ಮಳೆಗಾಲಕ್ಕೂ ಮುನ್ನವೇ ಮೈದುಂಬಿದ ಭದ್ರೆ

Team Udayavani, Jun 1, 2022, 4:21 PM IST

dam

ಶಿವಮೊಗ್ಗ: ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಜೀವ ನಾಡಿ ಭದ್ರಾ ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಅತಿ ಹೆಚ್ಚು ನೀರು ಸಂಗ್ರಹದ ದಾಖಲೆಗಳಿಸಿದೆ.

186 ಅಡಿ ಗರಿಷ್ಠ ಮಟ್ಟದ ಭದ್ರಾ ಜಲಾಶಯದಲ್ಲಿ ಮೇ 31ರಂದು 150.6 ಅಡಿ ನೀರಿದೆ. ಇಷ್ಟೊಂದು ನೀರು ಸಂಗ್ರಹವಾಗಿರುವುದು ಜಲಾಶಯದ ಇತಿಹಾಸದಲ್ಲೇ ಮೊದಲು. ಮುಂಗಾರು ಹಾಗೂ ಬೇಸಿಗೆ ಬೆಳೆ ನಂತರ 110 ಅಡಿಯಷ್ಟು ನೀರು ಉಳಿದಿರುತ್ತದೆ. 2019ರಿಂದ ಈಚೆಗೆ ಜಲಾಶಯದ ನೀರಿನ ಉಳಿಕೆ ಏರಿಕೆಯಾಗಿದೆ. 2019, ಮೇ 31ರಂದು 125.1 ಅಡಿ, 2020ರಲ್ಲಿ 133.3 ಅಡಿ, 2021ರಲ್ಲಿ 138.5 ಅಡಿ ನೀರಿತ್ತು. 2019ರಿಂದ ಈಚೆಗೆ ಉತ್ತಮ ಮಳೆಯಾಗುತ್ತಿದ್ದು ಜಲಾಶಯ ಭರ್ತಿ ಯಾಗಿದೆ. ಉತ್ತಮ ಮಳೆ, ನೀರಿನ ಮಿತ ಬಳಕೆ, ಕಾಲುವೆ ಸ್ವಚ್ಛತೆ ಸೇರಿ ಅನೇಕ ಕಾರಣಗಳಿಗೆ ಜಲಾಶಯದಲ್ಲಿ ಹೆಚ್ಚಿನ ನೀರು ಉಳಿಕೆಯಾಗಿದೆ.

ಮುಂಗಾರು ಹಾಗೂ ಬೇಸಿಗೆ ಬೆಳೆಗೆ ಅಂದಾಜು 61.70 ಟಿಎಂಸಿ ಅಡಿ, ಕುಡಿವ ನೀರಿಗೆ 7 ಟಿಎಂಸಿ ಅಡಿ, ವಿವಿ ಸಾಗರಕ್ಕೆ 7 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಗೇಟ್‌ ಮೂಲಕ ಜಲಾಶಯ ಪೂರ್ಣ ಭರ್ತಿಯಾ ದಾಗಲೆಲ್ಲ ನೀರು ಹರಿಸಲಾಗಿದೆ. ಇಷ್ಟೆಲ್ಲ ಆದರೂ ಪ್ರಸ್ತುತ ಜಲಾಶಯ ದಲ್ಲಿ 34 ಟಿಎಂಸಿ ಅಡಿ ನೀರಿದೆ.

ಭದ್ರಾ ಜಲಾಶಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕುಡಿವ ನೀರು, ಕೃಷಿಗೆ ನೀರು ಒದಗಿಸುತ್ತಿದೆ. ಈಚೆಗೆ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಮೂಲಕ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿದೆ. ಈ ಮೂಲಕ ಹಿರಿಯೂರು, ಚಳ್ಳಕೆರೆ, ಚಿತ್ರ ದುರ್ಗ, ಹೊಸದುರ್ಗ ತಾಲೂಕಿನ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ.

2.5 ಲಕ್ಷ ಎಕರೆ ಅಚ್ಚುಕಟ್ಟು: ಜಲಾ ಶಯವು ಸುಮಾರು 2.5 ಲಕ್ಷ ಎಕರೆ ಅಚ್ಚು ಕಟ್ಟು ಹೊಂದಿದ್ದು, ಬಲದಂಡೆ ನಾಲೆಯು ದಾವಣಗೆರೆ, ಎಡದಂಡೆ ನಾಲೆಯು ಭದ್ರಾ ವತಿ, ಶಿವಮೊಗ್ಗ ತಾಲೂಕುಗಳಿಗೆ ನೀರುಣಿಸು ತ್ತದೆ. ದಾವಣಗೆರೆ ನಾಲೆಯು ಅತಿ ದೊಡ್ಡ ಅಚ್ಚುಕಟ್ಟು ಹೊಂದಿದ್ದು ನೀರಿನ ಗರಿಷ್ಠ ಬಳಕೆ ಆಗುವುದು ಇಲ್ಲಿಯೇ. ಇದರ ಜತೆಗೆ ಚಿತ್ರದುರ್ಗ, ಹಾವೇರಿ, ಗದಗ, ದಾವಣಗೆರೆ ಜಿಲ್ಲೆಯ ಕುಡಿವ ನೀರಿಗೂ ಇದೆ ಜಲಾಶಯ ಆಸರೆಯಾಗಿದೆ.

ವಿವಿ ಸಾಗರಕ್ಕೆ ಬಿಟ್ಟಿದೆಷ್ಟು?

ಬಯಲುಸೀಮೆ ಚಿತ್ರದುರ್ಗದ ಜೀವನಾಡಿ ವಾಣಿವಿಲಾಸ ಸಾಗರಕ್ಕೆ ಜೂನ್‌ ತಿಂಗಳಲ್ಲಿ 7 ಟಿಎಂಸಿಗೂ ಅಧಿಕ ನೀರು ಹರಿಸಲಾಗಿದೆ. 130 ಅಡಿ ಗರಿಷ್ಠ ಮಟ್ಟದ ವಿವಿ ಸಾಗರದಲ್ಲಿ 120.15 ಅಡಿ ನೀರಿದೆ. ಉತ್ತಮ ಮಳೆಯಾದರೆ ಭದ್ರಾ ಜಲಾಶಯ ಜುಲೈನಲ್ಲೇ ಭರ್ತಿಯಾಗುವ ಅವಕಾಶಗಳಿದ್ದು ಹೆಚ್ಚುವರಿ ನೀರನ್ನು ವಿವಿ ಸಾಗರಕ್ಕೆ ಹರಿಸುವ ಸಾಧ್ಯತೆಗಳಿವೆ.

ನೀರು ಉಳಿಕೆ ಮಾಡಿದ್ದು ಹೇಗೆ?

ಜಲಾಶಯದಿಂದ 3 ವರ್ಷಗಳಿಂದ ಉತ್ತಮ ನೀರು ಉಳಿಕೆ ಮಾಡಲಾಗಿದೆ. ಮೊದಲು ಬೇಸಿಗೆ ಬೆಳೆ, ಮುಂಗಾರು ಬೆಳೆಗೆ 120 ದಿನ ನೀರು ಬಿಟ್ಟು ಸುಮ್ಮನಾಗುತ್ತಿದ್ದರು. ಈ ಮಧ್ಯೆ ಮಳೆಯಾದರೂ ನೀರು ನಿಲ್ಲಿಸುತ್ತಿರಲಿಲ್ಲ. ಈಗ ಪ್ರತಿದಿನ ನೀರಿನ ಬೇಡಿಕೆ, ಮಳೆ ಮುನ್ಸೂಚನೆ ಅರಿತು ನೀರು ಹರಿಸಲಾಗುತ್ತಿದೆ. ಇದರಿಂದ ನೀರಿನ ಉಳಿಕೆಯಾಗುತ್ತಿದೆ. ಇನ್ನು ಕಾಲುವೆಗಳು ಹೂಳು ತುಂಬಿ, ಜಂಡು ಬೆಳೆದು ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ರೈತರು ಹೆಚ್ಚು ಹರಿಸುವಂತೆ ಒತ್ತಡ ಹಾಕುತ್ತಿದ್ದರು. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ನೀರು ಪೋಲಾಗುತಿತ್ತು. ನರೇಗಾ ಮೂಲಕ ನೂರಾರು ಕಿಮೀ ಕಾಲುವೆ ಕ್ಲೀನ್‌ ಮಾಡಲಾಗಿದೆ. ಕೊನೆಯ ಭಾಗದ ರೈತರು ಸಹ ನಿರಾತಂಕವಾಗಿ ಬೆಳೆ ಬೆಳೆಯುತ್ತಿದ್ದಾರೆ. ಮುಂಗಾರು, ಹಿಂಗಾರಿನಲ್ಲೂ ಉತ್ತಮ ಮಳೆಯಾಗಿರುವುದು ಹೆಚ್ಚಿನ ನೀರು ಸಂಗ್ರಹಕ್ಕೆ ಕಾರಣವಾಗಿದೆ ಎನ್ನುತ್ತಾರೆ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ.

ಶರತ್‌ ಭದ್ರಾವತಿ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.