ಲೆಕ್ಕಾಧಿಕಾರಿ ವಿರುದ್ಧ ಜನರ ಪ್ರತಿಭಟನೆ

Team Udayavani, Aug 24, 2019, 5:05 PM IST

ರೋಣ: ಯಾ.ಸ. ಹಡಗಲಿ ನೆರೆ ಪರಿಹಾರ ವಿತರಣೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು .

ರೋಣ: ನವಿಲು ತೀರ್ಥ ಜಲಾಶಯದ ನೀರು ಹಾಗೂ ಬೆಣ್ಣಿಹಳ್ಳದ ಪ್ರವಾಹಕ್ಕೆ ಯಾ.ಸ. ಹಡಗಲಿ ಗ್ರಾಮ ಸಂಪೂರ್ಣ ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಶುಕ್ರುವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಗ್ರಾಪಂ ಸದಸ್ಯ ಹನುಮಂತ ಹನುಮಕ್ಕನವರ ಮಾತನಾಡಿ, ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಮನೆ ಹಾಗೂ ಬೆಳೆಗಳು ಸೇರಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಪಾಸ್ತಿಗಳು ನಾಶವಾಗಿವೆ. ಆದರೆ ಪ್ರವಾಹದಲ್ಲಿ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ವಿತರಣೆ ಮಾಡದೇ ತಮಗೆ ಬೇಕಾದವರಿಗೆ ಗ್ರಾಮ ಲೆಕ್ಕಾಧಿಕಾರಿ ವಿತರಣೆ ಮಾಡುತ್ತಿದ್ದಾರೆ. ಅಲ್ಲದೆ ಪರಿಹಾರವನ್ನು ಗ್ರಾಮದ ಮನೆ ಮನೆಗೆ ತೆರಳಿ ಸರ್ವೇ ಮಾಡಿ, ಹಾನಿಗೆ ತಕಷ್ಟು ನೀಡದೇ ಯಾವುದೋ ಒಂದು ಊರಲ್ಲಿ ಕುಳಿತು ಬೇಕಾದವರನ್ನು ಅಲ್ಲಿಯೇ ಕರೆಯಿಸಿ ಪರಿಹಾರ ಚೆಕ್‌ ವಿತರಣೆ ಮಾಡುತ್ತಿದ್ದಾರೆ.

ಇದಲ್ಲದೇ ನೆರೆಯ ಸಮಯದಯಲ್ಲಿ ನಾಲ್ಕು ದಿನಗಳ ಕಾಲ ಗಂಜಿಕೇಂದ್ರ ಪ್ರಾರಂಭ ಮಾಡಿ, ಈಗ 10 ದಿನಗಳ ಕಾಲ ನಡೆಸಿದ್ದೇನೆ ಎಂದು ಬೋಗಸ್‌ ಬಿಲ್ ತಗೆಯಲು ಸಜ್ಜಾಗಿದ್ದಾರೆ. ಇದರ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಬಸವರಾಜ ಆಲೂರ, ಕಲ್ಲಪ್ಪ ಕಡಕೋಳ, ಬಸವರಾಜ ಯಲಿಗಾರ, ಶರಣಪ್ಪ ವಾಸನದ, ಶೇಖಪ್ಪ ವಾಸನದ, ವಿರೂಪಾಕ್ಷಪ್ಪ ಚಳಗೇರಿ, ಶಿವನಗೌಡ ವಾಸನದ, ಶಿವಾನಂದ ಹನಮಕ್ಕನವರ, ರಾಜು ಪಾಟೀಲ, ಫಕೀರಗೌಡ ಪಾಟೀಲ ಇನ್ನಿತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಹಾನಗರ: ಪರಿಸರಾಸಕ್ತರು ಸೇರಿಕೊಂಡು ಆಯೋಜಿಸುತ್ತಿರುವ ರಾಜ್ಯ ಮಟ್ಟದ ಪರಿಸರ ಸಮ್ಮೇಳನಕ್ಕೆ ದಿನಗಣನೆ ಆರಂಭಗೊಂಡಿದೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ...

  • ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಉಡುಪಿಯಲ್ಲಿ ವಿದ್ಯಾರ್ಥಿಗಳಿಗಾಗಿ...

  • ಬೆಂಗಳೂರು: ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆಯ ಮತ್ತೂಬ್ಬ ಶಂಕಿತ ಉಗ್ರನನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತು ಆಂತರಿಕ ಭದ್ರತಾ ದಳ(ಐಎಸ್‌ಡಿ)...

  • ಬೆಂಗಳೂರು: ಐದು ವರ್ಷಗಳ ಟೆಕ್ಕಿಗಳ ಸ್ನೇಹ, ಪ್ರೀತಿ, ವಂಚನೆ, ಪೋಟೋಗಳಿಂದ ಮುರಿದು ಬಿದ್ದ ಮದುವೆ... ಕ್ರೋಧಗೊಂಡ ಪ್ರಿಯಕರನಿಂದ ಮಾಜಿ ಪ್ರೇಯಸಿಗೆ ಗುಂಡು! ಮಾರತ್‌ಹಳ್ಳಿಯಲ್ಲಿ...

  • ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿಧಾನಸಭೆ ಸದಸ್ಯತ್ವ...