Udayavni Special

ತೈಲ ಬೆಲೆ ಹೆಚ್ಚಳ ಖಂಡಿಸಿ ಇಂದು ಕಾಂಗ್ರೆಸ್‌ ಪ್ರತಿಭಟನೆ

Team Udayavani, Jun 29, 2020, 8:57 AM IST

ತೈಲ ಬೆಲೆ ಹೆಚ್ಚಳ ಖಂಡಿಸಿ ಇಂದು ಕಾಂಗ್ರೆಸ್‌ ಪ್ರತಿಭಟನೆ

ರಾಯಚೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಜೂ.29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂಎಲ್‌ಸಿ ಎನ್‌.ಎಸ್‌.ಬೋಸರಾಜ್‌ ತಿಳಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿ ಕೇಂದ್ರ ಸರ್ಕಾರದ ನಡೆ ಖಂಡಿಸಲಾಗುವುದು. ಕೇಂದ್ರ ಸರ್ಕಾರ ಬಡಜನರ ಜೀವನದ ಜತೆ ಚಲ್ಲಾಟವಾಡುತ್ತಿದೆ. ಕೋವಿಡ್ ಸಂಕಷ್ಟದಿಂದ ಜನ ಸಾಕಷ್ಟು ತೊಂದರೆಗೆ ಸಿಲುಕಿದ್ದರೆ; ತೈಲ ಬೆಲೆ ಹೆಚ್ಚಿಸುವ ಮೂಲಕ ಮತ್ತಷ್ಟು ಹೊರೆ ಹಾಕುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿದರೂ ಸರ್ಕಾರ ಮಾತ್ರ ಹೆಚ್ಚುವರಿ ಸುಂಕ ವಿಧಿ ಸುತ್ತಿದೆ. ಸರ್ಕಾರಕ್ಕೆ ಇದರಿಂದ 18 ಲಕ್ಷ ಕೋಟಿ ರೂ. ಸುಂಕ ಸಂಗ್ರಹವಾಗಿದೆ. 2014ರಲ್ಲಿ ಪೆಟ್ರೋಲ್‌ ಮೇಲೆ 9.20 ಪೈಸೆ, ಡೀಸೆಲ್‌ ಮೇಲೆ 3.46 ಪೈಸೆ ಸುಂಕ ವಿ ಧಿಸಲಾಗುತ್ತಿತ್ತು. ಆದರೆ, ಈಗ ಸರ್ಕಾರ ಕ್ರಮವಾಗಿ 23.78 ಪೈಸೆ, 28.32 ಪೈಸೆ ಸುಂಕ ವಿಧಿಸುವ ಮೂಲಕ ಕಷ್ಟಕಾಲದಲ್ಲೂ ಜನರ ಸುಲಿಗೆ ಮಾಡುತ್ತಿದೆ ಎಂದು ದೂರಿದರು.

ದೇಶದಲ್ಲಿ ಇಂದು ಕೊರೊನಾ ಈ ಮಟ್ಟದಲ್ಲಿ ಹೆಚ್ಚಾಗಲು ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಕಾರಣ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಆರಂಭದಲ್ಲಿ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದ ಪರಿಣಾಮ ಈಗ ಎದುರಿಸುವಂತಾಗಿದೆ. ಮೋದಿ ಸರ್ಕಾರ ಜ.19ರಂದು ಮೊದಲ ಕೊರೊನಾ ಸೋಂಕು ದೃಢಪಟ್ಟಾಗ ಎಚ್ಚೆತ್ತುಕೊಳ್ಳದೆ ನಮಸ್ತೆ ಟ್ರಂಪ್‌ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು ಎಂದು ದೂರಿದರು.

ಎನ್‌ಆರ್‌ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಕಳಪೆಯಾಗಿರುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗಿದೆ. ಮುಂದಿನ ವಾರ ಕಾಂಗ್ರೆಸ್‌ ನಿಯೋಗ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಲಿದೆ ಎಂದರು.

ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಶಾಸಕ ದದ್ದಲ್‌ ಬಸವನಗೌಡ, ಎ.ವಸಂತಕುಮಾರ, ಜಿ.ಬಸವರಾಜ ರೆಡ್ಡಿ, ಜಯಣ್ಣ, ಶಿವಮೂರ್ತಿ ಇತರರು ಇದ್ದರು.

ಟಾಪ್ ನ್ಯೂಸ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಯಚೂರು: ಕ್ರೂಸರ್ -ಬೈಕ್ ಮುಖಾಮುಖಿ; ಇಬ್ಬರ ಸಾವು

ರಾಯಚೂರು: ಕ್ರೂಸರ್ -ಬೈಕ್ ಮುಖಾಮುಖಿ; ಇಬ್ಬರ ಸಾವು

werfghjhgfd

ಸಾಯಿ ಧ್ಯಾನಮಂದಿರದ ಸಾರ್ಥಕ ಜನಸೇವೆ

ಪೆಟ್ರೋಲ್‌ ಬಂಕ್‌ ಎದುರು “ಕೈ’ ಪ್ರತಿಭಟನೆ

ಪೆಟ್ರೋಲ್‌ ಬಂಕ್‌ ಎದುರು “ಕೈ’ ಪ್ರತಿಭಟನೆ

ಬಡವರ ಬಾಳಲ್ಲಿ ಅಕ್ರಮ ಸಕ್ರಮ ಆಶಾಕಿರಣ

ಬಡವರ ಬಾಳಲ್ಲಿ ಅಕ್ರಮ ಸಕ್ರಮ ಆಶಾಕಿರಣ

shashikala jolle

ಅಪೌಷ್ಟಿಕ ಮಕ್ಕಳ ಆರೋಗ್ಯಕ್ಕೆ ಒತ್ತು: ಸಚಿವೆ ಶಶಿಕಲಾ ಜೊಲ್ಲೆ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

15-19

ಕೊರೋನಾ ತಡೆಗೆ ಗ್ರಾಂ ಪಂಚಾಯತ್ ಗಳತ್ತ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.