ಕಾಂಗ್ರೆಸ್ ನಿಂದ ದಲಿತರ ಕಲ್ಯಾಣ ಅಸಾಧ್ಯ
Team Udayavani, Apr 6, 2021, 8:09 PM IST
ಮಸ್ಕಿ: ಕಾಂಗ್ರೆಸ್ ಪಕ್ಷದಿಂದ ದಲಿತರ ಕಲ್ಯಾಣ ಸಾಧ್ಯವಿಲ್ಲ. ಹೀಗಾಗಿ ದಲಿತರು ಈಗ ಜಾಗೃತರಾಗಿದ್ದಾರೆ. ಶೋಷಿತ ಸಮುದಾಯಗಳ ಮತ ಕಾಂಗ್ರೆಸ್‌ಗೆ ಬೀಳುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಡಾ| ಬಾಬು ಜಗಜೀವನ್‌ರಾಂ ಅವರ 114ನೇ ಜಯಂತಿಯಲ್ಲಿ ಅವರು ಮಾತನಾಡಿದರು. ಡಾ| ಅಂಬೇಡ್ಕರ್ ಸಂವಿಧಾನ ಬದ್ಧವಾಗಿ ಮೀಸಲಾತಿ ನೀಡಿದ್ದರು. ಅದನ್ನು ಡಾ| ಬಾಬು ಜಗಜೀವನರಾಂ ಅನುಷ್ಠಾನಕ್ಕೆ ತಂದ ಕೀರ್ತಿಗೆ ಪಾತ್ರರಾದರು. ಇಡೀ ವಿಶ್ವವೇ ಮೆಚ್ಚಿದ ಬಹುದೊಡ್ಡ ಜ್ಞಾನಿ ಡಾ| ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ಗೌರವಿಸಲಿಲ್ಲ.
ಅವರು ನಿಧನರಾದಾಗ ದೆಹಲಿಯಲ್ಲಿ ಸಂಸ್ಕಾರ ಮಾಡಲು ದೆಹಲಿ ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಕಾಂಗ್ರೆಸ್‌ನವರು ವರ್ತಿಸಿದರು. ಹಲವು ಬಾರಿ ಅವರನ್ನು ಕಾಂಗ್ರೆಸ್ ಪಕ್ಷ ಅಪಮಾನಿಸಿದ್ದನ್ನು ಮೆಲುಕು ಹಾಕಿದ ಗೋವಿಂದ ಕಾರಜೋಳ ಈ ಎಲ್ಲ ಸಂಗತಿಗಳನ್ನು ದಲಿತರು ಮರೆತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ದಿವಾಳಿಯಾಗಲು ದಲಿತರು ಕಾರಣರಾಗಿದ್ದಾರೆ. ದಲಿತರು ಇತ್ತೀಚೆಗೆ ವಿದ್ಯಾವಂತರಾಗಿ ರಾಜ್ಯದ ದೇಶದ ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ ಎಂದರು.
ಇದಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡದೇ ಬಿಜೆಪಿ ಬೆಂಬಲಿಸಿ ರಾಷ್ಟ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದಾರೆ. ಮಸ್ಕಿಯಲ್ಲೂ ದಲಿತರೆಲ್ಲ ಪ್ರತಾಪಗೌಡ ಪರವಾಗಿ ಮತ ಹಾಕಲಿದ್ದಾರೆ ಎಂದರು. ಈ ವೇಳೆ ಎಂಎಲ್ಸಿ ಎನ್. ರವಿಕುಮಾರ, ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ರಮನಾಂದ ಯಾದವ್, ಜಿಪಂ ಸದಸ್ಯ ದುರುಗಪ್ಪ ಗುಡಗಲದಿನ್ನಿ, ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು
ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ
ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!
ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…
ಹೊಸ ಸೇರ್ಪಡೆ
ಅಗ್ನಿಪಥ ಯೋಜನೆ ಪ್ರಶ್ನಿಸಿ ಅರ್ಜಿ: ಮುಂದಿನ ವಾರ ಸುಪ್ರೀಂಕೋರ್ಟ್ ವಿಚಾರಣೆ
ದೆಹಲಿ ಶಾಸಕರ ವೇತನ ಶೇ.66ಕ್ಕೆ ಏರಿಕೆ: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ : ಹಳ್ಳದಲ್ಲಿ ಕೊಚ್ಚಿ ಹೋದ 7 ವರ್ಷದ ಬಾಲಕಿ
ಮಹಾರಾಷ್ಟ್ರ: ವಿರೋಧ ಪಕ್ಷದ ನಾಯಕನಾಗಿ ಎನ್ಸಿಪಿ ನಾಯಕ ಅಜಿತ್ ಪವಾರ್ ಆಯ್ಕೆ
ಗಂಗಾವತಿ : ಕುಮ್ಮಟ ದುರ್ಗದ ಸುತ್ತ ಗಣಿಗಾರಿಕೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ