ಬಿಸಿಲಿನ ತಾಪಕ್ಕೆ ಬಸವಳಿದ ಜನ


Team Udayavani, Mar 1, 2020, 11:55 AM IST

1-March-07

ಸಿಂಧನೂರು: ಬೇಸಿಗೆಯ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಿದ್ದು, ರಣ ಬಿಸಲಿಗೆ ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಸಿಂಧನೂರು ತಾಲೂಕಿನಲ್ಲಿ ಕಳೆದ ವರ್ಷ 42-43 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ಬಾರಿ ಫೆಬ್ರವರಿ ಕೊನೆ ವಾರದಲ್ಲೇ 37ರಿಂದ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಈಗಲೇ ಬಿಸಿಲಿನ ಶಾಖಕ್ಕೆ ಹೈರಾಣಾಗಿರುವ ಜನತೆ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಿನಲ್ಲಿನ ಬಿಸಿಲು ಹೇಗಿರಬಹುದು ಎಂದು ಈಗಲೇ ಆತಂಕಗೊಳ್ಳುವಂತಾಗಿದೆ.

ಬಿಸಿಲಿನ ತಾಪ ಹೆಚ್ಚಿರುವುದರಿಂದ ಜನತೆ ಮಧ್ಯಾಹ್ನದ ಒಳಗೆ ಕೆಲಸ- ಕಾರ್ಯಗಳನ್ನು ಮುಗಿಸಿ ಮನೆ ಸೇರುತ್ತಿರುವುದು ಕಂಡು ಬರುತ್ತಿದೆ. ಇನ್ನು ಬೇಸಿಗೆ ರಜೆಯಲ್ಲಿ ಕೋಚಿಂಗ್‌ ಕ್ಲಾಸ್‌ಗೆ ಹೋಗುವ ವಿದ್ಯಾರ್ಥಿಗಳು ಕೂಡ ಕ್ಲಾಸ್‌ಗೆ ಹೋಗಲು ಹಿಂಜರಿಯುತ್ತಿದ್ದಾರೆ.

ತಂಪು ಪಾನೀಯಕ್ಕೆ ಮೊರೆ: ಇನ್ನು ಬಿಸಲಿನ ತಾಪಕ್ಕೆ ಬಸವಳಿದ ಜನರು ಮಧ್ಯಾಹ್ನ ದಾಹ ತಣಿಸಿಕೊಳ್ಳಲು ತಂಪು ಪಾನೀಯ, ಕಲ್ಲಂಗಡಿ ಹಣ್ಣು, ಎಳನೀರು, ಕಬ್ಬಿನ ಹಾಲು, ಐಸ್‌ ಕ್ರೀಮ್‌ ಮೊರೆ ಹೋಗುತ್ತಿದ್ದಾರೆ. ಪಟ್ಟಣದ ಮಹಾವೀರ ವೃತ್ತ, ಬಡಿಬೇಸ್‌ ವೃತ್ತ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಅಂಬೇಡ್ಕರ್‌ ವೃತ್ತ ಸೇರಿ ಜನನಿಬಿಡ ರಸ್ತೆಗಳಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಜೋರಾಗಿ ನಡೆಯುತ್ತಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜನರು ಕಲ್ಲಂಗಡಿ ಹಣ್ಣು ತಿಂದು ಬಾಯಿ ತಂಪು ಮಾಡಿಕೊಳ್ಳುತ್ತಿದ್ದಾರೆ .

ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಮನೆಯಲ್ಲೂ ಬಿಸಿಲಿನ ತಾಪ ಹೆಚ್ಚು ಕಾಣುತ್ತಿದೆ. ರಸ್ತೆ ಬದಿಯಲ್ಲಿ ಗಿಡ-ಮರಗಳಿಲ್ಲದಿರುವುದು ಬಿಸಿಲಿನ ತಾಪ ಹೆಚ್ಚಾಗಲು ಕಾರಣವಾಗಿದೆ. ದಾಹ ತಣಿಸಿಕೊಳ್ಳಲು ತಂಪು ಪಾನೀಯ ಕುಡಿಯುವುದು ಅನಿವಾರ್ಯವಾಗಿದೆ.
ನಿರುಪಾದಿ ಗೋಸ್ಲೆ,
ಸಿಂಧನೂರು

ಪ್ರತಿ ಬಾರಿ ಏಪ್ರಿಲ್‌ನಲ್ಲಿ ಬಿಸಿಲಿನ ತಾಪಮಾನ ಕಂಡು ಬರುತ್ತಿತ್ತು.ಆದರೆ ಈ ಬಾರಿ ಫೆಬ್ರವರಿ ಕೊನೆ ವಾರದಲ್ಲೇ ಬಿಸಿಲಿನ ತಾಪಮಾನ ಹೆಚ್ಚಿದ್ದರಿಂದ ಕಲ್ಲಂಗಡಿ ಹಣ್ಣಿನ ವ್ಯಾಪಾರ ಚೆನ್ನಾಗಿ ಆಗುತ್ತಿದೆ. ಆದರೆ ನಮಗೂ ಬಿಸಿಲಲ್ಲಿ ನಿಂತು ವ್ಯಾಪಾರ ಮಾಡಲಾಗುತ್ತಿಲ್ಲ.
ಬಸವರಾಜ,
ಕಲ್ಲಂಗಡಿ ಹಣ್ಣಿನ ವ್ಯಾಪಾರಿ

ಟಾಪ್ ನ್ಯೂಸ್

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ

1-dads

ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ದಚಿತ್ರ ಆಯ್ಕೆ: ವಿಶೇಷತೆಗಳೇನು ನೋಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18officers

ಮುಖ್ಯಾಧಿಕಾರಿ ಕಾರ್ಯವೈಖರಿಗೆ ಸದಸ್ಯರು ಗರಂ

17death

ಮಗನ ಕಿರಿಕಿರಿಗೆ ಬೇಸತ್ತು ಕೊಲೆಗೈದ ಕುಟುಂಬ

10kit

ಆಹಾರ ಧ್ಯಾನ ಕಿಟ್‌ಗಾಗಿ ದಿಢೀರ್‌ ಪ್ರತಿಭಟನೆ

9child

ಮಕ್ಕಳ ಹಕ್ಕು ರಕ್ಷಣೆ ಪ್ರತಿ ನಾಗರಿಕನ ಹೊಣೆ

23workers

ವೇತನ ಖಾತ್ರಿಗೆ ನಿಲಯ ಕಾರ್ಮಿಕರ ಆಗ್ರಹ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಅಂಕೋಲಾ: ಬಡ್ಡಿ ಸಾಲ ಕಿರುಕುಳ ವಿಷ ಸೇವಿಸಿ ವ್ಯಕ್ತಿ ಸಾವು

ಅಂಕೋಲಾ: ಬಡ್ಡಿ ಸಾಲ ಕಿರುಕುಳ ವಿಷ ಸೇವಿಸಿ ವ್ಯಕ್ತಿ ಸಾವು

ಪಿಎಸೈ ನೇಮಕಾತಿ : ಅಭ್ಯರ್ಥಿಗಳಿಗೆ ಮೆರಿಟ್ ಮೂಲಕ ಆದ್ಯತೆ ನೀಡುವಂತೆ ಇಲಾಖೆಗೆ ಪತ್ರ

ಪಿಎಸೈ ನೇಮಕಾತಿ : ಅಭ್ಯರ್ಥಿಗಳಿಗೆ ಮೆರಿಟ್ ಮೂಲಕ ಆದ್ಯತೆ ನೀಡುವಂತೆ ಇಲಾಖೆಗೆ ಶಾಸಕರ ಪತ್ರ

ಷಅದಗಹಜಹಬವಚಷಱ

ಶರಣರು ಜಾತಿ-ಮತಕ್ಕೆ ಸೀಮಿತರಲ್ಲ

ಅಕ್ರಮ ಅಕ್ಕಿ ಜಪ್ತಿ: ಓರ್ವನ ಬಂಧನ

ಅಕ್ರಮ ಅಕ್ಕಿ ಜಪ್ತಿ: ಓರ್ವನ ಬಂಧನ

್ಹಗಹ್ದಗದಅಸದ

ಚೌಡಯ್ಯ-ಸಿದ್ದ ಗಂಗಾ ಶ್ರೀಗೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.