ಫೇಸ್‌ಬುಕ್‌ನಲ್ಲಿ ಅವಹೇಳನ: ಇಬ್ಬರ ಬಂಧನ

Team Udayavani, Dec 17, 2017, 7:45 AM IST

ಸಾಗರ: ಸಾಮಾಜಿಕ ಜಾಲತಾಣಗಳಲ್ಲಿ ಹೊಸನಗರದ ರಾಮಚಂದ್ರಾಪುರ ಮಠವನ್ನು ಅಶ್ಲೀಲವಾಗಿ ಹಾಗೂ ಅವಹೇಳನಕಾರಿಯಾಗಿ ಬಿಂಬಿಸಿ ಸಂದೇಶಗಳನ್ನು ಹಾಕುತ್ತಿದ್ದ ಇಬ್ಬರನ್ನು ಸಾಗರ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ತಾಲೂಕಿನ ಜಿ.ಆರ್‌. ಗಣಪತಿ ಭಟ್‌ ಜಿಗಳೇಮನೆ, ನಿರಂಜನ ಕುಗ್ವೆ ಬಂಧಿತರು. ಸತ್ಯಶೋಧ ಮಿತ್ರ ಮಂಡಳಿ ಎಂಬ ಫೇಸ್‌ಬುಕ್‌ ಗ್ರೂಪ್‌ನ ಅಡ್ಮಿನ್‌ ಆಗಿರುವ ಗಣಪತಿ ಭಟ್‌ ಹೊಸನಗರದ ರಾಮಚಂದ್ರಾಪುರ ಮಠವನ್ನು ಅಶ್ಲೀಲವಾಗಿ ಬಿಂಬಿಸಿ ಅವಹೇಳನಕಾರಿ ಸಂದೇಶಗಳನ್ನು ಹರಿಬಿಡುತ್ತಿದ್ದರು. ಇದನ್ನು ಗಮನಿಸಿದ ತಾರಾ ಎಂಬುವವರು ಸಾಗರ ಗ್ರಾಮಾಂತರ ಠಾಣೆಗೆ ದೂರಿತ್ತಿದ್ದರು. ಸೆ. 13ರಂದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶನಿವಾರ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ