ಬೈಪಾಸ್‌ ರಸ್ತೆ ಬೇಡಿಕೆ ಈಡೇರುವ ನಿರೀಕ್ಷೆ 


Team Udayavani, Dec 28, 2021, 1:42 PM IST

ಬೈಪಾಸ್‌ ರಸ್ತೆ ಬೇಡಿಕೆ ಈಡೇರುವ ನಿರೀಕ್ಷೆ 

ಸಿಂಧನೂರು: ಟ್ರ್ಯಾಕ್‌ ದಟ್ಟಣೆ ತಪ್ಪಿಸಲು ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣವಾಗಬೇಕೆಂಬ ಬಹುದಿನಗಳ ಬೇಡಿಕೆ ಈಡೇರುವ ಮುನ್ಸೂಚನೆ ದಟ್ಟವಾಗಿದ್ದು, ಭೂಸ್ವಾ ಧೀನಕ್ಕೆ ಅಗತ್ಯವಿದ್ದ ಅನುದಾನ ನೀಡಲು ರಾಜ್ಯ ಸರಕಾರ ಅಸ್ತು ಎಂದಿದೆ.

ರಾಜ್ಯ-ಕೇಂದ್ರ ಸರಕಾರಶೇ.50/50 ಆಧಾರದಲ್ಲಿ ಭೂಸ್ವಾಧೀನಕ್ಕೆ ಹಣ ವಿನಿಯೋಗಿಸ ಬೇಕಿದ್ದು, ರಾಜ್ಯ ಸರಕಾರ ತನ್ನ ಪಾಲಿನ ಹಣ ಕೊಡಲುಮುಂದಾಗಿದೆ. ಕಳೆದ ಫೆಬ್ರವರಿಯಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದ ರಾಜ್ಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನಕ್ಕೆ ತಗಲುವ 87.55 ಕೋಟಿ ರೂ. ಅನುದಾನ ನಿರೀಕ್ಷೆಯಲ್ಲಿತ್ತು.ಈ ನಿಟ್ಟಿನಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕ ವೆಂಕಟ ರಾವ್‌ ನಾಡಗೌಡ ಪ್ರಯತ್ನದಲ್ಲಿದ್ದರು. ಇದಕ್ಕೆ ಕೊನೆಗೂ ಆರ್ಥಿಕ ಇಲಾಖೆ ಒಪ್ಪಿಗೆ ದೊರೆತಿದ್ದು,ಬೈಪಾಸ್‌ ಬೇಡಿಕೆ ಈಡೇರುವ ನಿರೀಕ್ಷೆಗರಿಗೆದರಿದೆ.

ಏನಿದು ಯೋಜನೆ?: ರಾಜ್ಯ ಹೆದ್ದಾರಿ ಪ್ರಾಧಿಕಾರ ಮುಖ್ಯ ಎಂಜಿನಿಯರ್‌ ರೂಪಿಸಿರುವ ಕ್ರಿಯಾ ಯೋಜನೆ ಪ್ರಕಾರಬೈಪಾಸ್‌ಗೆ 12.430 ಎಕರೆ ಜಮೀನು ಭೂಸ್ವಾಧೀನವಾಗಬೇಕಿದೆ. ಪ್ರತಿ ಎಕರೆಗೆ 12 ಲಕ್ಷ 35 ಸಾವಿರ ರೂ. ಮಾರುಕಟ್ಟೆ ಮೌಲ್ಯಇರುವ ಭೂತಲದಿನ್ನಿ ಗ್ರಾಮ ವ್ಯಾಪ್ತಿ, 12 ಲಕ್ಷ ರೂ. ಮೌಲ್ಯ ಇರುವ ಸಿಂಧನೂರುನಗರ ವ್ಯಾಪ್ತಿಯ ಜಮೀನು, 10 ಲಕ್ಷ 86ಸಾವಿರ ರೂ. ಮಾರುಕಟ್ಟೆ ಮೌಲ್ಯ ಇರುವಹೊಸಳ್ಳಿ ಗ್ರಾಮದ ವ್ಯಾಪ್ತಿ, 12 ಲಕ್ಷ 35ಸಾವಿರ ರೂ. ಮೌಲ್ಯವಿರುವ ಸಾಸಲಮರಿ ವ್ಯಾಪ್ತಿಯಲ್ಲಿ ಜಮೀನನ್ನು ಸ್ವಾಧೀನ ಪಡೆಯಬೇಕಿದೆ. ಈ ಎಲ್ಲ ಜಮೀನು ಸ್ವಾಧೀನವಾದರೆ ಗಂಗಾವತಿ-ರಾಯಚೂರು ರಸ್ತೆಯ ಹೊರಭಾಗದಿಂದ ನೇರವಾಗಿ ಜೇವರ್ಗಿ ಹೆದ್ದಾರಿ-150ಎಗೆ ಸಂಪರ್ಕ ದೊರೆಯಲಿದೆ.

ಡಿಸೆಂಬರ್‌ನಲ್ಲಿ ಒಪ್ಪಿಗೆ: ಕಳೆದ ಹಲವು ತಿಂಗಳಿಂದ ರಾಜ್ಯ ಸರಕಾರದಿಂದಅನುದಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದ್ದವು. ಆದರೆ ಆರ್ಥಿಕ ಇಲಾಖೆಸಿಂಧನೂರು ಬೈಪಾಸ್‌ಗೆ ಬೇಕಾಗುವ87.55 ಕೋಟಿ ರೂ.ಗಳಲ್ಲಿ ಶೇ.50 ಭರಿಸಲು ಡಿಸೆಂಬರ್‌ 6, 2021ರಂದು ಒಪ್ಪಿಗೆ ನೀಡಿದೆ. ಈ ಆದೇಶದ ಪ್ರಕಾರ ರಾಜ್ಯ ಸರಕಾರದಿಂದ ಭೂಸ್ವಾಧೀನಕ್ಕಾಗಿ 43.77 ಕೋಟಿ ರೂ. ದೊರೆಯಲಿದೆ. ಕೇಂದ್ರ ಸರಕಾರ 150-ಎ ಜೇವರ್ಗಿ ಮಾರ್ಗದ ಎಲ್ಲ ಬೈಪಾಸ್‌ ನಿರ್ಮಾಣಕ್ಕೆ ಬೇಕಾಗುವ ಮೊತ್ತ ಭರಿಸಲು ಸಿದ್ಧವಿದೆ. ಅಧಿಕಾರಿಗಳು ಹಣಕಾಸಿನ ಕೊರತೆಯಿಲ್ಲವೆಂಬ ಭರವಸೆ ವ್ಯಕ್ತಪಡಿಸಿದ್ದರು. ರಾಜ್ಯ ಸರಕಾರಬೈಪಾಸ್‌ಗೆ ಬೇಕಾಗುವ ಜಮೀನುಒದಗಿಸುವ ಕೆಲಸ ಮಾಡಿಕೊಡಬೇಕೆಂಬಒತ್ತಾಯವಿತ್ತು. ಇದೀಗ ಆರ್ಥಿಕಇಲಾಖೆಯೇ ಸಮ್ಮತಿ ಸೂಚಿಸಿರುವುದರಿಂದಬೈಪಾಸ್‌ಗೆ ಎದುರಾಗಿದ್ದ ವಿಘ್ನ ನಿವಾರಣೆಯಾದಂತಾಗಿದೆ.

ಸರ್ವೇ ನಂಬರ್‌ಗಳು ಗೌಪ್ಯ :  ಸಿರುಗುಪ್ಪ ಮಾರ್ಗದ ಪವರ್‌ಗ್ರಿಡ್‌ ಪ್ರದೇಶದಿಂದ ಹಾಯ್ದು ಬರಲಿರುವ ಬೈಪಾಸ್‌, ಇಂಡಸ್ಟ್ರಿಯಲ್‌ ಏರಿಯಾದ ಸಮೀಪ ಗಂಗಾವತಿ ರಸ್ತೆಯಲ್ಲಿ ಕ್ರಾಸ್‌ ಆಗಿ, ಭೂತಲದಿನ್ನಿ-ಕಲ್ಲೂರು ಮಧ್ಯಭಾಗದಿಂದ ದೇವರಗುಡಿ, ಬಪ್ನೂರು, ಕುಷ್ಟಗಿ ರಸ್ತೆ ಮೂಲಕ ಹಾಯ್ದು ಹೋಗಲಿದೆ ಎಂದು ಅಂದಾಜಿಸಲಾಗಿದೆ. ಜಮೀನಿನ ಸರ್ವೇ ನಂಬರ್‌ ಇತರೆ ಮಾಹಿತಿಯನ್ನು ನೋಟಿμಕೇಶನ್‌ ಪೂರ್ವ ಬಯಲುಗೊಳಿಸದೇ ಗೌಪ್ಯವಾಗಿರಿಸಲಾಗಿದೆ. ರಿಯಲ್‌ಎಸ್ಟೇಟ್‌ ದಂಧೆ ಜಮೀನಿಗೆ ಲಗ್ಗೆ ಹಾಕುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕಳೆದ ಒಂದು ವರ್ಷದಿಂದ ಭೂಸ್ವಾಧೀನಕ್ಕೆ ಬೇಕಾದ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿತ್ತು. ಬಸವರಾಜ ಬೊಮ್ಮಾಯಿ ಅವರ ಸರಕಾರ ಬಂದ ನಂತರ ಒಪ್ಪಿಗೆ ಸಿಕ್ಕಿದ್ದು, ಹಣ ನೀಡಲು ಆರ್ಥಿಕ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ. -ಸಂಗಣ್ಣ ಕರಡಿ, ಸಂಸದರು, ಕೊಪ್ಪಳ ಲೋಕಸಭಾ ಕ್ಷೇತ್ರ

-ಯಮನಪ್ಪ ಪವಾರ

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.