Udayavni Special

25ರಿಂದ ಶ್ರೀಕ್ಷೇತ್ರ ವರದಪುರ ಪ್ರವೇಶಕ್ಕೆ ಭಕ್ತರಿಗೆ ಅವಕಾಶ

ಮಧ್ಯಾಹ್ನ 2.30 ರಿಂದ 5 ಗಂಟೆವರೆಗಷ್ಟೇ ದರ್ಶನ

Team Udayavani, Jan 22, 2021, 6:46 PM IST

Sagara Varadapura, Shiavmogga

ಸಾಗರ: ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದ ಶ್ರೀಕ್ಷೇತ್ರ ವರದಪುರದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಜ.25ರಿಂದ ಮಧ್ಯಾಹ್ನ 2.30ರ ನಂತರ ಭಗವಾನ್‌ ಸದ್ಗುರು ಶ್ರೀಧರ ಸ್ವಾಮಿಗಳ ಸನ್ನಿಧಾನ ದರ್ಶನಕ್ಕೆ ಅವಕಾಶ ಕಲ್ಪಿಸಲು ತಾಲೂಕಿನ ಶ್ರೀ ಶ್ರೀಧರ ಸೇವಾ ಮಹಾಮಂಡಲ ನಿರ್ಧರಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಮಹಾಮಂಡಲ, ಪ್ರತಿ ದಿನ ಮಧ್ಯಾಹ್ನ 2.30ರಿಂದ 5ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ರ ನಂತರ ಆಶ್ರಮದ ಪರಿಸರದಲ್ಲಿ ಸಿಬ್ಬಂದಿ ಮತ್ತು ಆಶ್ರಮವಾಸಿಗಳ ವಿನಃ ಸಾರ್ವಜನಿಕರ ಉಪಸ್ಥಿತಿಯನ್ನು ನಿಷೇ ಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ :  ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್

60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದ ಒಳಗಿನವರಿಗೆ ಆಶ್ರಮದ ಪ್ರವೇಶ ನಿರ್ಬಂಧಿ ಸಲಾಗಿದೆ. ಆಶ್ರಮಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ಭೌತಿಕ ಅಂತರ ಕಾಪಾಡಬೇಕು. ಶ್ರೀಧರ ತೀರ್ಥದಲ್ಲಿ ಕೈಕಾಲು-ಮುಖ ತೊಳೆಯಲು ಮಾತ್ರ ಅವಕಾಶ ಇದೆ. ಸದ್ಯ ತೀರ್ಥಸ್ನಾನಕ್ಕೆ ಅವಕಾಶ ನೀಡಿಲ್ಲ. ಭಗವಾನರ ಸನ್ನಿಧಾನ ಮಂದಿರದ ಒಳಗೆ ಪ್ರವೇಶವಿರುವುದಿಲ್ಲ. ಮಂದಿರದ ಹೊರಗಿನಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂದಿರಕ್ಕೆ ಪ್ರದಕ್ಷಿಣೆ ಹಾಕುವುದು, ಮಂದಿರದ ಒಳಭಾಗದಲ್ಲಿ ಕುಳಿತುಕೊಳ್ಳುವುದು, ಭಜನೆ, ಸಂಗೀತ, ಜಪಾನುಷ್ಠಾನಗಳನ್ನು ತಾತ್ಕಾಲಿಕವಾಗಿ ನಿಷೇಧಿ ಸಲಾಗಿದೆ ಎಂದು ತಿಳಿಸಲಾಗಿದೆ.

ಸರ್ಕಾರದ ಆದೇಶದಂತೆ ತೀರ್ಥ-ಪ್ರಸಾದ, ಮಂತ್ರಾಕ್ಷತೆ ವಿನಿಯೋಗ, ಕಾಯಿ ಒಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವರದಪುರದಲ್ಲಿ ವಸತಿ ಮುಂತಾದ ವ್ಯವಸ್ಥೆಗಳು ಇರುವುದಿಲ್ಲ. ಆಶ್ರಮದಲ್ಲಿರುವ ಕಾರ್ಯಾಲಯದ ಸೇವೆಗಳು ಲಭ್ಯವಿರುವುದಿಲ್ಲ. ಭಕ್ತರು ತಮ್ಮ ಪಾದರಕ್ಷೆ ಮುಂತಾದ ವಸ್ತುಗಳನ್ನು ತಮ್ಮ ವಾಹನಗಳಲ್ಲೇ ಇಡತಕ್ಕದ್ದು. ಆಶ್ರಮದ ಆವರಣದಲ್ಲಿ ವಾಹನ ಪ್ರವೇಶವನ್ನು ಕಡ್ಡಾಯವಾಗಿ ನಿಷೇ ಧಿಸಲಾಗಿದೆ. ಆಶ್ರಮಕ್ಕೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್‌ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು. ಆರೋಗ್ಯ ಸೇತು ಆ್ಯಪ್‌ ಹೊಂದಿರತಕ್ಕದ್ದು. ಆಧಾರ್‌ ಕಾರ್ಡ್‌ ತರತಕ್ಕದ್ದು ಹಾಗೂ ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು ಎಂದು ಶ್ರೀಧರ ಸೇವಾ ಮಹಾಮಂಡಲ ಷರತ್ತುಗಳನ್ನು ವಿಧಿಸಿದೆ.

ಕಳೆದ ವರ್ಷದ ಮಾ. 20ರಿಂದಲೇ ಕೊರೊನಾ ಹಿನ್ನೆಲೆಯಲ್ಲಿ ವರದಪುರದಲ್ಲಿ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಲವೆಡೆ ದೇವಾಲಯಗಳು ಆರಂಭಗೊಂಡಿದ್ದರೂ ಇಲ್ಲಿ ನಿರ್ಬಂಧ ಮುಂದುವರಿಸಲಾಗಿತ್ತು. ಸ್ಥಳೀಯರು ಹಾಗೂ ಪ್ರಭಾವಿಗಳಿಗೂ ಪ್ರವೇಶಾವಕಾಶ ಕೊಡದೆ ಅತಿ ಕಠಿಣವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಿರುವುದು ವಿಶೇಷ.

ಇದನ್ನೂ ಓದಿ : ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಟಾಪ್ ನ್ಯೂಸ್

Pakistan would not hold talks with India until New Delhi reverses its decision on Kashmir: Imran Khan

ಇಲ್ಲವೇ ಇಲ್ಲಾ..ಕಾಶ್ಮೀರದ ಕುರಿತು ಭಾರತ ತನ್ನ ನಿರ್ಧಾರ ಬದಲಾಯಿಸಿಕೊಳ್ಳಲಿ… : ಖಾನ್

ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ

ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ

Bhima Koregaon case: SC dismisses bail plea of Gautam Navlakha

ಭೀಮಾ ಕೋರೆಗಾಂವ್ ಪ್ರಕರಣ : ಗೌತಮ್ ನವ್ಲಖಾ ಜಾಮೀನು ವಜಾಗೊಳಿಸಿದ ‘ಸುಪ್ರೀಂ’

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

Patanjali sells biscuits business to ruchi soya for-rs60 cr

ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವ ರುಚಿ ಸೋಯ ತೆಕ್ಕೆಗೆ..!?

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

nnnnnnnnnnn

ಮತ್ತೆ ಕಿರುತೆರೆಗೆ ಮರಳಿದ ವಿಜಯ್ ಸೇತುಪತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-21

ಸೋಂಕಿತರ ಸಂಬಂಧಿಗಳಿಗೆ ಉಚಿತ ದಾಸೋಹ

11-20

ಪೊಲೀಸರಿಂದ ಪಾಠ; ಕೆಲವರ ಪೇಚಾಟ!

hjkukjuyi

ಮೇ 13 ರಿಂದ ಶಿವಮೊಗ್ಗ 4 ದಿನ ‘ಲಾಕ್’: ಹೋಲ್‌ಸೇಲ್ ದಿನಸಿ-ಎಪಿಎಂಸಿ ಬಂದ್

10-20

ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ

10-19

ಕೊರೊನಾ ಕಡಿವಾಣಕ್ಕೆ ಇಂದಿನಿಂದ ಕಠಿಣ ಕರ್ಫ್ಯೂ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

Pakistan would not hold talks with India until New Delhi reverses its decision on Kashmir: Imran Khan

ಇಲ್ಲವೇ ಇಲ್ಲಾ..ಕಾಶ್ಮೀರದ ಕುರಿತು ಭಾರತ ತನ್ನ ನಿರ್ಧಾರ ಬದಲಾಯಿಸಿಕೊಳ್ಳಲಿ… : ಖಾನ್

ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ

ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ಕೊರತೆ ಉಂಟಾಗುತ್ತಿಲ್ಲ: ಅಶ್ವಥ್ ನಾರಾಯಣ

Vaccine purchase through global tender

ಜಾಗತಿಕ ಟೆಂಡರ್‌ ಮೂಲಕ ಲಸಿಕೆ ಖರೀದಿ

Bhima Koregaon case: SC dismisses bail plea of Gautam Navlakha

ಭೀಮಾ ಕೋರೆಗಾಂವ್ ಪ್ರಕರಣ : ಗೌತಮ್ ನವ್ಲಖಾ ಜಾಮೀನು ವಜಾಗೊಳಿಸಿದ ‘ಸುಪ್ರೀಂ’

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.