Udayavni Special

ನೆಲಕ್ಕುರುಳಿದ ಭತ್ತ; ಮತ್ತೆ ಸಂಕಷ್ಟದಲ್ಲಿ ರೈತ

Team Udayavani, Nov 30, 2020, 3:47 PM IST

ನೆಲಕ್ಕುರುಳಿದ ಭತ್ತ; ಮತ್ತೆ  ಸಂಕಷ್ಟದಲ್ಲಿ ರೈತ

ಬಳಗಾನೂರು: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ನಿವಾರ್‌ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಕಟಾವು ಹಂತದಲ್ಲಿರುವ ಭತ್ತ ಸೇರಿ ಇತರೆ ಬೆಳೆಗಳು ನೆಲಕ್ಕುರುಳಿದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಐದಾರು ದಿನಗಳ ಹಿಂದೆಯೇ ಕಟಾವು ಮಾಡಿದ ಭತ್ತ ಮಳೆ ಸುರಿದ ಹಿನ್ನೆಲೆಯಲ್ಲಿ ತೊಯ್ದು ಇದ್ದ ಸ್ಥಳದಲ್ಲಿಯೇ ಮೊಳಕೆಯೊಡೆದು ಹಾಳಾಗಿದೆ. ಭತ್ತ ಒಣಗಿಸಲು ರೈತ ಹರಸಹಾಸಪಡುವಂತಾಗಿದ್ದು, ಆಳುಗಳ ಮೂಲಕ ಕಾಳಿಗಾಗಿ ಪರದಾಡುವಂತಾಗಿದೆ.

ಜಿಟಿ-ಜಿಟಿ ಮಳೆ ಹಾಗೂ ಶೀತ ಗಾಳಿ ಬೀಸಿದ ಪರಿಣಾಮವಾಗಿ ರೈತರು ನಾಟಿ ಮಾಡಿದ ಭತ್ತದ ಬೆಳೆ ಜೋಳ, ಕಡಲೆ ಸೇರಿ ಇತರೆ ಬೆಳೆಗಳು ನೆಲಕ್ಕುರುಳಿ ನಾಶವಾಗಿದೆ. ಇದರಿಂದಾಗಿ ರೈತ ಭತ್ತ ನಾಟಿ ಮಾಡಲು ಎಕರೆಯೊಂದಕ್ಕೆ ಸುಮಾರು 30ರಿಂದ 35 ಸಾವಿರ ರೂ. ಖರ್ಚು ಮಾಡಿದ್ದಾರೆ. ಮಾರುಕಟ್ಟೆಯಲ್ಲಿರೈತರ ಭತ್ತಕ್ಕೆ ಬೆಲೆ ತೀವ್ರ ಕುಸಿತಗೊಂಡಿದ್ದು ಒಂದೆಡೆಯಾದರೆ, ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿ ಹಾಳಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಪರಿಹಾರ ಕಲ್ಪಿಸಲು ಒತ್ತಾಯ: ಕಂದಾಯ ಇಲಾಖೆ ಅಧಿಕಾರಿಗಳು ಹಾಳಾಗಿರುವ ಭತ್ತ ವೀಕ್ಷಣೆ ಮಾಡಿ, ರೈತರಿಗೆ ಆದ ಹಾನಿ ಕುರಿತು ಮಾಹಿತಿ ಸಂಗ್ರಹಿಸಿ ಪರಿಹಾರ ಕಲ್ಪಿಸಲು ಮುಂದಾಗಬೇಕು. ಈ ಕುರಿತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕೊರತೆ: ಮಳೆ ಭೀತಿ ಹಿನ್ನೆಲೆಯಲ್ಲಿ ಈ ಭಾಗಲ್ಲಿ ಭತ್ತ ಕಟಾವಿಗಾಗಿ ರೈತರಿಗೆ ಸೂಕ್ತ ಸಮಯದಲ್ಲಿ ಯಂತ್ರ ಸಿಗುತ್ತಿಲ್ಲ ಮತ್ತು ಭತ್ತ ಕಟಾವಿಗಾಗಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತೂ ಹೆಚ್ಚು ಹಣ ನೀಡುತ್ತಿದ್ದರೂ ಯಂತ್ರಗಳು ರೈತರಿಗೆ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಭತ್ತ ನೆಲಕ್ಕುರುಳಿರುವ ಹಿನ್ನೆಲೆಯಲ್ಲಿ ಯಂತ್ರ ಕಟಾವಿಗಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು ರೈತನಿಗೆ ಇನ್ನಷ್ಟು ಭಾರವಾಗಿ ಪರಿಣಮಿಸಿದೆ.

ಅಪಾರ ನಷ್ಟ  :  ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ ಹಿನ್ನೆಲೆ ಇಳುವರಿ ತೀವ್ರ ಕಡಿಮೆಯಾಗಿ ಅಪಾರ ನಷ್ಟವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರಿಹಾರ ಕಲ್ಪಿಸಲು ಮಾಹಿತಿ ಸಂಗ್ರಹಿಸಬೇಕು. ಸರ್ಕಾರ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತ ಶಿವಣ್ಣ ಗಬ್ಬೂರು ಆಗ್ರಹಿಸಿದ್ದಾರೆ.

ಪರಿಹಾರ ಕಲ್ಪಿಸಿ :  ಜೀವನೋಪಾಯಕ್ಕೆ ಇದ್ದ ಆರು ಎಕರೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಎಲ್ಲ ರೈತರ ಮುಂದಿನ ಬದುಕು ಭತ್ತದ ಬೆಳೆಯನ್ನೇ ಅವಲಂಬಿಸಿದೆ. ರೈತರಿಗಾದ ನಷ್ಟಕ್ಕೆ ಶೀಘ್ರ ಪರಿಹಾರ ರೂಪದಲ್ಲಿ ದೊರೆಯಬೇಕು ಎಂದು ರೈತ ಭೂಕೈಲಾಸಪ್ಪ ದೇವರಮನಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ

ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ

ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

ಮುಸ್ಲಿಂ ಮತಗಳ ಮೇಲೆ  ಚಿತ್ತ: ನಿತೀಶ್ ಸಂಪುಟಕ್ಕೆ ಬಿಜೆಪಿಯ ಶಹನವಾಜ್ ಸೇರ್ಪಡೆ ಸಾಧ್ಯತೆ

ಮುಸ್ಲಿಂ ಮತಗಳ ಮೇಲೆ ಚಿತ್ತ: ನಿತೀಶ್ ಸಂಪುಟಕ್ಕೆ ಬಿಜೆಪಿಯ ಶಹನವಾಜ್ ಸೇರ್ಪಡೆ ಸಾಧ್ಯತೆ

Weight LossHigh-Protein Diet: Eating Protein-Packed Meals May Help You Combat Obesity – Experts Reveal; 9 Food Tips High-Protein Diet: Eating Protein-Packed Meals May Help You Combat Obesity – Experts Reveal; 9 Food Tips

“ಪ್ರೋಟೀನ್ ಯುಕ್ತ ಆಹಾರ ಸೇವನೆ : ಪಥ್ಯೆಯಿಲ್ಲದೆ ಬೊಜ್ಜು ಕರಗಲು ಸಾಧ್ಯ”

ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣ: ಶಾಸಕ ಮುನಿರತ್ನಗೆ ರಿಲೀಫ್

ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣ: ಶಾಸಕ ಮುನಿರತ್ನಗೆ ರಿಲೀಫ್

Whatsapp

ತಪ್ಪು ಗ್ರಹಿಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ : ವಾಟ್ಸಾಪ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

All rights reserved.

ನಾಲ್ಕು ವರ್ಷವಾದ್ರೂ ಅಲೆಮಾರಿಗಳಿಗಿಲ್ಲ ಸೂರು!

Illegal Shelter issu

ಗೊಂದಲದ ಗೂಡಾದ ಆಶ್ರಯದ ಅಕ್ರಮವಾಸ!

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಭತ್ತ ನಾಟಿ ಕಾರ್ಯ ಚುರುಕು; ನೀರು ಸಿಗುವುದೇ ಡೌಟ್‌!

ಭತ್ತ ನಾಟಿ ಕಾರ್ಯ ಚುರುಕು; ನೀರು ಸಿಗುವುದೇ ಡೌಟ್‌!

Kamagari

ಕಾಮಗಾರಿ ಬಿಲ್‌ ಪಾವತಿ ವಿಳಂಬ ಬೇಡ

MUST WATCH

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

ಹೊಸ ಸೇರ್ಪಡೆ

ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ

ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ

ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರಿನಿಂದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ನೇಪಾಳದ ಮಾಜಿ ಪೊಲೀಸ್ ಸಿಬ್ಬಂದಿ ಬಂಧನ

ಬೆಂಗಳೂರಿನಿಂದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ನೇಪಾಳದ ಮಾಜಿ ಪೊಲೀಸ್ ಸಿಬ್ಬಂದಿ ಬಂಧನ

G. Parameshwara speech

ಬಿಜೆಪಿ ಯೋಜನೆಗಳೇ ಮಾಯ

ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.