343 ಮಕ್ಕಳು ಶಾಲೆಯಿಂದ ಹೊರಗೆ: ಸಮೀಕ್ಷೆಯಿಂದ ಬಹಿರಂಗ

Team Udayavani, Jan 12, 2019, 12:04 PM IST

ಲಿಂಗಸುಗೂರು: ಶಾಲೆಯಲ್ಲಿ ಸತತ ಗೈರು ಹಾಜರಿ ಸೇರಿ ಇನ್ನಿತರ ವಿಷಯಗಳನ್ನು ದೃಷ್ಠಿಕೋನದಲ್ಲಿಟ್ಟುಕೊಂಡ ಶಿಕ್ಷಣ ಇಲಾಖೆ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ತಾಲೂಕಿನಲ್ಲಿ 343 ಮಕ್ಕಳು ಅಕ್ಷರ ಕಲಿಕೆಯಿಂದ ದೂರುಳಿದಿರುವುದು ಪತ್ತೆಯಾಗಿದೆ.

ತಾಲೂಕಿನಲ್ಲಿ 230 ಸರ್ಕಾರಿ ಪ್ರಾಥಮಿಕ, 35 ಪ್ರೌಢಶಾಲೆ, 9 ಸರ್ಕಾರಿ ಪದವಿ ಪೂರ್ವ ಕಾಲೇಜಗಳಿವೆ. ಅನುದಾನಿತ 9 ಪ್ರಾಥಮಿಕ, 9 ಪ್ರೌಢಶಾಲೆ ಸೇರಿ ತಾಲೂಕಿನಲ್ಲಿ 75,123 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 39,343 ಗಂಡು, 35, 780 ಹೆಣ್ಣು ಮಕ್ಕಳು ಅಕ್ಷರ ಕಲಿಕೆಯಲ್ಲಿ ತೊಡಗಿದ್ದಾರೆ.

ತಾಲೂಕಿನ ಶಾಲೆಗಳಲ್ಲಿ ದಾಖಲಾತಿಗಳಿಗೂ ಮಕ್ಕಳ ಹಾಜರಾತಿಗೂ ವ್ಯತ್ಯಾಸಗಳು ಕಂಡುಬಂದಿದೆ. ಹಾಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ನಡೆಸಿದ್ದರಿಂದ ತಾಲೂಕಿನಲ್ಲಿ 343 ವಿದ್ಯಾರ್ಥಿಗಳಲ್ಲಿ 175 ಗಂಡು, 167 ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರುಳಿದಿದ್ದಾರೆ. ಪರಿಶಿಷ್ಟ ಜಾತಿ 99 ಮಕ್ಕಳು, ಪರಿಶಿಷ್ಟ ಪಂಗಡದ 92 ಮಕ್ಕಳು, ಪ್ರವರ್ಗ-1 49 ಮಕ್ಕಳು, ಇತರೆ ಹಿಂದುಳಿದ ವರ್ಗಗಳ 70 ಮಕ್ಕಳು, ಮುಸ್ಲಿಂ 32 ಮಕ್ಕಳು ತಮ್ಮ ಶಾಲೆಯಿಂದ ಹೊರಗುಳಿದಿದ್ದಾರೆ. ತಾಲೂಕಿನ ಸರ್ಜಾಪುರದಲ್ಲಿ 48, ಕಾಚಾಪುರ 11, ಮಾವಿನಭಾವಿ 6, ನೀರಲಕೇರಾ 8, ಕುಮಾರಖೇಡ್‌ 12, ತೊಡಕಿ ತಾಂಡಾ 9, ನಾಗಲಾಪುರ, ಲಿಂಗಸುಗೂರು ಪಟ್ಟಣ, ಕಸಬಾಲಿಂಗಸುಗೂರು, ಛತ್ತರ ತಾಂಡಾ, ಹಡಗಲಿ, ದೇವರಭೂಪುರ, ಹಟ್ಟಿ, ತಿಮ್ಮಾಪುರ ಸೇರಿ ಇನ್ನಿತರ ಗ್ರಾಮಗಳಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳೇ ಶಾಲೆಯಿಂದ ಹೊರಗುಳಿದಿದ್ದಾರೆ.

6-14 ವರ್ಷ ವಯೋಮಾನದ ಎಲ್ಲ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವುದು ಶಿಕ್ಷಣ ಹಕ್ಕು ಕಾಯ್ದೆ ಮುಖ್ಯ ಉದ್ದೇಶ. ಸರ್ಕಾರ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಕೋಟ್ಯಂತರ ರೂ.ಗಳನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ಆದರೂ ಶಿಕ್ಷಣಕ್ಕೆ ಒತ್ತು ಇಲ್ಲದಾಗಿದೆ. ಮಕ್ಕಳನ್ನು ಶಾಲೆಯಿಂದ ಹೊರಗುಳಿಯಲು ಪೋಷಕರ ನಿರಾಸಕ್ತಿ ಕಾರಣವೇ ಹೆಚ್ಚು ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದಲ್ಲದೆ ಇತರೆ ದುಡಿಮೆಯಲ್ಲಿ, ಬಾಲಕಾರ್ಮಿಕ, ಚಿಂದಿ ಆಯುವುದು. ವಲಸೆ ಜೀವನ, ತೀವೃ ಅಂಗವಿಕಲತೆ, ಮಕ್ಕಳ ನಿರಾಸಕ್ತಿ, ಕುಟಂಬದ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಗು ಪ್ರೌಢಾವಸ್ಥೆ ತಲುಪಿದ್ದರಿಂದ ಶಾಲೆಗೆ ಕಳುಹಿಸಲು ಪಾಲಕರ ಹಿಂದೇಟು ಒಂದು ಕಾರಣವಾಗಿದೆ.

2018-19ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ದಾಖಲಾತಿ ಆಂದೋಲನ ನಡೆಸಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಲಿಂಗಸುಗೂರು: ಕಡಲೆ ಖರೀದಿ ಕೇಂದ್ರ ಆರಂಭಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದ ಮುಖಂಡರು ಸೋಮವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ...

  • ದೇವದುರ್ಗ: ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ....

  • ರಾಯಚೂರು: ಮಹಿಳಾ ಸಶಕ್ತೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಂತರ ರೂ. ವ್ಯಯಿಸಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸರಿಯಾಗಿ...

  • ಮಸ್ಕಿ: ಮನುಷ್ಯನಿಗೆ ಆರೋಗ್ಯವೇ ಸಂಪತ್ತು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು. ಪಟ್ಟಣದ...

  • ರಾಯಚೂರು: ನಗರ ಸೇರಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ 71ನೇ ಗಣರಾಜ್ಯೋತ್ಸವವನ್ನು ರವಿವಾರ ವಿಜೃಂಭಣೆಯಿಂದ ಆಚರಿಸಲಾಯಿತು....

ಹೊಸ ಸೇರ್ಪಡೆ