ ಕೆ.ಮಹದೇವ್ ಚಾಲನೆ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

6 ಎಂಪಿಗಳ ಅಮಾನತು

6 ಎಂಪಿಗಳ ಅಮಾನತು

ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ  ಸಡಿಲ!

ದ.ಕ.ದಲ್ಲಿ ನಿರ್ಬಂಧ ಬಿಗಿ; ಕಾಸರಗೋಡಿನಲ್ಲಿ  ಸಡಿಲ!

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಮೊದಲ ಬಾರಿ ಸಚಿವರಾದವರು

ಮೊದಲ ಬಾರಿ ಸಚಿವರಾದವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.