Udayavni Special

ಭೂ ಸ್ವಾಧೀನಕ್ಕೆ ರೈತರಿಂದ ಅಭಿಪ್ರಾಯ ಸಂಗ್ರಹ: ಡಿಸಿ


Team Udayavani, Nov 7, 2020, 6:32 PM IST

ಭೂ ಸ್ವಾಧೀನಕ್ಕೆ ರೈತರಿಂದ ಅಭಿಪ್ರಾಯ ಸಂಗ್ರಹ: ಡಿಸಿ

ರಾಯಚೂರು: ವಾಡಿ-ಗದಗವರೆಗೆ ರೈಲ್ವೆ ಲೈನ್‌ಜೋಡಣೆಗಾಗಿ ಭೂ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು, ಭೂ ಮಾಲೀಕರ ಅಭಿಪ್ರಾಯ ಸಂಗ್ರಹಿಸಿ ದರ ನಿಗದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ್‌ ತಿಳಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಲಿಂಗಸುಗೂರು ತಾಲೂಕಿನ ಮುದಗಲ್‌ ಹೋಬಳಿ ವ್ಯಾಪ್ತಿಯ ಜಾಂತಾಪುರ ಹಾಗೂ ಆರ್‌.ಎ.ಬೋಗಾಪುರದಲ್ಲಿ 63 ಎಕರೆ 2 ಗುಂಟೆ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಪ್ರತಿ ಎಕರೆಗೆ ಸರ್ಕಾರ 4.69 ಲಕ್ಷ ರೂ. ನಿಗದಿಪಡಿಸಿದೆ. ಇದಕ್ಕೆ ನಿಮ್ಮ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಜಾಂತಾಪುರದಲ್ಲಿ 30 ಎಕರೆ 10 ಗುಂಟೆ ಹಾಗೂ ಆರ್‌.ಎ ಬೋಗಾಪುರದಲ್ಲಿ 32 ಎಕರೆ 32 ಗುಂಟೆ ಭೂ ಸ್ವಾ ಧೀನ ಪಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು.

2013ರ ಕಾಯ್ದೆ ಪ್ರಕಾರ ಬೆಲೆ ನಿಗದಿ ಮಾಡಲಾಗುತ್ತಿದೆ. ಲಿಂಗಸೂಗೂರು ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಇರುವುದರಿಂದ ನೀರಾವರಿಗೊಳಪಡುವ ಜಮೀನು ಹೆಚ್ಚಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ವಿಳಂಬವಾಗಿದೆ. ಆ ಭಾಗದಲ್ಲಿ ಜಮೀನು ಮಾರಾಟಕ್ಕೆ ದರ ನಿಗದಿಪಡಿಸುವುದು ಸವಾಲಿನ ಕೆಲಸ ಎಂದರು.

ಸಂತ್ರಸ್ತರಿಗೆ ರೈಲ್ವೆ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿಯಡಿ ಸರ್ಕಾರಿ ನೌಕರಿ ಸಿಗುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 (ಜೆ) ಕಲಂತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಈ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.80 ಮೀಸಲಾತಿ ಕಲ್ಪಿಸಿದೆ. ಖಾಲಿಯಿರುವಹುದ್ದೆಗಳ ಭರ್ತಿಯಲ್ಲಿ ಸಂತ್ರಸ್ತರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಮುನ್ನ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ವರದಿ ನೀಡಿದ ನಂತರ ದರ ನಿಗದಿಪಡಿಸಲಾಗುವುದು ಎಂದರು.

ವಿಶೇಷ ಭೂ ಸ್ವಾಧೀನ ಅಧಿಕಾರಿ ಡಾ| ಬಿ. ಶರಣಪ್ಪ ಮಾತನಾಡಿ, 63 ಎಕರೆ 2 ಗುಂಟೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ. 2013ರ ಕಾಯ್ದೆ ಪ್ರಕಾರ ಉಪ ನೋಂದಣಾಧಿಕಾರಿಗಳು ನೀಡುವ ವರದಿ ಆಧರಿಸಿ ದರ ನಿಗದಿ ಪಡಿಸಲಾಗುವುದು. ಈಗಾಗಲೇ ಸರ್ಕಾರ ಪ್ರತಿ ಎಕರೆಗೆ 4.96 ಲಕ್ಷ ರೂ. ದರ ನಿಗದಿಪಡಿಸಿದ್ದು, ಸರ್ಕಾರದ ದರಕ್ಕೆ ಆಕ್ಷೇಪಣೆಗಳಿದ್ದಲ್ಲಿ ನಿಮ್ಮ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ್‌ ಡಂಬಳ, ತಹಶೀಲ್ದಾರ್‌ ಚಾಮರಸ ಪಾಟೀಲ್‌, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹ್ಮದ್‌ ಇರ್ಫಾನ್‌, ಕೆಐಎಡಿಬಿ ಅಧಿಕಾರಿ ಪ್ರಕಾಶ ಹಾಗೂ ಭೂ ಮಾಲೀಕರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ಪತ್ರಿಕೆಯ ಜಾಹೀರಾತುಗಳೇ ವಿಶ್ವಾಸಾರ್ಹ: ಗ್ರಾಹಕ ತೀರ್ಪು

ಪತ್ರಿಕೆಯ ಜಾಹೀರಾತುಗಳೇ ವಿಶ್ವಾಸಾರ್ಹ: ಗ್ರಾಹಕ ತೀರ್ಪು

ರಾಶಿ ಭವಿಷ್ಯ: ಈ ರಾಶಿಯವರು ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸಬೇಕಾಗಬಹುದು!

ರಾಶಿ ಭವಿಷ್ಯ: ಈ ರಾಶಿಯವರು ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸಬೇಕಾಗಬಹುದು!

ಲಕ್ಸಂಬರ್ಗ್‌ ಶೈತ್ಯ ಶ್ರೀರಕ್ಷೆ!

ಲಕ್ಸಂಬರ್ಗ್‌ ಶೈತ್ಯ ಶ್ರೀರಕ್ಷೆ!

“ಚಂದ್ರ ಧೂಳು’ ಖರೀದಿಗೆ ನಾಸಾ ಸಹಿ

“ಚಂದ್ರ ಧೂಳು’ ಖರೀದಿಗೆ ನಾಸಾ ಸಹಿ

ಇಂದು ಕರ್ನಾಟಕ ಬಂದ್: ಬೆಂಗಳೂರಿನ ಹಲವೆಡೆ ಕಲ್ಲು ತೂರಾಟ, ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ

ಇಂದು ಕರ್ನಾಟಕ ಬಂದ್: ಬೆಂಗಳೂರಿನ ಹಲವೆಡೆ ಕಲ್ಲು ತೂರಾಟ, ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿಗೂ ಉದ್ಯಮದ ಪ್ರಾಧಾನ್ಯತೆ ಸಿಗಲಿ: ಹಿರೇಮಠ

ಕೃಷಿಗೂ ಉದ್ಯಮದ ಪ್ರಾಧಾನ್ಯತೆ ಸಿಗಲಿ: ಹಿರೇಮಠ

ವಸತಿ ನಿಲಯಗಳ 3.5 ಕೋಟಿ ರೂ. ಬಾಡಿಗೆ ಬಾಕಿ

ವಸತಿ ನಿಲಯಗಳ 3.5 ಕೋಟಿ ರೂ. ಬಾಡಿಗೆ ಬಾಕಿ

ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ

ಭೂಸ್ವಾಧೀನ ಪ್ರಕ್ರಿಯೆಗೆ ವೇಗದ ಸ್ಪರ್ಶ

ನೀರು ಕುಡಿಯಲು ನದಿಪಾತ್ರಕ್ಕೆ ತೆರಳಿದ ದನಗಾಹಿ ಬಾಲಕ ಮೊಸಳೆ ಪಾಲು: ರುಂಡ ಮಾತ್ರ ಪತ್ತೆ

ನೀರು ಕುಡಿಯಲು ನದಿಪಾತ್ರಕ್ಕೆ ತೆರಳಿದ ದನಗಾಹಿ ಬಾಲಕ ಮೊಸಳೆ ಪಾಲು: ರುಂಡ ಮಾತ್ರ ಪತ್ತೆ

ಓದುವ ಬೆಳಕಿಗೆ ಕಿಮ್ಮತ್ತೇ ಇಲ್ಲ

ಓದುವ ಬೆಳಕಿಗೆ ಕಿಮ್ಮತ್ತೇ ಇಲ್ಲ

MUST WATCH

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

ಹೊಸ ಸೇರ್ಪಡೆ

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ಡೆತ್‌ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಜಾಮೀನು ನಿರಾಕರಿಸುವಂತಿಲ್ಲ

ಡೆತ್‌ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಜಾಮೀನು ನಿರಾಕರಿಸುವಂತಿಲ್ಲ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ಪರಪ್ಪನ ಅಗ್ರಹಾರ ಸೆಲೆಬ್ರಿಟಿ, ರಾಜಕಾರಣಿ, ಉದ್ಯಮಿಗಳ ತಾಣ!

ಪರಪ್ಪನ ಅಗ್ರಹಾರ ಸೆಲೆಬ್ರಿಟಿ, ರಾಜಕಾರಣಿ, ಉದ್ಯಮಿಗಳ ತಾಣ!

Surshkumar

ಸಕಾಲ ಸೇವಾ ಆಯೋಗ ಸ್ಥಾಪನೆ: ಸಚಿವ ಸುರೇಶ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.