ಪೊಲೀಸರ ಎದುರೇ ಕೈ-ಕಮಲ ಕಾರ್ಯಕರ್ತರ ಮಾರಾಮಾರಿ


Team Udayavani, Mar 2, 2021, 3:24 PM IST

ಪೊಲೀಸರ ಎದುರೇ ಕೈ-ಕಮಲ ಕಾರ್ಯಕರ್ತರ ಮಾರಾಮಾರಿ

ಭದ್ರಾವತಿ: ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಭಾನುವಾರ ರಾತ್ರಿ ಪ್ರೋ ಕಬಡ್ಡಿ ಪಂದ್ಯಾವಳಿ ಮುಕ್ತಾಯಗೊಂಡು ಪ್ರಶಸ್ತಿಗಳನ್ನು ವಿತರಿಸುವ ಮುನ್ನ ಬಿಜೆಪಿ ಮತ್ತು ಎಬಿವಿಪಿ ಮತ್ತಿತರ ಹಿಂದೂಪರ ಸಂಘಟನೆಗಳು ಜೈ ಶ್ರೀರಾಮ್‌ ಘೋಷಣೆ ಮುಗಿಲು ಮುಟ್ಟುವಂತೆ ಕೂಗಿದ್ದರಿಂದ ಕುಪಿತಗೊಂಡ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ.

ಉಭಯ ಗುಂಪುಗಳ ಮೇಲೆ ದೂರು- ಪ್ರತಿದೂರು ದಾಖಲಾಗಿದೆ. ಐವರು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಿಜೆಪಿಯ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ 8 ತಂಡಗಳ ಪ್ರೋ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಭಾನುವಾರ ರಾತ್ರಿ ಪಂದ್ಯದ ಅಂತಿಮ ದಿನ ಪೊಲೀಸ್‌ ಉಮೇಶ್‌ ಪ್ರಾಯೋಜಕತ್ವದ ತಂಡ ಪ್ರಥಮ ಹಾಗು ಬಿಜೆಪಿ ಮುಖಂಡ ಧರ್ಮಪ್ರಸಾದ್‌ ಪ್ರಾಯೋಜಕತ್ವದತಂಡ ದ್ವಿತೀಯ ಸ್ಥಾನ ಗಳಿಸಿದ ಖುಷಿಗೆ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದರಿಂದ ಕುಪಿತಗೊಂಡ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್‌ ಸೇರಿದಂತೆ ಐವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಚಿಕಿತ್ಸೆಗೆ ದಾಖಲಾದವರನ್ನು ನೋಡಲೆಂದು ನ್ಯಾಯವಾದಿ ಮಂಗೋಟೆ ರುದ್ರೇಶ್‌ ಹೋದಾಗ ಶಾಸಕ ಬಿ.ಕೆ. ಸಂಗಮೇಶ್‌ ರುದ್ರೇಶ್‌ ಅವರನ್ನು ಕುರಿತು ನೀನು ಕಿತ್ತೋದ ವಕೀಲ ಎಂದು ನಿಂದಿಸಿದ್ದು ಅವರ ಮಗ ಬಸವ, ಬಿ.ಕೆ. ಮೋಹನ್‌ ಮಗ ರವಿ ಸೇರಿದಂತೆ ಅವರ ಹಿಂಬಾಲಕರು ರುದ್ರೇಶ್‌ ಮೇಲೆ ಡಿವೈಎಸ್‌ಪಿ ಮತ್ತು ವೃತ್ತ ನಿರೀಕ್ಷರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಪ್ರತಿಭಟನೆ: ಶಾಸಕ ಬಿ.ಕೆ. ಸಂಗಮೇಶ್ವರ್‌ ಮತ್ತು ಅವರ ಮಕ್ಕಳಾದ ಬಸವ, ಗಣೇಶ್‌ಮತ್ತಿತರರನ್ನು ಕೂಡಲೇ ಬಂಧಿ ಸಬೇಕೆಂದುಆಗ್ರಹಿಸಿ ಬಿಜೆಪಿಯವರು ತಾಲೂಕು ಕಚೇರಿಆವರಣದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.ಶಾಸಕರ ವರ್ತನೆ ಖಂಡನೀಯ: ಜೈ ಶ್ರೀರಾಮ್‌,ಭಾರತ್‌ ಮಾತಾಕಿ ಜೈ, ವಂದೇ ಮಾತರಂಕೂಗಿದರೆ ಇವರಿಗಾಗಲ್ಲ ಎಂದರೆ ಇವರು ಮತ್ತುಇವರ ಮಕ್ಕಳು ಯಾರೆಂಬುದೇ ತಿಳಿಯುತ್ತಿಲ್ಲ. ಪೊಲೀಸರ ಎದುರೇ ಹಲ್ಲೆ ಮಾಡಿದರೂ ಖಾಕಿ ಬಟ್ಟೆಗೆ ಗೌರವವಿಲ್ಲದವರಂತೆ ಹಾಗೂ ಶಾಸಕರಿಗೆ ಗುಲಾಮರಂತೆ ನಡೆದುಕೊಂಡಿದ್ದಾರೆ. ಹಲ್ಲೆ ಮಾಡಿದ ಮತ್ತು ಮಾಡಿಸಿದ ಸಂಗಮೇಶ್‌ ಮತ್ತು ಅವರ ಮಕ್ಕಳನ್ನು ಹಾಗು ಮತ್ತಿತರರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್‌, ಶಾಸಕ ಎಸ್‌. ರುದ್ರೇಗೌಡ,ಮಾಜಿ ಶಾಸಕ ಭಾನುಪ್ರಕಾಶ್‌, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್‌, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಿ.ಎಸ್‌. ಅರುಣ್‌, ದತ್ತಾತ್ರಿ, ಚೆನ್ನಬಸಪ್ಪ, ತಾಲೂಕು ಅಧ್ಯಕ್ಷ ಪ್ರಭಾಕರ್‌, ಧರ್ಮಪ್ರಸಾದ್‌, ಬಿ.ಕೆ. ಶ್ರೀನಾಥ್‌, ಮಂಜುಳಾ, ಕದಿರೇಶ್‌, ಮಂಜುನಾಥ್‌ಕದಿರೇಶ್‌, ಶಫಿವುಲ್ಲಾ, ಸುನಿತಾ ಅಣ್ಣಪ್ಪ,ಮಾಲತೇಶ್‌, ಮಂಗೋಟೆ ರುದ್ರೇಶ್‌, ಹರಿಕೃಷ್ಣ, ಹಾ.ರಾಮಪ್ಪ, ಜಯಚಂದ್ರ, ರಾಮರಾವ್‌ಬರ್ಗೆ, ನಟರಾಜ್‌ ಮುಂತಾದ ನೂರಾರು ಮಂದಿಭಾಗವಹಿಸಿ ಶಾಸಕರ ಮತ್ತು ಅವರ ವರ್ತನೆ ಖಂಡಿಸಿ ಮಾತನಾಡಿದರು.

ವಕೀಲರ ಸಂಘದಿಂದ ಪ್ರತಿಭಟನೆ: ಮಂಗೋಟೆ ರುದ್ರೇಶ್‌ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ, ನ್ಯಾಯಾಲಯದ ಕಾರ್ಯಕಲಾಪದಿಂದ ಹೊರಗುಳಿದು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಲಾಯಿತು. ವಕೀಲರಿಗೆ ರಕ್ಷಣೆ ಇಲ್ಲವಾಗಿದೆ. ಶಾಸಕರೇ ವಕೀಲರನ್ನುನಿಂದಿಸಿ ಹಲ್ಲೆಗೆ ಮುಂದಾಗುವುದು ಖಂಡನೀಯ. ಆದ್ದರಿಂದ ಸರಕಾರ ವೈದ್ಯರ ರಕ್ಷಣೆಗಾಗಿ ಮಾಡಿರುವ ವಿಶೇಷ ಕಾನೂನನ್ನು ವಕೀಲರ ರಕ್ಷಣೆಗೂ ಜಾರಿಗೆ ತರಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಮತ್ತು ಡಿವೈಎಸ್‌ಪಿ ಕೃಷ್ಣಮೂರ್ತಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಭಾನುವಾರರಾತ್ರಿ ಸಾರ್ವಜನಿಕ ಆಸ್ಪತ್ರೆಗೆ ಹಲ್ಲೆಗೊಳಗಾದವರನ್ನುದಾಖಲಿಸಲು ಹೋಗಿದ್ದ ವಕೀಲ ಮಂಗೋಟೆರುದ್ರೇಶ್‌ ಅವರನ್ನು ಶಾಸಕರು ಮತ್ತು ಅವರಮಕ್ಕಳು ಮತ್ತಿತರರು ಅವಾಚ್ಯ ಪದಗಳಿಂದನಿಂದಿಸಿ ಹಲ್ಲೆ ಮಾಡಿರುವುದು ಖಂಡನೀಯಎಂದರು. ವಕೀಲರು ಪ್ರತಿಭಟನಾ ಮೆರವಣಿಗೆಮೂಲಕ ತಾಲೂಕು ಕಚೇರಿಗೆ ಆಗಮಿಸಿದರು. ಸಂಘದ ಉಪಾಧ್ಯಕ್ಷ ವೈ. ಜಯರಾಮ್‌, ಹಿರಿಯವಕೀಲರಾದ ಮಂಜಪ್ಪ, ಟಿ. ಚಂದ್ರಗೌಡ,ಸುಧೀಂದ್ರ, ಟಿ.ಎಸ್‌. ರಾಜು, ಕೆ.ಎನ್‌. ಶ್ರೀಹರ್ಷ ಮುಂತಾದವರು ಶಾಸಕರ ವರ್ತನೆ ಮತ್ತು ಘಟನೆಯನ್ನು ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ಮಾತನಾಡಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.