ಬಸಿ ನೀರಿಗೆ ಬೆಚ್ಚಿದ ಮಸೀದಪೂರ ಜನ


Team Udayavani, Oct 27, 2020, 3:56 PM IST

rc-tdy-1

ದೇವದುರ್ಗ: ಮಲದಕಲ್‌ ಗ್ರಾಮ ಪಂಚಾಯಿತ್‌ ವ್ಯಾಪ್ತಿಗೆ ಬರುವ ಮಸೀದಪೂರ ಗ್ರಾಮಕ್ಕೆ ಬಸಿ ನೀರಿನ ಕಾಟ ತೀವ್ರವಾಗಿದೆ. ಹಲವು ಬಾರಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಮನವಿ ಮಾಡಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ದಿನವಿಡೀ ನರಕಯಾತನೆ ಅನುಭವಿಸಬೇಕಾಗಿದೆ.

ಕಳೆದ ವಾರ ನಿರಂತರ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಂತ ಪರಿಣಾಮ ವಿಷಜಂತು ಕಾಟ ವಿಪರೀತವಾಗಿದೆ. ಮಲದಕಲ್‌ ಗ್ರಾಪಂ ವ್ಯಾಪ್ತಿಗೆ ಬರುವ ಮಸೀದಪೂರ ಗ್ರಾಮದಲ್ಲಿ ಸಾವಿರಾರೂ ಮತದಾರರು ನೂರಾರು ಕುಟುಂಬಗಳು ವಾಸಿಸುತ್ತಿವೆ. ಗ್ರಾಮದ ಪಕ್ಕದಲ್ಲಿರುವ ಕೆರೆಯ ಬಸಿ ನೀರಿನ ಕಾಟಕ್ಕೆ ಗ್ರಾಮಸ್ಥರು ಬೆಚ್ಚಿದ್ದಾರೆ. ಇಲ್ಲಿನ ಸಮಸ್ಯೆ ಕುರಿತು ಹಲವು ಬಾರಿ ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದೇ ಹಿಂದೇಟು ಹಾಕಿದ್ದಾರೆ ಎಂದು ದೂರಿದರು.

ಹಗೆವುಗಳಿಂದ ಸಮಸ್ಯೆ: ಮಸೀದಿಪೂರು ಗ್ರಾಮದಲ್ಲಿ ಈ ಹಿಂದೆ ಹಗೆವುಗಳಲ್ಲಿಜೋಳ ಸಂಗ್ರಹಿಸಲಾಗುತ್ತಿತ್ತು. ಹಗೆವುದಲ್ಲಿ ಜೋಳ ಸಂಗ್ರಹ ಮಾಡದೇ ಬಿಟ್ಟಿರುವ ಗ್ರಾಮಸ್ಥರು ಬಸಿ ನೀರಿಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಹಗೆವುಗಳು ಭಾರಿ ಪ್ರಮಾಣದಲ್ಲಿ ತೆಗ್ಗುಗಳು ಬಿದ್ದು, ಗ್ರಾಮಸ್ಥರ ಜೀವ ಹಿಂಡುತ್ತಿವೆ. ನೂರಾರು ಕುಟುಂಬಗಳು ಬಸಿ ನೀರಿಗೆ ತತ್ತರಿಸಿ ಹೋಗಿವೆ.

ಅವ್ಯವಸ್ಥೆಯ ಆಗರ: ಗ್ರಾಮದಲ್ಲಿ ಎಲ್ಲೆಂದರಲ್ಲಿ ಗಲೀಜು ನೀರು ನಿಂತ ಹಿನ್ನೆಲೆ ಅವ್ಯವಸ್ಥೆಯ ಆಗರವಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಉತ್ಪತ್ತಿ ಹೆಚ್ಚಾಗಿದ್ದು, ಗ್ರಾಮಸ್ಥರುಮನೆಯಿಂದ ಹೊರಗಡೆ ಬರಲಾರದಂತಹ ಸ್ಥಿತಿ ಉಲ್ಬಣಗೊಂಡಿದೆ.

ಮಸೀದಪೂರ ಗ್ರಾಮದಲ್ಲಿ ಬಸಿ ನೀರಿಗೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಅಲಿಸುವ ಕೆಲಸ ಮಾಡದೇ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಗ್ರಾಮದ ಸಂಘಟನೆ ಮುಖಂಡರು ಅ.28ರಂದು ಗಬ್ಬೂರು ನಾಡ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದರು.

ಮಸೀದಪೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬಸಿ ನೀರಿನ ಸಮಸ್ಯೆ ಕುರಿತು  ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮ ಸ್ಥಳಾಂತರಿಸುವಂತೆ ಗ್ರಾಮಸ್ಥರ ಬೇಡಿಕೆಯಾಗಿದೆ.-ಮಧುರಾಜ್‌ ಯಾಳಗಿ, ತಹಶೀಲ್ದಾರ್‌

2009ರಲ್ಲಿ ಆಗಿದ್ದ ನೆರೆ ಹಾವಳಿಗೆ ಗ್ರಾಮವೇ ತತ್ತರಿಸಿ ಹೋಗಿದೆ. ಸ್ಥಳಾಂತರ ಮಾಡುವಂತೆ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ.  -ರಾಜಪ್ಪ ಸಿರವಾರಕರ, ಪ್ರಗತಿಪರ ಸಂಘಟನೆ ಒಕ್ಕೂಟ ಮುಖಂಡ.

 

-ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

death

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್‌ ಢಿಕ್ಕಿ; 18 ರ ತರುಣ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಸಿಎಂ ಬೊಮ್ಮಾಯಿ

ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

30indian

ಭಾರತೀಯ ನೆಲದಲ್ಲಿ ಜನಿಸಿದ ನಾವೇ ಧನ್ಯರು

23jds

ಕಾಂಗ್ರೆಸ್, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಎಫೆಕ್ಟ್ ಆಗುವುದಿಲ್ಲ: ಸಚಿವ ಹಾಲಪ್ಪ ಆಚಾರ್

11vaccine

ಮೂರನೇ ಅಲೆ ಭೀತಿಗೆ 2ನೇ ಡೋಸ್‌ಗೆ ಬೇಡಿಕೆ!

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

24lawyer

ನಿತ್ಯ ಅಧ್ಯಯನ ಶೀಲರಾದಾಗ ಮಾತ್ರ ಯಶಸ್ಸು: ಹಿರೇಮಠ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

death

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

omicron

ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ:ಒಮಿಕ್ರಾನ್‌ ಭೀತಿ; ಮಾಸ್ಕ್ ಧರಿಸದಿದ್ದರೆ ದಂಡ

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

ನಗರಸಭೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ನಗರಸಭೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.