ಕನ್ನಡ ಭವನಕ್ಕೆ ಪೀಠೊಪಕರಣಗಳಿಗೆ ಅನುದಾನ ನೀಡಲು ಮನವಿ
Team Udayavani, Apr 28, 2022, 12:59 PM IST
ರಾಯಚೂರು: ನಗರದ ಕನ್ನಡ ಭವನಕ್ಕೆ ಪೀಠೊಪಕರಣನ್ನು ಒದಗಿಸುವುದು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳ ನಡೆಸಲು ಅಗತ್ಯ ಅನುದಾನ ಕಲ್ಪಿಸಬೇಕು ಎಂದು ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿದ್ದು, ಕನ್ನಡಪರ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳಿಗಾಗಿ ಅನುದಾನದ ಅವಶ್ಯಕತೆ ಇದೆ. ಇನ್ನೂ ಕನ್ನಡ ಭವನದಲ್ಲಿ ಕೆಲವೊಂದು ಪೀಠೊಪರಣಗಳನ್ನು ಒದಗಿಸಿದರೆ, ಸಾಹಿತ್ಯಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಪರಿಷತ್ತಿನ ಚಟುವಟಿಕೆಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಜಿಲ್ಲಾ ಕೋಶಾಧ್ಯಕ್ಷ ಜಿ ಸುರೇಶ್, ಹಿರಿಯ ಮಾರ್ಗದರ್ಶಕರಾದ ಹನುಮಂತಪ್ಪ ಗವಾಯಿ, ನಾಗಪ್ಪ ಹೊರಪ್ಯಾಟಿ, ತಾಲೂಕು ಗೌರವ ಕಾರ್ಯದರ್ಶಿ ಆಂಜನೇಯ ಕಾವಲಿ, ರಾವುತರಾವ್ ಬರೂರ, ಗೌರವ ಕೋಶಾಧ್ಯಕ್ಷ ರುದ್ರಯ್ಯ ಗುಣಾರಿ, ಮುರುಳಿಧರ್ ಕುಲಕರ್ಣಿ, ಲಕ್ಷ್ಮೀಕಾಂತರೆಡ್ಡಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭವಿಷ್ಯದ ಸಂಗೀತ ಕ್ಷೇತ್ರಕ್ಕೆ ಕರಾವಳಿ ಕೊಡುಗೆ
ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ
ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್
ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ
ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ
ಹೊಸ ಸೇರ್ಪಡೆ
ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು: ಸಿದ್ದುಗೆ ಈಶ್ವರಪ್ಪ ಟಾಂಗ್
ಕುಂದು ಕೊರತೆ ಪರಿಶೀಲನೆ: ಸೌಲಭ್ಯ ಒದಗಿಸಲು ಆಗ್ರಹ
ಕಡಬ: ರಸ್ತೆ ಬದಿಯ ಜ್ಯೂಸ್ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್
ಸಾಗರ: ಅರುಣ್ ಕುಗ್ವೆ ಬಂಧನಕ್ಕೆ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್ಪಿಗೆ ಮನವಿ
ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ