Udayavni Special

ಸ್ಮಶಾನಕ್ಕಾಗಿ ರೈತರಿಂದ ಭೂಮಿ ಖರೀದಿಸಿ

ಸ್ಥಳೀಯರಿಂದ ಮಾಹಿತಿ ಪಡೆಯಿರಿನಿಗದಿತ ಬೆಲೆಗೆ ರೈತರು ಒಪ್ಪಿಗೆ ನೀಡಿದರೆ ಮಾತ್ರ ಖರೀದಿ

Team Udayavani, Feb 29, 2020, 4:11 PM IST

29-February-20

ರಾಯಚೂರು: ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ, ಇತರೆ ಜನರಿಗೆ ರುದ್ರಭೂಮಿ ಸೌಲಭ್ಯ ಇಲ್ಲದಿದ್ದಲ್ಲಿ ಸರ್ಕಾರ ನಿಗದಿ ಮಾಡಿದ ಅನುದಾನದಡಿ ರೈತರಿಗೆ ಕೂಡಲೇ ಭೂಮಿ ಖರೀದಿಗೆ ಮುಂದಾಗುವಂತೆ ಅಪರ ಜಿಲ್ಲಾಧಿಕಾರಿ ದುರುಗೇಶ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಭೂಮಿಗೆ ಬೆಲೆ ನಿರ್ಧರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಪ್ರದೇಶಗಳಲ್ಲಿ ರುದ್ರಭೂಮಿ ಸೌಲಭ್ಯ ಕಲ್ಪಿಸಲು ಸರ್ಕಾರ ನಿಗದಿ ಪಡಿಸಿದ ಬೆಲೆಗೆ ಅನುಗುಣವಾಗಿ ರೈತರಿಂದ ಭೂಮಿ ಖರೀದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮದ ರೈತರನ್ನು ಸಂಪರ್ಕಿಸಿ. ಯಾರು ಭೂಮಿ ನೀಡಲು ಬರುವರೋ ಅವರಿಂದ ಪಡೆಯುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಕಡೆ ರುದ್ರಭೂಮಿ ಇಲ್ಲದೆ ಜನ ಶವಸಂಸ್ಕಾರ ಮಾಡಲು ಪ್ರಯಾಸ ಪಡುವಂತಿದೆ. ಅಂಥ ಕಡೆ ಸೂಕ್ತ ಭೂಮಿ ಗುರುತಿಸಿ ಖರೀದಿಗೆ ಮುಂದಾಗಿದೆ. ಸ್ಥಳೀಯ ಮಟ್ಟದ ಸಿಬ್ಬಂದಿಯಿಂದ ಮಾಹಿತಿ ಪಡೆಯಿರಿ. ನೀರಾವರಿ ಭೂಮಿ, ತರಿ ಭೂಮಿ, ಖುಷ್ಕಿ ಭೂಮಿಗಳ ಆಧಾರದ ಮೇಲೆ ಒಂದೊಂದು ಭೂಮಿಗೆ ಬೇರೆ ಬೇರೆ ದರ ನಿಗದಿ ಮಾಡಲಾಗಿದೆ. ರೈತರು ಈ ಬೆಲೆಗೆ ಒಪ್ಪಿಗೆ ನೀಡಿದರೆ ಮಾತ್ರ ಭೂಮಿಯನ್ನು ನೇರವಾಗಿ ಖರೀದಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಬಲವಂತ ಮಾಡುವಂತಿಲ್ಲ ಎಂದರು.

ಇದೇ ವೇಳೆ ರೈತರ ಸಮ್ಮತಿ ಮೇರೆಗೆ ಭೂಮಿ ಖರೀದಿ ಪ್ರಕ್ರಿಯೆ ನಡೆಯಿತು. ಸಿಂಧನೂರು ತಾಲೂಕಿನ ಶಾಂತಿನಗರ ಗ್ರಾಮ ವ್ಯಾಪ್ತಿಯ ಭೀಮರಾಜ ಕ್ಯಾಂಪ್‌ನಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗಾಗಿ ರುದ್ರಭೂಮಿ ಉದ್ದೇಶಕ್ಕಾಗಿ ಶಾಂತಿನಗರ ಗ್ರಾಮದ ಜಮೀನಿನ ಸರ್ವೇ ನಂ.76/x/6 ಕ್ಷೇತ್ರ 1 ಎಕರೆ ಪೈಕಿ
30 ಗುಂಟೆ ಖಾಸಗಿ ಜಮೀನನ್ನು ಖರೀದಿಸಲಾಯಿತು. ಮಸ್ಕಿ ತಾಲೂಕಿನ ಸುಲ್ತಾನಪೂರ ಗೊಲ್ಲರಹಟ್ಟಿ ಗ್ರಾಮದ ಹನುಮವ್ವ ಗಂಡ ಹನುಮಂತು ಅವರಿಂದ 2 ಎಕರೆ ಖುಷ್ಕಿ ಭೂಮಿ, ಛತ್ರಮ್ಮ ಗಂಡ ದೊಡ್ಡ ಛತ್ರಪ್ಪ ದಂಡಿನ ಅವರಿಂದ 2 ಎಕರೆ ಖುಷ್ಕಿ ಭೂಮಿ, ತಿಮ್ಮಾಪುರ ಗ್ರಾಮದ ಶಾರದಾ ಗಂಡ ಹರಿಶ್ಚಂದ್ರ ರಾಠೊಡ್‌ ಇವರಿಂದ 1 ಎಕರೆ ಖುಷ್ಕಿ ಭೂಮಿಯನ್ನು ರುದ್ರಭೂಮಿಗಾಗಿ ಖರೀದಿಸಲಾಯಿತು.

ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದ ಯಲ್ಲಮ್ಮ ಗಂಡ ಕರಿಯಪ್ಪ ಮತ್ತು ದುರುಗಮ್ಮ ಗಂಡ ಕರೆಪ್ಪ ಅವರಿಂದ 18 ಗುಂಟೆ ತರಿ ಭೂಮಿ ಮತ್ತು ವಿರುಪಾಪುರ ಗ್ರಾಮದ ಕಂಟೆಪ್ಪ ತಂದೆ ಹುಸೇನಪ್ಪ ಇವರಿಂದ 35 ಗುಂಟೆ ತರಿ ಭೂಮಿ ಮತ್ತು ಸೋಮಲಾಪುರ ಗ್ರಾಮದ ನಾಗಮ್ಮ ಗಂಡ ಸೋಮಶೇಖರ್‌ ಅವರಿಂದ 01 ಎಕರೆ 20 ಗುಂಟೆ ತರಿ ಭೂಮಿ, ಗಾಂಧಿ ನಗರದ ಲಕ್ಷ್ಮೀಕಾಂತಮ್ಮ ಗಂಡ ವೀರವೆಂಕಣ್ಣ ಅವರಿಂದ 20 ಗುಂಟೆ ತರಿ ಭೂಮಿ, ಎ. ಮಂಗಾದೇವಿ ಗಂಡ ಕೊಂದರಿ ಶೀನು ಅವರಿಂದ 1 ಎಕರೆ 20 ಗುಂಟೆ ತರಿ ಭೂಮಿಯನ್ನು ರುಧ್ರಭೂಮಿಗಾಗಿ ಖರೀದಿಸಲಾಯಿತು. ಸಹಾಯಕ ಆಯುಕ್ತ ರಾಜಶೇಖರ್‌ ಡಂಬಳ, ರಾಯಚೂರು ತಹಶೀಲ್ದಾರ್‌ ಹಂಪಣ್ಣ ಸಜ್ಜನ್‌, ಸಿಂಧನೂರು ತಹಸೀಲ್ದಾರ್‌ ಮಂಜುನಾಥ, ಸಿಬ್ಬಂದಿ ವಿಲಾಸ್‌ ಸೇರಿ ಇತರರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು

ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು

ಕೋವಿಡ್ ನೀಡಿದ ಹೊಡೆತ: ಮುಖೇಶ್‌ ಅಂಬಾನಿ ಸಂಪತ್ತು ಶೇ.28ರಷ್ಟು ಕುಸಿತ

ಕೋವಿಡ್ ನೀಡಿದ ಹೊಡೆತ: ಮುಖೇಶ್‌ ಅಂಬಾನಿ ಸಂಪತ್ತು ಶೇ.28ರಷ್ಟು ಕುಸಿತ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

07-April-22

ಪಡಿತರಕ್ಕೆ ಮುಗಿಬಿದ್ದ ಫಲಾನುಭವಿಗಳು-ಆತಂಕ

07-April-06

ಎಚ್ಚರ..ಶಂಕಿತರ ಸಂಖ್ಯೆ ಹೆಚ್ಚಳ..!

ಎಪಿಎಂಸಿಯಲ್ಲಿ  ಸಾಮಾಜಿಕ ಅಂತರ ಮಾಯ

ಎಪಿಎಂಸಿಯಲ್ಲಿ ಸಾಮಾಜಿಕ ಅಂತರ ಮಾಯ

ಖಾಸಗಿ ಆಸ್ಪತ್ರೆ ,ಕ್ಲಿನಿಕ್ ಮುಚ್ಚಿದರೆ ಲೈಸೆನ್ಸ್ ರದ್ದು,  ಕ್ರಿಮಿನಲ್ ಕೇಸ್”:

“ಖಾಸಗಿ ಆಸ್ಪತ್ರೆ ,ಕ್ಲಿನಿಕ್ ಮುಚ್ಚಿದರೆ ಲೈಸೆನ್ಸ್ ರದ್ದು, ಕ್ರಿಮಿನಲ್ ಕೇಸ್”

ಸಚಿವರ ಸಭೆಯಲ್ಲಿ ಅನರ್ಹ ಶಾಸಕ: ರಾಮುಲು ಜೊತೆ ವೇದಿಕೆಯಲ್ಲಿ ಪ್ರತಾಪ್ ಗೌಡ ಪಾಟೀಲ್

ಸಚಿವರ ಸಭೆಯಲ್ಲಿ ಅನರ್ಹ ಶಾಸಕ: ರಾಮುಲು ಜೊತೆ ವೇದಿಕೆಯಲ್ಲಿ ಪ್ರತಾಪ್ ಗೌಡ ಪಾಟೀಲ್

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ದೇಹಕ್ಕಲ್ಲ, ಮನಸ್ಸಿಗೆ ಯೋಗ ಮಾಡಿಸಿ

ದೇಹಕ್ಕಲ್ಲ, ಮನಸ್ಸಿಗೆ ಯೋಗ ಮಾಡಿಸಿ

07-April-28

ಅಲೆಮಾರಿ ಕುಟುಂಬಗಳಿಗೆ ಆಹಾರ ಧಾನ್ಯ-ಮಾಸ್ಕ್ ವಿತರಣೆ

ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು

ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು

ಕೋವಿಡ್ ನೀಡಿದ ಹೊಡೆತ: ಮುಖೇಶ್‌ ಅಂಬಾನಿ ಸಂಪತ್ತು ಶೇ.28ರಷ್ಟು ಕುಸಿತ

ಕೋವಿಡ್ ನೀಡಿದ ಹೊಡೆತ: ಮುಖೇಶ್‌ ಅಂಬಾನಿ ಸಂಪತ್ತು ಶೇ.28ರಷ್ಟು ಕುಸಿತ

07-April-27

ಅಂತರ ಕಾಪಾಡಿ ಕೊರೊನಾ ಓಡಿಸಿ: ಮಹಾಂತೇಶ್‌