404 ಸದಸ್ಯ ಸ್ಥಾನಗಳಿಗೆ 1045 ಉಮೇದುವಾರಿಕೆ


Team Udayavani, Dec 18, 2020, 5:53 PM IST

404 ಸದಸ್ಯ ಸ್ಥಾನಗಳಿಗೆ 1045 ಉಮೇದುವಾರಿಕೆ

ಮಸ್ಕಿ :  ತಾಲೂಕಿನ 21 ಗ್ರಾಪಂಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಡಿ.16ಕ್ಕೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ಒಟ್ಟು ತಾಲೂಕಿನ 404 ಸದಸ್ಯ ಸ್ಥಾನಗಳಿಗೆ 1045 ಜನ ನಾಮಪತ್ರ ಸಲ್ಲಿಸಿದ್ದಾರೆ.

ತಾಲೂಕಿನಲ್ಲಿ ಎರಡನೇ ಹಂತದಲ್ಲಿ ಡಿ.27ರಂದು ಮತದಾನ ನಡೆಯುತ್ತಿದ್ದು,ಡಿ.11ರಿಂದ ನಾಮಪತ್ರ ಸಲ್ಲಿಕೆಆರಂಭವಾಗಿದ್ದವು. ಡಿ.16ಕ್ಕೆ ನಾಮಪತ್ರಸಲ್ಲಿಕೆ ದಿನ ಮುಕ್ತಾಯವಾಗಿದೆ. ಚುನಾವಣೆಘೋಷಣೆಯಿಂದಲೇ ಕಾವೇರಿದ್ದ ಹಳ್ಳಿರಾಜಕೀಯಕ್ಕೆ ಈಗ ಸ್ಪಷ್ಟ ಚಿತ್ರಣ ದೊರೆತಿದೆ.ಹಲವು ಕಡೆ, ರಾಜಿ-ಸಂಧಾನ,ಮನವೊಲಿಕೆ, ಕಣಕ್ಕಿಳಿಯುವ ಬಗ್ಗೆಹಗ್ಗ-ಜಗ್ಗಾಟದ ನಡುವೆಯೇ ನಾಮ ಪತ್ರ

ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಪರ್ಧೆಬಯಸಿದ ಬಹುತೇಕ ಅಭ್ಯರ್ಥಿಗಳು ಕಣಕ್ಕೆಧುಮುಕಿದ್ದಾರೆ. ಇನ್ನು ನಾಮಪತ್ರ ವಾಪಸ್‌ ಪಡೆಯಲು ಡಿ.19ಕ್ಕೆ ಕೊನೆಯ ದಿನವಾಗಿದ್ದು,ಈ ವೇಳೆ ಕಣದಲ್ಲಿ ಉಳಿಯುವವರೆಷ್ಟು? ಹೊರ ಹೋಗುವವರೆಷ್ಟು? ಎನ್ನುವ ಚಿತ್ರಣ ಸ್ಪಷ್ಟವಾಗಲಿದೆ.

1045 ನಾಮ ಪತ್ರ: ಮಸ್ಕಿ ತಾಲೂಕಿನಲ್ಲಿ ಒಟ್ಟು 21 ಗ್ರಾಪಂಗಳಿದ್ದು, 404 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಡಿ.11 ನಾಮಪತ್ರ ಸಲ್ಲಿಕೆ ಮೊದಲ ದಿನ 7 ನಾಮಪತ್ರಸಲ್ಲಿಕೆಯಾಗಿದ್ದರೆ, ಡಿ.12ಕ್ಕೆ 11 ನಾಮಪತ್ರಗಳುಸಲ್ಲಿಕೆಯಾಗಿದ್ದವು. ಇನ್ನು ಡಿ.15ರಂದು 329ನಾಮಪತ್ರ ಸಲ್ಲಿಕೆಯಾದರೆ, ನಾಮಪತ್ರಸಲ್ಲಿಕೆಯ ಕೊನೆಯ ದಿನ ಡಿ.16ರ ಒಂದೇ ದಿನಕ್ಕೆಬರೋಬ್ಬರಿ 640 ನಾಮಪತ್ರ ಸಲ್ಲಿಕೆಯಾಗಿವೆ.ಇದರಿಂದ ಒಟ್ಟು 404 ಸ್ಥಾನಗಳಿಗೆ 1045ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.ಇದರಲ್ಲಿ 520 ನಾಮಪತ್ರಗಳನ್ನು ಮಹಿಳೆಯರೇಸಲ್ಲಿಸಿದ್ದರೆ, ಉಳಿದ 525 ನಾಮ ಪತ್ರಗಳು ಮಹಿಳಾ ಮತ್ತು ಪುರುಷರಹೆಸರಿನಲ್ಲಿವೆ.

ಎಸ್ಸಿಯೇ ಅಧಿಕ: ಇನ್ನು ಮೀಸಲುವಾರು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಸ್ಸಿ ಸ್ಥಾನಗಳಿಗೆ ಅತ್ಯ ಧಿಕ ನಾಮಪತ್ರ ಸಲ್ಲಿಕೆಯಾಗಿವೆ.ಒಟ್ಟು 280 ಪರಿಶಿಷ್ಟ ವರ್ಗದಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಅನುಸೂಚಿತ ಪಂಗಡದಲ್ಲಿ207, ಹಿಂದುಳಿದ ಅ ವರ್ಗ-57, ಹಿಂದುಳಿದ ಬ ವರ್ಗ-14 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಕಾರ್ಯ ನಡೆದಿದ್ದು, ಡಿ.19ಕ್ಕೆ ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನಕ್ಕೆ ಅಖಾಡ ಸ್ಪಷ್ಟವಾಗಲಿದೆ.

23 ಸ್ಥಾನಕ್ಕೆ 108 ನಾಮಪತ್ರ :

ಗ್ರಾಪಂ ಚುನಾವಣೆ ಹಳ್ಳಿಗಳಲ್ಲಿ ಜಿದ್ದಾಜಿದ್ದಿ. 1 ಸ್ಥಾನಗಳಿಗೆ 3-4 ಜನರ ನಡುವೆ ಪೈಪೋಟಿ ಇದೆ. ಆದರೆ ಸ್ಪರ್ಧೆಯ ಪೈಪೋಟಿ ತೀವ್ರವಾಗಿದ್ದರಿಂದ ಕೆಲ ಗ್ರಾಪಂಗಳಲ್ಲಿ ನಾಮಪತ್ರಗಳ ಸಂಖ್ಯೆ ಶತಕ ದಾಟಿದೆ.ಮಟ್ಟೂರು ಗ್ರಾಪಂನ ಕೇವಲ 23 ಸ್ಥಾನಗಳಿಗೆ ಬರೋಬ್ಬರಿ 108 ನಾಮಪತ್ರ ಸಲ್ಲಿಕೆಯಾಗಿದ್ದರೆ,ಗುಡದೂರು ಗ್ರಾಪಂನಲ್ಲಿ 25 ಸದಸ್ಯ ಸ್ಥಾನಗಳಿಗೆ 92 ನಾಮಪತ್ರ ಸಲ್ಲಿಕೆಯಾಗಿವೆ. ಇನ್ನು ಕನ್ನಾಳ ಗ್ರಾಪಂನಲ್ಲಿ 20 ಸ್ಥಾನಗಳಿಗೆ 85 ನಾಮಪತ್ರ ಸಲ್ಲಿಕೆಯಾಗಿವೆ.

77 ಸ್ಥಾನಗಳಿಗೆ ನಾಮಪತ್ರವಿಲ್ಲ :

404 ಸ್ಥಾನ ಸದಸ್ಯ ಸ್ಥಾನಗಳ ಪೈಕಿ 77 ಸದಸ್ಯ ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. 5ಎ ಕಾಲುವೆಹೋರಾಟ ತೀವ್ರವಾಗಿದ್ದರಿಂದ ಅಂಕುಶದೊಡ್ಡಿ, ಪಾಮನಕಲ್ಲೂರು,ವಟಗಲ್‌ ಹಾಗೂ ಅಮೀನಗಡ4 ಗ್ರಾಪಂಗಳ ಒಟ್ಟು 30 ಹಳ್ಳಿಗರುಚುನಾವಣೆ ಬಹಿಷ್ಕಾರ ಮಾಡಿದ್ದಾರೆಹೀಗಾಗಿ ಈ 4 ಪಂಚಾಯಿತಿಯ 77ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

 

-ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.