ಮಾದರಿ ಶಾಲೆ ನಿರ್ಮಾಣಕ್ಕೆ ಸಂಕಲ್ಪ
Team Udayavani, Dec 20, 2020, 4:18 PM IST
ದೇವದುರ್ಗ: ರಾಜ್ಯ ಸರಕಾರ ಆರಂಭಿಸಿದ ಶಾಲೆಗಳ ದತ್ತು ಯೋಜನೆಯಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಮೂರು ಶಾಲೆಗಳು ದತ್ತು ಪಡೆದು ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿವೆ.
ತಾಲೂಕಿನ ಮಸರಕಲ್ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಗೊಂಡ ನೋಡಗರಗಮನ ಸೆಳೆಯುತ್ತಿದೆ. ಈ ಹಿಂದೆ ಅವ್ಯವಸ್ಥೆಯಲ್ಲಿರುವ ಶಾಲೆ ಮಳೆ ಬಂದಾಗ ಅಘೋಷಿತ ರಜೆ ನೀಡಲಾಗುತ್ತಿತು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾಕಾಶಿಮಾಡಬೇಕು ಎನ್ನುವ ಸಂಕಲ್ಪ ಹೊಂದಿಗೆ ಶಾಸಕರು ಹೆಚ್ಚಿನ ಆಸಕ್ತಿ ವಹಿಸುವ ಜತೆ ಅವರ ಅನುದಾನದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ 16 ಕೋಣೆಗಳ ನಿರ್ಮಾಣಕ್ಕೆ ಮುಂದಾದರೂ. ಗ್ರಂಥಾಲಯ, ನಲಿ ಕಲಿ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆ ಶೌಚಾಲಯ ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಉತ್ತಮ ಪರಿಸರ ವಾತಾವರಣ ಹೊಂದುವ ಹಿನ್ನೆಲೆ ಆವರಣದಲ್ಲಿ 50 ಸಸಿಗಳು ಹಾಕಲಾಗಿದೆ. ಶಾಲಾ ಮುಂಭಾಗದ ಕೋಣೆಗಳಿಗೆ ಗೋಡೆ ಬರಹ ಬರೆಸಲಾಗಿದೆ.
ಕೋವಿಡ್ ಸಂದರ್ಭ ಶಾಲೆಗಳು ರಜೆ ಹಿನ್ನೆಲೆ ಚಿತ್ರಕಲೆ ಶಿಕ್ಷಕರಿಂದಲೇ ವಿವಿಧ ಬಗ್ಗೆಯ ಚಿತ್ರಗಳು ಬಿಡಿಸಲಾಗಿದೆ. ಮಕ್ಕಳ ಕಲಿಕೆಗೆ ಇಲ್ಲಿನ ಚಿತ್ರಗಳು ಪೇರಣೆಯಾಗಿವೆ. ನಿರ್ವಹಣೆಗೆ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಿದಂತಾಗಿದೆ.
ಮರುಜೀವ: 60ರ ದಶಕದಲ್ಲಿ ನಿರ್ಮಾಣ ಗೊಂಡಿರುವ ಕೋತ್ತಿದೊಡ್ಡಿ, ಅರಕೇರಾ,ಗಾಣಧಾಳ ಶಾಲೆಗಳು ತೀರ ಶಿಥಿಲಗೊಂಡು ಅವ್ಯವಸ್ಥೆಯಲ್ಲಿರುವ ಶಾಲೆಗಳಿಗೆ ಶಾಸಕರು ದತ್ತುಪಡೆದು ಮರು ಜೀವ ನೀಡಿದಂತಾಗಿದೆ. 2 ಕೋಟಿಅಭಾವದಲ್ಲಿ ಕಟ್ಟಡಗಳು ನಿರ್ಮಿಸಲಾಗುತ್ತಿವೆ. ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೇನು ಎರಡ್ಮೂರು ತಿಂಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿವೆ. ಬೇರೊಂದು ಜಿಲ್ಲೆಯ ಅಧಿಕಾರಿಗಳು ಮತ್ತು ಶಿಕ್ಷಕರು ಇಲ್ಲಿನ ಮಾದರಿ ಶಾಲೆಗಳು ನೋಡುವಂತ ವ್ಯವಸ್ಥೆಯಲ್ಲಿ ಶಾಲೆಗಳನಿರ್ಮಾಣಕ್ಕೆ ಶಾಸಕರೇ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.ವಾರದಲ್ಲಿ ಮೂರು ಬಾರಿ ಕಟ್ಟಡ ಕಾಮಗಾರಿ ವೀಕ್ಷಣೆ ನಡೆಸಿದ್ದಾರೆ.
ಏನೇನು ಸೌಲಭ್ಯ?: ಶಾಸಕ ಕೆ.ಶಿವನಗೌಡ ಅವರ ಅನುದಾನದಲ್ಲಿ ಮೂರು ಶಾಲೆಗಳು ದತ್ತು ಪಡೆದುಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ಸುಸ್ವಜಿತಕಟ್ಟಡಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ನಲಿ ಕಲಿ ಕೋಣೆ, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಪ್ರತ್ಯೇಕಕೋಣೆ, ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಶೌಚಾಲಯ, ಬಿಸಿಯೂಟ ಕೋಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಆವರಣದಲ್ಲಿ ವಿವಿಧ ಸಸಿಗಳು ಹಾಕಲಾಗಿದೆ. ಗೋಡೆ ಬರಹ ಮಕ್ಕಳಿಗೆ ಕಲಿಕೆಗೆ ಪೇರಣೆ ಎಂಬಂತಾಗಿದೆ.
ಶೈಕ್ಷಣಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ತೊಲಗಿಸಲು ವಿದ್ಯಾಕಾಶಿ ಶಿಕ್ಷಣ ಮಾದರಿಯಲ್ಲೇ ಶಿಕ್ಷಣಕ್ಕೆ ಹೆಚ್ಚಿನ ಗಮನಹರಿಸಿದ್ದಾರೆ.
ಶಿಥಿಲ ಶಾಲೆ ಅಭಿವೃದ್ಧಿಗೆ ಆಗ್ರಹ: ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಮಾದರಿಯಲ್ಲೇಶಿಥಿಲಗೊಂಡಿರುವ ತಾಲೂಕಿನ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಆಸಕ್ತಿ ವಹಿಸುವಜತೆ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ತರಗತಿಯ ಶಾಲೆಗಳ ಅಭಿವೃದ್ಧಿ ಬಲಪಡಿಸಲು ಮುಂದಾಗಬೇಕು ಎನ್ನುವ ಮಾತು ಶಿಕ್ಷಣ ಪ್ರೇಮಿಗಳಿಂದ ಕೇಳಿಬರುತ್ತಿದೆ. ಕ.ಕ ಅಭಿವೃದ್ಧಿ ಮಂಡಳಿ ಯೋಜನೆ ಅನುದಾನದಲ್ಲಿ ಶಿಥಿಲ ಗೊಂಡಿರುವ ಶಾಲೆಗಳ ಅಭಿವೃದ್ಧಿಗೆ ಶಾಸಕರು ಗಮನ ನೀಡಬೇಕು ಎಂದು ಎಸ್‌ಎಫ್‌ಐ ಮುಖಂಡ ಲಿಂಗಣ್ಣ ಆಗ್ರಹಿಸಿದರು.
ಕ್ಷೇತ್ರದಲ್ಲಿ ಮೂರು ಶಾಲೆಗಳು ದತ್ತು ಪಡೆದಿದ್ದೇನೆ. ಗಾಣಧಾಳ, ವಂದಲಿ, ಕೊಪ್ಪರ ಶಾಲೆಗಳು ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ.ಶಿಕ್ಷಣ ಅಭಿವೃದ್ಧಿಗೆಬೇಕಾಗುವ ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ.-ಕೆ.ಶಿವನಗೌಡ ನಾಯಕ, ಶಾಸಕರು, ದೇವದುರ್ಗ.
-ನಾಗರಾಜ ತೇಲ್ಕರ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ
ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದು
ವಿದೇಶದಲ್ಲಿ ಬಸವಣ್ಣನಿಂದ ಗೌರವ, ಕಾಲ್ಪನಿಕ ರಾಮನಿಂದಲ್ಲ: ಶ್ರೀ ನಿಜಗುಣಾನಂದ ಸ್ವಾಮೀಜಿ
ಕೋವಿಡ್ ವಾಸಿಯಾಗಬಲ್ಲ ಸೋಂಕು
ಬಂಟ್ವಾಳ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸ್ ದಾಳಿ; ಆರೋಪಿಗಳು ವಶಕ್ಕೆ