ರೋಡಲಬಂಡಾ ಕ್ವಾರಂಟೈನ್‌ದಿಂದ ನಾಪತ್ತೆಯಾಗಿದ್ದ ಗರ್ಭಿಣಿಗೆ ಹೆರಿಗೆ
Team Udayavani, May 20, 2020, 6:05 AM IST
ಲಿಂಗಸುಗೂರು: ರೋಡಲಬಂಡಾ ಸರ್ಕಾರಿ ಕ್ವಾರಂಟೈನ್‌ನಿಂದ ನಾಪತ್ತೆಯಾಗಿದ್ದ ತುಂಬು ಗರ್ಭಿಣಿಗೆ ಮಂಗಳವಾರ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಮಹಾರಾಷ್ಟ್ರದ ಪುಣೆಗೆ ಗುಳೆ ಹೋಗಿದ್ದ ತಾಲೂಕಿನ ಹಾಲಭಾವಿ ತಾಂಡಾದ ಗರ್ಭಿಣಿ ತನ್ನ ಪರಿವಾರದದೊಂದಿಗೆ ತವರಿಗೆ ಆಗಮಿಸಿದ್ದಳು. ಬಳಿಕ ಎಲ್ಲರನ್ನು ರೋಡಲಬಂಡಾದ ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ ಸೋಮವಾರ ಹೆರಿಗೆ ಕಾಣಿಸಿಕೊಂಡಿದ್ದರಿಂದ ಕೇಂದ್ರದ ಅಧಿಕಾರಿಗಳು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸುವ ಸಿದ್ಧತೆಯಲ್ಲಿದ್ದರು. ಆದರೆ ಈ ಸಮಯದಲ್ಲಿ ತನ್ನ ಪತಿ, ಅತ್ತೆಯೊಂದಿಗೆ ಅಲ್ಲಿಂದ ಎಲ್ಲರ ಕಣ್ತಪ್ಪಿಸಿ ಸ್ವ ಗ್ರಾಮಕ್ಕೆ ಪರಾರಿಯಾಗಿದ್ದಳು.
ನಂತರ ಚಿಕ್ಕ ಉಪ್ಪೇರಿ ಗ್ರಾಮದ ಸಂಬಂಧಿಕರ ಮನೆಯೊಂದರಲ್ಲಿ ಹೆರಿಗೆ ಆಗಿದೆ ಎಂದು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮಾಹಿತಿ ನೀಡಿದರು. ಬಳಿಕ ರೋಡಲಬಂಡಾ ಆಸ್ಪತ್ರೆ ಬಳಿ ಐಸೋಲೇಷನ್ ವಾರ್ಡ ನಿರ್ಮಿಸಿ ಬಾಣಂತಿ, ಆಕೆ ಪತಿ, ಇಬ್ಬರ ಮಕ್ಕಳನ್ನು ಇರಿಸಲಾಗಿದೆ. ನಾಲ್ಕು ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಪಾಟೀಲ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್