25 ಎಕರೆಯಲ್ಲಿ 200 ಕ್ವಿಂಟಲ್‌ ರಾಗಿ ಬೆಳೆದ ಪ್ರಗತಿಪರ ರೈತ

Team Udayavani, Mar 10, 2022, 12:40 PM IST

Untitled-1

ಮಾಗಡಿ: 25 ಎಕರೆ ಜಮೀನಿನಲ್ಲಿ 200 ಕ್ವಿಂಟಲ್‌ ರಾಗಿ ಬೆಳೆದಿದ್ದೇವೆ ಎಂದು ಗಂಟಗಯ್ಯನಪಾಳ್ಯ ಪ್ರಗತಿ ಪರ ರೈತ ರಮೇಶ್‌ ತಿಳಿಸಿದರು.

ತಾಲೂಕಿನ ತಿಪ್ಪಸಂದ್ರ ಹೋಬಳಿ ಗಂಟಗಯ್ಯನಪಾಳ್ಯ ಗ್ರಾಮದ ಪ್ರಗತಿಪರ ರೈತ ನಂಜೇಗೌಡ ಅವರ ಪುತ್ರ ರಮೇಶ್‌ ರಾಗಿಯ ರಾಶಿ ಪೂಜೆನೆರವೇರಿಸಿ ಮಾತನಾಡಿ, ಕಳೆದ 6 ತಿಂಗಳಿನಿಂದ ಕಷ್ಟಪಟ್ಟು ರಾಗಿ ಬೆಳೆದು ಒಕ್ಕಣೆ ಕೆಲಸ ಮುಗಿದಿದ್ದು,ರಾಗಿಯ ರಾಶಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕವಾಗಿ ಪೂಜಿಸಿ ಹಾಲುತುಪ್ಪಎರೆದು ಮನೆಗೆ ರಾಶಿ ತುಂಬಿಸಿಕೊಳ್ಳುವ ನಮ್ಮೆಲ್ಲರಬದುಕಿನ ಶುಭದಿನ ಆಗಿದೆ. 25 ಎಕರೆ ಜಮೀನಿನಲ್ಲಿಕನಿಷ್ಠ 300 ಕ್ವಿಂಟಲ್‌ ರಾಗಿ ಬರಬೇಕಿತ್ತು. ಅಕಾಲಿಕಮಳೆಯಿಂದ 100 ಕ್ವಿಂಟಲ್‌ ರಾಗಿ ಈ ವರ್ಷ ನಷ್ಟವಾಗಿದೆ ಎಂದರು.

ನಷ್ಟಗಳಿಗೆ ಹೆದರುವುದಿಲ್ಲ: ರೈತರು ದೇಶದ ಅನ್ನದಾತರು. ನಷ್ಟಗಳಿಗೆ ಹೆದರುವುದಿಲ್ಲ, ಆದರೆ, ಸರ್ಕಾರ ರೈತರಿಗೆ ಸಿಗಬೇಕಾದ ನ್ಯಾಯಯುತ ಸವಲತ್ತು ಸಮರ್ಪಕವಾಗಿ ನೀಡದ ಕಾರಣ ರೈತರುನಷ್ಟ ಅನುಭವಿಸುವುದರ ಜತೆಗೆ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಸರ್ಕಾರ ಬೆಂಬಲ ಬೆಲೆಗೆ ರಾಗಿಖರೀದಿ ಮಾಡಲಾಗುತ್ತಿದೆ. ರಾಗಿ ಖರೀದಿ ಏಕಾಏಕಿ ಜನವರಿಯಲ್ಲಿಯೇ ನಿಲ್ಲಿಸಿರುವುದರಿಂದ ಈ ಭಾಗದ ರೈತರು ರಾಗಿ ಬೆಂಬಲ ಬೆಲೆಗೆ ಮಾರಾಟ ಮಾಡಲಾಗುತ್ತಿಲ್ಲ ಎಂದರು.

ತಾರತಮ್ಯ ಮಾಡುತ್ತಿದ್ದಾರೆ: ಈ ಭಾಗದ ಬಹುತೇಕ ರೈತರು ಫೆಬ್ರವರಿ, ಮಾರ್ಚ್‌ನಲ್ಲಿ ರಾಗಿ ಒಕ್ಕಣೆಮಾಡುವುದು. ಬೆಂಬಲ ಬೆಲೆ ನಿಲ್ಲಿಸಿರುವುದರಿಂದ ಈಗ ಒಕ್ಕಣೆ ಆಗಿರುವ ರಾಗಿಯನ್ನು ಎಲ್ಲಿಗೆ ಕೊಂಡೊಯ್ಯುದ ಮಾರಾಟ ಮಾಡುವುದುಎಂದು ಸರ್ಕಾರ ನಿಯಮದ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.

ರಾಗಿಗೆ ಬೆಂಬಲ ಬೆಲೆ ಕೊಡಬೇಕಾದರೆ ಸಣ್ಣ ಮತ್ತು ದೊಡ್ಡ ರೈತರು ಎಂದು ತಾರತಮ್ಯ ಮಾಡುತ್ತಿದ್ದಾರೆ. ಸಣ್ಣ ರೈತರು ರಾಗಿಯನ್ನುವರ್ಷದ ಜೀವನಕ್ಕೆ ಇಟ್ಟುಕೊಳ್ಳುತ್ತಾರೆ. ಮಾರಾಟ ಮಾಡುವವರು ದೊಡ್ಡ ರೈತರು. ಸಣ್ಣ ರೈತರಿಂದಲೂಬೆಂಬಲ ಬೆಲೆಗೆ ಖರೀದಿಸುವ ಈ ವಿಚಾರದಲ್ಲಿಅಭ್ಯಂತರವಿಲ್ಲ. ಆದರೆ, ನಕಲಿ ರೈತರು ಲಾರಿಗಳಲ್ಲಿಎಲ್ಲಿಂದಲೋ ರಾಗಿ ತಂದು ಸರ್ಕಾರಕ್ಕೆ ಬೆಂಬಲ ಬೆಲೆಗೆ ಖರೀದಿಸುವ ದಂಧೆಗೆ ಅಧಿಕಾರಿಗಳುತಿಲಾಂಜಲಿ ಹಾಡಬೇಕು ಎಂದರು.

ಸರ್ಕಾರ ರೈತರ ನೆರವಿಗೆ ನಿಲ್ಲಲಿ: ರೈತರ ಹೆಸರಿನಲ್ಲಿನಡೆಯುವ ಹಗಲು ದರೋಡೆ ನಿಲ್ಲಬೇಕು. ಈ ಮೂಲಕಸರ್ಕಾರ ರೈತರ ನೆರವಿಗೆ ನಿಲ್ಲಬೇಕು. ರಾಗಿಖರೀದಿಯನ್ನು ಏಪ್ರಿಲ್‌ ತಿಂಗಳವರೆಗೂ ವಿಸ್ತರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.

ತಾಪಂಮಾಜಿ ಅಧ್ಯಕ್ಷೆ ಪೈಜ್‌ ಉನ್ನಿಷಾ ಅಮೀರ್‌ ಪಾಷಾ, ರೈತ ಮುಖಂಡ ನಿವೃತ್ತ ಶಿಕ್ಷಕ ನಂಜೇಗೌಡ, ಹೇಮಲತಾರಮೇಶ್‌, ಮಾಯ ಸಂದ್ರ, ಆಂಜನಪ್ಪ, ಮುದುಕದಹಳ್ಳಿ ಕೌಷರ್‌ ಪಾಷಾ, ರವಿಕುಮಾರ್‌, ಹುಚ್ಚಪ್ಪ ಅರುಣ್‌ಕುಮಾರ್‌, ಧನರಾಜ್‌, ವೆಂಕಟ ರಾಮಯ್ಯ ಜಗ ದೀಶ್‌, ವಿರುಪಾಪುರದ ಚಿನ್ನಮ್ಮಜ್ಜಿ ಇತರರು ಇದ್ದರು.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.