Udayavni Special

ತಾಲೂಕಾದ್ಯಂತ ಡೆಂಘೀ, ಚಿಕೂನ್‌ಗುನ್ಯಾ ಭೀತಿ

ತಾಲೂಕು ಆಡಳಿತ,ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ದೂರು

Team Udayavani, Aug 24, 2019, 4:54 PM IST

24-April-36

ತಿಪಟೂರಿನ ಸಾರ್ವಜನಿಕ ಆಸ್ಪತ್ರೆ.

ಬಿ. ರಂಗಸ್ವಾಮಿ
ತಿಪಟೂರು:
ತಾಲೂಕು ಆಡಳಿತವಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಸ್ವಚ್ಛತೆ ಸೇರಿದಂತೆ ಆರೋಗ್ಯದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಗಳನ್ನು ವಹಿಸದ ಕಾರಣ ನಗರ ಸೇರಿದಂತೆ ತಾಲೂಕಾ ದ್ಯಂತ ಸಾಂಕ್ರಾಮಿಕ ರೋಗಗಳಿಂದ ಜನರು ತತ್ತರಿ ಸುತ್ತಿದ್ದು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಮುಂದೆ ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳ ಜೊತೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಗ್ರಾಮೀಣ ಹಾಗೂ ನಗರಾದ್ಯಂತ ಸ್ವಚ್ಛತೆಯ ಕೊರತೆಯಿಂದಾಗಿ ನಾನಾ ರೀತಿಯ ಸೊಳ್ಳೆಗಳು, ವೈರಸ್‌ಗಳು ವಿಪ ರೀತವಾಗಿ ಹರಡಿದ್ದು ಅಮಾಯಕ ಜನರು ಚಿಕೂನ್‌ಗುನ್ಯಾ, ಡೆಂಘೀ ಸೇರಿದಂತೆ ವಿವಿಧ ರೀತಿಯ ಜ್ವರಗಳ ಬಾಧೆಯಿಂದ ಗಂಟಲು ನೋವು, ತಲೆನೋವು, ಕೈಕಾಲು ನೋವು, ಕೀಲುಗಳಲ್ಲಿ ನೋವು, ವಾಂತಿ- ಭೇದಿ ಸೇರಿದಂತೆ ದಿನಬಿಟ್ಟು ದಿನ ಬರುತ್ತಿರುವ ಜ್ವರದಿಂದ ಬಳಲುತ್ತಿದ್ದಾರೆ. ಬಹು ತೇಕ ಮನೆಗಳಲ್ಲಿ ದೊಡ್ಡವರು-ಮಕ್ಕಳಾದಿಯಾಗಿ ಒಂದಿಲ್ಲೊಂದು ರೋಗಗಳಿಗೆ ತುತ್ತಾಗುತ್ತಿದ್ದು ಆಸ್ಪತ್ರೆಗೆ ತರೆಳುವವರ ಮಂದಿ ಹೆಚ್ಚಾಗಿದ್ದಾರೆ. ಆದರೆ, ಅಧಿಕಾರಗಳ ಬೇಜವಾ ಬ್ದಾರಿ ಇಂತಹ ಬರಗಾಲದ ಪರಿಸ್ಥಿತಿಯಲ್ಲಿಯೂ ಬಡ ಮತ್ತು ಮಧ್ಯಮ ವರ್ಗದ ಜನರು ಆಸ್ಪತ್ರೆ ಖರ್ಚಿಗೆ ಪರದಾಡುವ ಸ್ಥಿತಿ ಎದುರಾಗಿದೆ.

ಸ್ವಚ್ಛತೆ ಮರೀಚಿಕೆ: ತಾಲೂಕಿನ ಬಹುತೇಕ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳು ತಿಪ್ಪೆಗುಂಡಿಗಳಿಂದ ಕೂಡಿದ್ದು, ತ್ಯಾಜ್ಯ ನೀರು ಹರಿಯಲು ಸರಿಯಾದ ಒಳಚರಂಡಿ ವ್ಯವಸ್ಥೆಯಿಲ್ಲ. ಬಹಳಷ್ಟು ಕಡೆ ಮನೆ ನೀರು ಓಣಿ, ಬೀದಿ, ಮನೆ ಪಕ್ಕದ ಚರಂಡಿಗಳಲ್ಲೇ ನಿಂತು ಕಲುಷಿತಗೊಂಡು ಡೆಂಘೀ, ಚಿಕೂನ್‌ ಗುನ್ಯಾದಂಥ ರೋಗಾಣುಗಳು ಉತ್ಪತ್ತಿಯಾಗುತ್ತಿವೆ. ಕುಡಿವ ನೀರಿನ ಟ್ಯಾಂಕ್‌ಗಳನ್ನು ತೊಳೆವ ಗೋಜಿಗೂ ಹೋಗಲ್ಲ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಚರಂಡಿಗಳಿಗೆ ಕೀಟ ನಾಶಕ ಸಿಂಪಡಣೆ ಮಾಡಿ ಎಷ್ಟೋ ವರ್ಷಗಳಾಗಿದೆ. ಗ್ರಾಪಂ ಅಧಿಕಾರಿಗಳಾಗಲಿ, ತಾಲೂಕು ಆರೋಗ್ಯಾಧಿ ಕಾರಿಗಳಾಗಲಿ ಕ್ರಮಕೈಗೊಳ್ಳದೆ ಅಮಾಯಕ ಜನರ ಜೀವದ ಮೇಲೆ ಚಲ್ಲಾಟವಾಡುತ್ತಿದ್ದಾರೆ ಎಂಬುದು ನಾಗರಿಕರ ದೂರಾಗಿದೆ.

ಹಳ್ಳಿಗಳಿಗೆ ತೆರಳದ ವೈದ್ಯರು: ಗ್ರಾಮಗಳ ಸಾಕಷ್ಟು ಜನರು ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಾಲೂಕು ಆರೋಗ್ಯಾಧಿಕಾರಿಗಳ ಇಲಾಖೆಯಲ್ಲಿ ಯಾವೊಬ್ಬ ಅಧಿಕಾರಿಗಳು ಹಳ್ಳಿಗಳಿಗೆ ಸರಿಯಾಗಿ ತೆರಳದೆ ಇಲಾಖೆಯ ಇತರೆ ಕಾರ್ಯಕ್ರಮಗಳ ಬಗ್ಗೆ ಇಲಾಖೆಯಲ್ಲೆ ನೆಪ ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ: ಜ್ವರ ಬಾಧೆ ಯಿಂದ ಬಳಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಹಣವಿಲ್ಲದೆ ಬಡವರು, ಮಧ್ಯಮರ್ವದವರು ಸಾರ್ವ ಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ. ದಾಖಲಾಗಿ ಹೆಚ್ಚು 5,6.10ಗಂಟೆಗಳ ಬಳಿಕ ವೈದ್ಯರು ರೋಗಿಗಳನ್ನು ನೋಡಿದ ಉದಾಹರಣೆಗಳಿವೆ. ಪರೀಕ್ಷೆ ಮಾಡಲು ಪರದಾಡಿಸಿದ ಘಟನೆಗಳೂ ನಡೆದಿವೆ. ಆಸ್ಪತ್ರೆಯಲ್ಲೇ ಸೊಳ್ಳೆಕಾಟವೂ ಹೆಚ್ಚಿದೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಮೂಗು ಮುಚ್ಚು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ರೋಗಿಗಳ ದೂರಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿಯಲ್ಲಿ ಮತ್ತೆ ನಾಲ್ಕು ಕೋವಿಡ್ 19 ಪ್ರಕರಣ

ನಿಜಾಮುದ್ದೀನ್ ನಿಂದ ಬಂದ ನಾಲ್ವರಿಗೆ ಸೋಂಕು: ಬೆಳಗಾವಿಯಲ್ಲಿ ಮತ್ತೆ ನಾಲ್ಕು ಹೊಸ ಪ್ರಕರಣ

sm-tdy-1

ಹಾಪ್‌ಕಾಮ್ಸ್‌ ಮಳಿಗೆ ತೆರೆಯಲು ಸೂಚನೆ

ಜಿಲ್ಲೆಯಲ್ಲಿಲ್ಲ ಕೊರೊನಾ ಪ್ರಕರಣ: ಸಿ.ಟಿ. ರವಿ

ಜಿಲ್ಲೆಯಲ್ಲಿಲ್ಲ ಕೋವಿಡ್ 19 ಪ್ರಕರಣ: ಸಿ.ಟಿ. ರವಿ

ಮನೋವೈದ್ಯರಿಂದ ಕೌನ್ಸೆಲಿಂಗ್‌

ಮನೋವೈದ್ಯರಿಂದ ಕೌನ್ಸೆಲಿಂಗ್‌

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

ವಿಪತ್ತು ಸಮರ್ಥ ನಿರ್ವಹಣೆಗೆ 16 ತಂಡ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಇದೀಗ ಸಣ್ಣ ಜ್ವರವಿದ್ರೂ ಕ್ವಾರಂಟೈನ್‌

ಇದೀಗ ಸಣ್ಣ ಜ್ವರವಿದ್ರೂ ಕ್ವಾರಂಟೈನ್‌

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ