ಸಮರ್ಪಕ ಪರಿವರ್ತಕ ಅಳವಡಿಕೆಗೆ ಒತ್ತಾಯ

Team Udayavani, Jul 9, 2019, 1:25 PM IST

ಮಾಗಡಿ ಪಟ್ಟಣದ ಬೆಸ್ಕಾಂ ಎಂಜಿನಿಯರ್‌ಗೆ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ಮನವಿ ಪತ್ರ ಸಲ್ಲಿಸಿದರು.

ಮಾಗಡಿ: ರೈತರ ಪಂಪ್‌ ಸೆಟ್‌ಗಳಿಗೆ ಸಮರ್ಪಕವಾಗಿ ಪರಿವರ್ತಕ (ಟಿಸಿ) ಅಳವಡಿಸುವಂತೆ ಒತ್ತಾಯಿಸಿ ಬೆಸ್ಕಾಂ ಎಂಜಿನಿಯರ್‌ ಅವರಿಗೆ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ಮನವಿ ಪತ್ರ ಸಲ್ಲಿಸಿದರು.

ಪಟ್ಟಣ ಬೆಸ್ಕಾಂ ಕಚೇರಿಗೆ ರೈತರೊಂದಿಗೆ ಭೇಟಿ ನೀಡಿದ ಲೋಕೇಶ್‌ ಅವರು, ತಾಲೂಕಿನಲ್ಲಿ ಮಳೆಯಿಲ್ಲ. ಬರಗಾಲ ಇರುವ ಪಂಪ್‌ಸೆಟ್ನಿಂದ ನೀರನ್ನು ತಮ್ಮ ಹೊಲಗದ್ದೆ ತೋಟಗಳಿಗೆ ಹಾಯಿಸಿಕೊಳ್ಳಲು ಕೂಡಲೇ ಪರಿವರ್ತಕ ಅಳವಡಿಸುವಂತೆ ಒತ್ತಾಯಿಸಿದರು. ಈ ಕುರಿತು ರೈತರ ಕುಂದು ಕೊರತೆ ಸಭೆ ಕರೆಯುವಂತೆ ಮನವಿ ಮಾಡಿದ್ದರೂ ಸಭೆ ನಡೆಸಿಲ್ಲ. ಸಭೆಗೂ ಬರುತ್ತಿಲ್ಲ ದಿನೇ ರೈತರ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಆಹಾಕಾರ ಉಂಟಾಗುತ್ತಿದೆ ಎಂದು ಹೇಳಿದರು.

ಶೀಘ್ರದಲ್ಲಿಯೇ ಬೆಸ್ಕಾಂ ಎಂಜಿನಿಯರ್‌ಗಳು ರೈತರ ಪಂಪ್‌ ಸೆಟ್‌ಗಳಿಗೆ ಪರಿವರ್ತಕ ಅಳವಡಿಸದಿದ್ದರೆ ರೈತರೆಲ್ಲರೂ ಒಗ್ಗೂಡಿ ಬೆಸ್ಕಾಂಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ರೈತ ಸಂಘದ ಕಾರ್ಯದರ್ಶಿ ಮಧುಗೌಡ, ಜಯರಾಂ, ಶಿವಣ್ಣ ಇತರರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಮಾಗಡಿ: ಪಟ್ಟಣದ ಐತಿಹಾಸಿಕ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಡಿ.12ರ ಗುರುವಾರ ದಿನದಂದು ನಡೆಯಲಿರುವ ಕೆಂಪೇಗೌಡರ 511ನೇ ಜಯಂತ್ಯುತ್ಸವದ ಬೃಹತ್‌ ವೇದಿಕೆ...

  • ಮಾಗಡಿ: ಮಂಚನಬೆಲೆ ಜಲಾಯದಿಂದ ಮಾಗಡಿ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಪೈಪ್‌ ವಿ.ಜಿ.ದೊಡ್ಡಿ ಮಂಚನಬೆಲೆ ಮಾರ್ಗಮಧ್ಯೆದಲ್ಲಿ ಹೊಡೆದು ಹೋಗಿದ್ದು,...

  • ಮಾಗಡಿ: ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕಿದ್ದ ಪತಿ, ಪತ್ನಿ ಹಾಗೂ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸದಸ್ಯರನ್ನು ಶಾಂತ ಜೀವನ ಜ್ಯೋತಿ ಸರ್ಕಾರೇತರ...

  • ರಾಮನಗರ: ಇಂದ್ರಧನುಷ್‌ ಲಸಿಕ ಅಭಿಯಾನದಡಿ ರಾಜ್ಯದಲ್ಲಿ ಲಸಿಕೆ ಪಡೆಯದೇ ವಂಚಿತರಾಗಿರುವ 34,000 ಮಕ್ಕಳಿಗೆ ಹಾಗೂ 2,600 ಗರ್ಭೀಣಿ ಮಹಿಳೆಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ...

  • ಮಾಗಡಿ: ಪೋಷಕರೇ ಭ್ರೂಣ ಹತ್ಯೆ ಮಾಡದೇ ಹುಟ್ಟುವ ಮಗು ಗಂಡಾಗಲಿ, ಹೆಣ್ಣಾಗಲಿ ಇಬ್ಬರು ಸಮಾಜದ ಕಣ್ಣು ಗಳು ಎಂದು ಭಾವಿಸಿ ಎಂದು ತಗ್ಗೀ ಕುಪ್ಪೆ ಗ್ರಾಪಂ ಅಧ್ಯಕ್ಷೆ...

ಹೊಸ ಸೇರ್ಪಡೆ