ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ: ಎಚ್ ಡಿಕೆ

ಸೌಹಾರ್ದತೆಗೆ ನೆರೆ ರಾಜ್ಯದ ಸಿಎಂ ಧಕ್ಕೆ ತರುವ ಕಾರ್ಯ ಮಾಡಬಾರದು

Team Udayavani, Aug 19, 2022, 2:13 PM IST

2HDK

ರಾಯಚೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಧಿಕಾರದಾಸೆಗೆ ಮನಬಂದಂತೆ ಹೇಳಿಕೆ ನೀಡುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ಬರುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದರು.

ಮಾನ್ವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಭಯ ಪಕ್ಷಗಳ ನಾಯಕರು ಸಮಾಜದಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಜನರ ಪರ ಕಾಳಜಿಯಿಲ್ಲ. ಕೇವಲ ಸಣ್ಣ ವಿಚಾರಗಳಿಗೆ ಹೆಚ್ಚು ಮಹತ್ವ ಕೊಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಸಮಾಜದಲ್ಲಿ ಶಾಂತಿ ಬಯಸುತ್ತದೆ. ಯುವಕರು ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೇ ಸಮಾಜ ಕಟ್ಟುವ ಕೆಲಸ ಮಾಡಲಿ ಎಂದರು.

ಇತಿಹಾಸ ಗೊತ್ತಿಲ್ಲದ ಕೆಲ ನಾಯಕರು ಗಾಂಧೀಜಿ ಹತ್ಯೆ ಮಾಡಿದವರನ್ನೂ ಹೋರಾಟಗಾರರಂತೆ ಬಿಂಬಿಸುವ ಪ್ರಯತ್ನಿಸುತ್ತಿರುವುದು ವಿಷಾದದ ಸಂಗತಿ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ಕೋಮು ದಳ್ಳುರಿ ಸೃಷ್ಟಿಸುತ್ತಿರುವುದು ಜನ ಗಮನಿಸುತ್ತಿದ್ದಾರೆ. ಬಿಜೆಪಿ ಕಳ್ಳ ಮಾರ್ಗದಲ್ಲೇ ಅಧಿಕಾರಕ್ಕೆ ಬಂದಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಅಸಮರ್ಥವಾಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಗಿರುವ ಬದ್ಧತೆ ರಾಷ್ಟ್ರೀಯ ಪಕ್ಷಗಳಿಗಿಲ್ಲ ಎಂದರು.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಬಿಜೆಪಿಯ ಕೇಂದ್ರದ ಸಂಸದೀಯ ಮಂಡಳಿಗೆ ಬಿಎಸ್ ವೈ ನೇಮಕ ಮಾಡಲಾಗಿದೆ. ಚುನಾವಣೆ ನಂತರ ಅವರನ್ನು ಕೇಂದ್ರ ಬಿಜೆಪಿ ನಾಯಕರು ಮತ್ತೆ ಮನೆಗೆ ಕಳಿಸುತ್ತಾರೆ. ರಾಜ್ಯ ರಾಜಕೀಯ ವಿದ್ಯಮಾನಗಳಿಂದ ಕೆಲ ನಾಯಕರು ಆನೆಬಲ ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದು, ಯಾವ ಆನೆ ಬಲ ಇಲ್ಲ. ಇದು ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದರು.

ಇದನ್ನೂ ಓದಿ:“ರಾಷ್ಟ್ರೀಯ ಮಿಷನ್” ಗಾಗಿ “ಮಿಸ್ಡ್ ಕಾಲ್” ಅಭಿಯಾನ ಪ್ರಾರಂಭಿಸಿದ ಕೇಜ್ರಿವಾಲ್

ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಸಿಆರ್ ನಮ್ಮ ಆತ್ಮೀಯರು. ಹಾಗೆಂದ ಮಾತ್ರಕ್ಕೆ ರಾಯಚೂರಲ್ಲ ರಾಜ್ಯದ ಯಾವುದೇ ಭಾಗವನ್ನು ಬಿಟ್ಟು ಕೊಡುವ ಮಾತಿಲ್ಲ.  ಆಂಧ್ರದ ವಲಸಿಗರನ್ನು ನಮ್ಮವರಂತೆಯೇ ಕಂಡು ಕೃಷಿ ಕ್ಷೇತ್ರದಲ್ಲಿ ಅವಕಾಶ ಮಾಡಿ ಕೊಟ್ಟಿದ್ದೇವೆ.  ಸೌಹಾರ್ದತೆಗೆ ನೆರೆ ರಾಜ್ಯದ ಸಿಎಂ ಧಕ್ಕೆ ತರುವ ಕಾರ್ಯ ಮಾಡಬಾರದು ಎಂದರು.

ಟಾಪ್ ನ್ಯೂಸ್

dr-sudhakar

ಡಿಸೆಂಬರ್‌ 15 ರ ವೇಳೆಗೆ ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್‌ʼ ಕಾರ್ಯಾರಂಭ: ಡಾ.ಕೆ.ಸುಧಾಕರ್‌

1-asdada

ಪಠಾಣ್‌ಕೋಟ್: ಎಲ್ಲೆಡೆ ಸಂಸದ ಸನ್ನಿ ಡಿಯೋಲ್ ನಾಪತ್ತೆ ಪೋಸ್ಟರ್ ಗಳು

1-sdaddasd

ತೆಂಡೂಲ್ಕರ್ ಜತೆಯಲ್ಲಿ ಧೋನಿ: ವೈರಲ್ ಆದ ಫೋಟೋಗಳು

ಪಣಜಿ: ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಸಂಚು ರೂಪಿಸುತ್ತಿದೆ : ಅಮಿತ್ ಪಾಲೇಕರ್ ಆರೋಪ

ಪಣಜಿ: ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಸಂಚು ರೂಪಿಸುತ್ತಿದೆ : ಅಮಿತ್ ಪಾಲೇಕರ್ ಆರೋಪ

‘ಹಿಂದೂ’ ಪದವನ್ನು  ಸೃಷ್ಟಿಸಿದ್ದು ಬ್ರಿಟಿಷರು: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

‘ಹಿಂದೂ’ ಪದವನ್ನು ಸೃಷ್ಟಿಸಿದ್ದು ಬ್ರಿಟಿಷರು: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

1-ssdssd

ಲೋಕಾರ್ಪಣೆಗೊಂಡು ವಾರದ ಒಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಾನಿ

ravi

ಭಾರತ-ದ.ಆಫ್ರಿಕಾ: ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಋತುರಾಜ್- ಬಿಷ್ಣೋಯ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dr-sudhakar

ಡಿಸೆಂಬರ್‌ 15 ರ ವೇಳೆಗೆ ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್‌ʼ ಕಾರ್ಯಾರಂಭ: ಡಾ.ಕೆ.ಸುಧಾಕರ್‌

hd-k

ನವೆಂಬರ್ 1ರಿಂದ ಜೆಡಿಎಸ್ ಜನತಾ ಪಂಚರತ್ನ ಯಾತ್ರೆ ಆರಂಭ

ಸಚಿವ ಸುನಿಲ್‌ ಕುಮಾರ್

ಅಕ್ಟೋಬರ್‌ 28 ರಂದು ವಿನೂತನ ಕೋಟಿ ಕಂಠ ಗಾಯನ: ಸಚಿವ ಸುನಿಲ್‌ ಕುಮಾರ್

ಸಿಎಂ ಬೊಮ್ಮಾಯಿ

ಕೃಷಿ ಡಿಜಿಟಲೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ: ಸಿಎಂ ಬೊಮ್ಮಾಯಿ

Mallikarjun kharge

ಜೀತ ಮನಸ್ಥಿತಿಯಲ್ಲಿ ಖರ್ಗೆ ಅಧ್ಯಕ್ಷೀಯ ಚುನಾವಣೆಯಲ್ಲಿದ್ದಾರೆ: ಸಿ.ಟಿ.ರವಿ

MUST WATCH

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

ಹೊಸ ಸೇರ್ಪಡೆ

dr-sudhakar

ಡಿಸೆಂಬರ್‌ 15 ರ ವೇಳೆಗೆ ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್‌ʼ ಕಾರ್ಯಾರಂಭ: ಡಾ.ಕೆ.ಸುಧಾಕರ್‌

1-asdada

ಪಠಾಣ್‌ಕೋಟ್: ಎಲ್ಲೆಡೆ ಸಂಸದ ಸನ್ನಿ ಡಿಯೋಲ್ ನಾಪತ್ತೆ ಪೋಸ್ಟರ್ ಗಳು

1-sdaddasd

ತೆಂಡೂಲ್ಕರ್ ಜತೆಯಲ್ಲಿ ಧೋನಿ: ವೈರಲ್ ಆದ ಫೋಟೋಗಳು

ಪಣಜಿ: ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಸಂಚು ರೂಪಿಸುತ್ತಿದೆ : ಅಮಿತ್ ಪಾಲೇಕರ್ ಆರೋಪ

ಪಣಜಿ: ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಸಂಚು ರೂಪಿಸುತ್ತಿದೆ : ಅಮಿತ್ ಪಾಲೇಕರ್ ಆರೋಪ

‘ಹಿಂದೂ’ ಪದವನ್ನು  ಸೃಷ್ಟಿಸಿದ್ದು ಬ್ರಿಟಿಷರು: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

‘ಹಿಂದೂ’ ಪದವನ್ನು ಸೃಷ್ಟಿಸಿದ್ದು ಬ್ರಿಟಿಷರು: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.