Udayavni Special

ವಾರದೊಳಗೆ ಇಳಿಯಿತು ಎಣ್ಣೆ ಕಿಕ್‌!


Team Udayavani, May 17, 2020, 12:10 PM IST

17-May-06

ಸಾಂದರ್ಭಿಕ ಚಿತ್ರ

ರಾಯಚೂರು: ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಆದರೆ, ಕೇವಲ 10 ದಿನದೊಳಗೆ ಮದ್ಯ ಮಾರಾಟದ ಪ್ರಮಾಣದಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿದೆ.

ಸರ್ಕಾರ ಲಾಕ್‌ಡೌನ್‌ ನಡುವೆಯೂ ಮೇ 4ರಂದು ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಮೊದಲ ದಿನವೇ ಜಿಲ್ಲೆಯಲ್ಲಿ 2.5 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಅದಾದ ನಾಲ್ಕೈದು ದಿನಗಳ ಮಟ್ಟಿಗೆ ಚೆನ್ನಾಗಿಯೇ ವಹಿವಾಟು ನಡೆಯಿತು. ಬಳಿಕ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ಗಳಿಗೂ ಮಾರಾಟಕ್ಕೆ ಅವಕಾಶ ನೀಡಲಾಯಿತು. ಅದರ ಜತೆಗೆ ಸರ್ಕಾರ ಶೇ.17 ದರ ಹೆಚ್ಚಿಸಿತು. ದರ ಹೆಚ್ಚಿಸುತ್ತಿದ್ದಂತೆ ಮದ್ಯ ಮಾರಾಟ ಪ್ರಮಾಣದಲ್ಲಿ ನಿಧಾನಕ್ಕೆ ಇಳಿಕೆ ಕಂಡು ಬಂದಿದೆ. ಏನಿಲ್ಲವೆಂದರೂ ಶೇ.20-30 ಕುಸಿತ ಕಂಡಿದೆ.

ಮೇ 4ರಂದು ಜಿಲ್ಲೆಯಲ್ಲಿ 53,768 ಲೀ. ಮದ್ಯ ಹಾಗೂ 13,895 ಲೀಟರ್‌ ಬಿಯರ್‌ ಮಾರಾಟವಾಗಿತ್ತು. ಮೇ 5ರಂದು 32,437 ಲೀ. ಮದ್ಯ ಹಾಗೂ 10,785 ಲೀ. ಬಿಯರ್‌ ಮಾರಾಟವಾಗಿತ್ತು. ಮೇ 6ರಂದು 59,926 ಲೀ. ಮದ್ಯ, 12,672 ಲೀ. ಬಿಯರ್‌ ಮಾರಾಟವಾಗಿದೆ. ಮೇ 7ರಂದು 49,023 ಲೀ. ಮದ್ಯ ಹಾಗೂ 11,162 ಲೀ. ಬಿಯರ್‌ ಮಾರಾಟವಾಗಿದೆ. ಆದರೆ, ಮೇ 13ರಂದು ಮಾರಾಟ ಪರಿಶೀಲಿಸಿದರೆ 32,059 ಲೀ. ಮದ್ಯ ಮಾರಾಟವಾದರೆ, 7,514 ಲೀ. ಬಿಯರ್‌ ಮಾರಾಟವಾಗಿದೆ. ಮೇ 15ರಂದು 30570 ಲೀ. ಮದ್ಯ ಹಾಗೂ 8099 ಲೀ. ಬಿಯರ್‌ ಮಾರಾಟವಾಗಿದೆ. ಅಂದರೆ ಸರಾಸರಿ ಶೇ.20ರಿಂದ 30 ಕಡಿಮೆ ಮಾರಾಟ ಕಡಿಮೆಯಾಗಿದೆ.

ಜನರಿಗೆ ಕೆಲಸವಿಲ್ಲ: ಲಾಕ್‌ಡೌನ್‌ ವೇಳೆ ಬಡ ಜನರಿಗೆ ಮದ್ಯ ಸಿಗುವುದೇ ದುಸ್ತರವಾಗಿತ್ತು. ಯಾವುದೇ ಬ್ರಾಂಡ್‌ನ‌ ಮದ್ಯ ಏನಿಲ್ಲವೆಂದರೂ ಐದು ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗಿದೆ. ಇದರಿಂದ ಸಾಕಷ್ಟು ಶ್ರಮಿಕರು ಕಳ್ಳಭಟ್ಟಿ, ಸೇಂದಿ, ಸಿಎಚ್‌ ಪೌಡರ್‌ ಮೊರೆ ಹೋಗಿದ್ದರು. ಯಾವಾಗ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತೋ ನಾ ಮುಂದು.. ನೀ ಮುಂದು.. ಎನ್ನುವಂತೆ ಮದ್ಯಪ್ರಿಯರು ಖರೀದಿಗೆ ಮುಗಿ ಬಿದ್ದರು. ಆದರೆ, ಅದು ಹೆಚ್ಚು ದಿನ ನಡೆಯಲಿಲ್ಲ. ಇನ್ನೂ ಜನರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುತ್ತಿಲ್ಲ. ಸಿಕ್ಕರೂ ಕೈಗೆ ಹಣ ದಕ್ಕುತ್ತಿಲ್ಲ. ಹೀಗಾಗಿ ಕುಡಿಯಬೇಕೆಂದರೂ ಹಣದ ಅಭಾವ ಕಾಡುತ್ತಿದೆ. ಅದರ ಜತೆಗೆ ಸರ್ಕಾರ ಶೇ.17 ದರ ಹೆಚ್ಚಿಸಿರುವುದು ಮದ್ಯಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ.

ಆರಂಭಿಕ ದಿನಗಳಿಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿದೆ. ಲಾಕ್‌ ಡೌನ್‌ ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರವಾಗಿಲ್ಲದ ಕಾರಣ ಜನರಲ್ಲಿ ಹಣದ ವಹಿವಾಟು ನಡೆಯುತ್ತಿಲ್ಲ. ಆದರೂ ಸರಾಸರಿ ಮಾರಾಟ ನಡೆಯುತ್ತಿದೆ. ಮೇ 4ಕ್ಕೆ ಹೋಲಿಸಿದರೆ ಶೇ.20ಕ್ಕಿಂತ ಹೆಚ್ಚು ಪ್ರಮಾಣ ಕಡಿಮೆಯಾಗಿದೆ. ಇನ್ನೂ ಬಾರ್‌ಗಳಲ್ಲಿ ಮಾರಾಟಕ್ಕೆ ಮೇ 18ರ ವರೆಗೆ ಅವಕಾಶ ನೀಡಿದ್ದು, ಅದನ್ನು ಮುಂದುವರಿಸಬೇಕೇ ಬೇಡವೆ ಎಂಬ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ.
ಕೆ. ಪ್ರಶಾಂತ ಕುಮಾರ್‌,
ಅಬಕಾರಿ ಇಲಾಖೆ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

ಅರಕೇರಾ ತಾಲೂಕು ಕೇಂದ್ರ ಕೈ ಬಿಡಲು ಒತ್ತಾಯ

16

ಕೋವಿಡ್‌ ಭತ್ಯೆ ಬಾಕಿ ವಿತರಣೆಗೆ ಆಗ್ರಹ

15

18ಕ್ಕೆ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

13

ಕರಿಯಪ್ಪನವರ ಸಮಾಜಸೇವೆ ಶ್ಲಾಘನೀಯ

12

ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

suicide

ಮೋಸ ಮಾಡಿದವನನ್ನು ಗಲ್ಲಿಗೇರಿಸಿ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

nayi

ಸಿಸಿ ಕ್ಯಾಮರಾ, ಸಾಮಾಜಿಕ ಜಾಲತಾಣಗಳಿಂದ ನಾಯಿಮರಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.