ನೆಟ್ಟಗಿದ್ದ ರಸ್ತೆ ಸುಧಾರಣೆಗೆ ಮತ್ತೆ ಹಣ

|ಟೀಕೆಗೆ ಗುರಿಯಾದ ಹೆದ್ದಾರಿ ಪ್ರಾಧಿಕಾರದ ನಡೆ | ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ

Team Udayavani, Dec 24, 2020, 3:45 PM IST

ನೆಟ್ಟಗಿದ್ದ ರಸ್ತೆ ಸುಧಾರಣೆಗೆ ಮತ್ತೆ ಹಣ

ಮಸ್ಕಿ: ನೆಟ್ಟಗಿದ್ದ ರಸ್ತೆಗೆ ಮತ್ತೆ 5.5 ಕೋಟಿ ರೂ. ಹಂಚಿಕೆಯಾಗಿದ್ದು, ಕಾಮಗಾರಿಯೂ ಭರದಿಂದ ಸಾಗಿದೆ.

ಹೌದು, ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಲಿಂಗಸುಗೂರು-ಸಿಂಧನೂರು ರಾಜ್ಯ ಹೆದ್ದಾರಿಯ ಕಥೆ ಇದು. ಇತ್ತೀಚೆಗೆ ಸುಧಾರಣೆಯಾಗಿದ್ದರೂ ಮತ್ತೆ ನೆಟ್ಟಗಿರುವರಸ್ತೆ ಮೇಲೆ ಡಾಂಬರ್‌ ಹಾಕಿ ಸುಧಾರಣೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಏನಿದರ ಅಸಲಿಯತ್ತು?: ಸಿಂಧನೂರು- ಲಿಂಗಸುಗೂರು ಅಂದಾಜು 50 ಕಿ.ಮೀ ಉದ್ದದ ಈ ರಸ್ತೆ ಈ ಹಿಂದೆ ಜೇವರ್ಗಿ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಾಗಿತ್ತು. ಆದರೆ ಇತ್ತೀಚೆಗೆ ಈರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಎನ್‌ ಎಚ್‌-150(ಎ) ಎಂದು ಘೋಷಿಸಲಾಗಿದೆ.ಈ ಹಿಂದೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದ ಈ ರಾಜ್ಯ ಹೆದ್ದಾರಿಯನ್ನು ಅಂದಾಜು 70 ಕೋಟಿ ಮೊತ್ತದಲ್ಲಿ ಸಂಪೂರ್ಣ ರಿಪೇರಿ ಮಾಡಲಾಗಿತ್ತು. ಈ ರಿಪೇರಿ ಭಾಗ್ಯ ಕಂಡ ಬಳಿಕ ಸಿಂಧನೂರು-ಮುದಬಾಳ ಕ್ರಾಸ್‌ವರೆಗೆ ರಸ್ತೆ ಎಲ್ಲೂಕೂಡ ಹಾಳಾಗಿಲ್ಲ. ಬದಲಾಗಿ ಮುದಬಾಳ ಕ್ರಾಸ್‌ -ಲಿಂಗಸುಗೂರುವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ಆದರೆ ಹಾಳಾದ ಮಾರ್ಗ ಬಿಟ್ಟು ನೆಟ್ಟಗಿರುವ ರಸ್ತೆಯ ಮೇಲೆ ಮರು ಡಾಂಬರೀಕರಣ (ರಿ ಕಾಪೇìಟಿಂಗ್‌) ಮಾಡಲಾಗುತ್ತಿದೆ.

5.5 ಕೋಟಿ ರೂ.: ಕಳೆದ ಮೂರು ವರ್ಷಗಳ ಹಿಂದೆ ಸರಕಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೇಗೇರಿಸಿ ರಸ್ತೆ ಅಭಿವೃದ್ಧಿ ಮಾಡಲು ಹೆದ್ದಾರಿ ಪ್ರಾ ಧಿಕಾರ ಸರ್ವೇ ಕಾರ್ಯ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರನ್ವಯ ಈಗ ಈ ರಸ್ತೆ ರಿಪೇರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 5.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ನಿರ್ವಹಣೆ ನೆಪದಲ್ಲಿ ಈ ಕಾಮಗಾರಿ ಆರಂಭಿಸಲಾಗಿದೆ. ಈ ಮೊತ್ತದಲ್ಲಿ ಹಾಳಾಗಿರುವಮುದಬಾಳಕ್ರಾಸ್‌-ಲಿಂಗಸುಗೂರುವರೆಗಿನ ರಸ್ತೆಯಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು, ಮುದಬಾಳ ಕ್ರಾಸ್‌-ಸಿಂಧನೂರು ಮಾರ್ಗದ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ರಸ್ತೆ ಎಡ, ಬಲ ಬದಿ (ಶೋಲ್ಡರ್‌) ಸ್ವತ್ಛತೆ, ಸುಧಾರಣೆ ಇರುವ ಇರುವರಸ್ತೆ ಮೇಲೆ ಮರು ಡಾಂಬರ್‌ ಸುರಿಯಲಾಗುತ್ತಿದೆ.

ವ್ಯಾಪಕ ಟೀಕೆ: ಮಸ್ಕಿ-ಸಿಂಧನೂರು- ಲಿಂಗಸುಗೂರು ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ವಾಹನಗಳಸಂಚಾರ ಮಾಡುತ್ತಿವೆ. ಅದರಂತೆ ಮಸ್ಕಿಯ ಹತ್ತಿರಮುದಬಾಳ ಕ್ರಾಸ್‌ನಿಂದ ಸಿಂಧನೂರುವರೆಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಪಿಡಬ್ಲೂಡಿ ಇಲಾಖೆಯ ವತಿಯಿಂದ ಅಭಿವೃದ್ಧಿಪಡಿಸಿ ಸಾರ್ವಜನಿಕರಸಂಚಾರಕ್ಕೆ ಅನೂಕೂಲ ಮಾಡಿದ್ದರು. ಆದರೆ ಮುದಬಾಳ ಕ್ರಾಸ್‌ನಿಂದ ಲಿಂಗಸುಗೂರುವರೆಗೆ ಸುಮಾರು 26 ಕಿಮೀ ರಸ್ತೆಯನ್ನು ಮಾತ್ರ ಅಂದಿನಿಂದ ಇವರೆಗೆ ಅಭಿವೃದ್ಧಿ ಮಾಡಿಲ್ಲ. ಬರಿ ನೆಪ ಮಾತ್ರಕ್ಕೆ ಎನ್ನುವಂತೆ ರಸ್ತೆಯ ಗುಂಡಿಗಳನ್ನುಮುಚ್ಚಿ ಕೈ ತೊಳೆದುಕೊಂಡಿದೆ. ಇದರಿಂದವಾಹನ ಸವಾರರು ತೊಂದರೆ ಪಡುವಂತಾಗಿದೆ.ಲಿಂಗಸುಗೂರಿನಿಂದ ಮುದಬಾಳ ಕ್ರಾಸ್‌ವರಗೆರಸ್ತೆ ಹದಗೆಟ್ಟು ವರ್ಷಗಳವೇ ಗತಿಸಿವೆ. ಅಲ್ಲದೇ ರಸ್ತೆಯೂ ಸಹ ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ವಿಸ್ತರಣೆಯಾಗಿಲ್ಲ. ಹೀಗಾಗಿ ಈ ರಸ್ತೆಯ ಸುಧಾರಣೆ ಕೈಗೆತ್ತಿಕೊಳ್ಳುವ ಬದಲು ಚೆನ್ನಾಗಿರುವ ರಸ್ತೆಯ ರಿಪೇರಿ ನಡೆಸಿದ್ದರಿಂದ ನಾನಾ ಅನುಮಾನಕ್ಕೆ ಕಾರಣವಾಗಿದೆ. ಇದು ನೈಜವಾಗಿ ರಿಪೇರಿ ಕಾರ್ಯವೇಅಥವಾ ಗುತ್ತಿಗೆದಾರರ ಅನುಕೂಲಕ್ಕಾಗಿ ಬಿಲ್ವಿದ್ಯೆಯ ನೆಪಕ್ಕೆ ಕಾಮಗಾರಿ ಮಾಡಲಾಗುತ್ತಿದೆಯಾ? ಎನ್ನುವ ಗುಮಾನಿಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.  ಈ ಬಗ್ಗೆ ಸ್ವತಃ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನಗುಂದ ವಿಭಾಗದ ಅಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ.

ಎನ್‌ಎಚ್‌-150 (ಎ) ರಸ್ತೆ ಮೇಲ್ದರ್ಜೇಗೇರಿದ ಬಳಿಕ ಇದುವರೆಗೆ ಕಾಮಗಾರಿ ಮಾಡಿರಲಿಲ್ಲ. ಈಗ ಈ ಹಿಂದೆ ಮಾಡಿದ ಕಾಮಗಾರಿ ನಿರ್ವಹಣೆ ಅವಧಿ ಮುಗಿದಿದ್ದು, ರಸ್ತೆ ಆಂತರಿಕವಾಗಿ ಹದಗೆಟ್ಟಿದೆ ಹೀಗಾಗಿ ಈಗ ರೀ ಕಾರ್ಪೆಟಿಂಗ್‌ ಕೈಗೊಳ್ಳಲಾಗಿದೆ.  ವಿಜಯಕುಮಾರ್‌ ಪಾಟೀಲ್‌, -ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹುನಗುಂದ ವಿಭಾಗ.

-ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.