ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲು ಆಗ್ರಹ

Team Udayavani, Apr 17, 2021, 8:19 PM IST

ಗ್‍‍ದಸ

ಶಿವಮೊಗ್ಗ: ಬುಟ್ಟಿಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿ ಗೋಂದಿ  ಚಟ್ನಹಳ್ಳಿಯ ಮೀನುಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರು ಶುಕ್ರವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸುಮಾರು 40-50 ವರ್ಷಗಳಿಂದ ನಾವು ಲಷ್ಕರ್‌ ಮೊಹಲ್ಲಾದ ಮೀನು ಮಾರುಕಟ್ಟೆಯ ಹೊರಭಾಗದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದೇವೆ. ಮೀನು ಹಿಡಿದು ಮಾರಾಟ ಮಾಡುವುದು ನಮ್ಮ ಕುಲ ಕಸುಬು. ನಾವೆಲ್ಲ ಅತ್ಯಂತ ಬಡವರು, ಅಲೆಮಾರಿಗಳು. ಇದು ಬಿಟ್ಟರೆ ನಮಗೆ ಬೇರೆ ಗತಿಯಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ನಮಗೆ ಅಲ್ಲಿ ಮೀನು ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

ನಾವು ಟೆಂಡರ್‌ನಲ್ಲಿ ಭಾಗವಹಿಸಿ ಮಳಿಗೆ ಬಾಡಿಗೆ ಪಡೆದು ವ್ಯಾಪಾರ ಮಾಡಿ ಅದರಲ್ಲಿ ಲಾಭಗಳಿಸುವಷ್ಟು ಶ್ರೀಮಂತರಲ್ಲ. ಪಾಲಿಕೆಯ ಈ ಹೊಸ ನಿಯಮದಿಂದ ನಮಗೆ ತೊಂದರೆಯಾಗುತ್ತಿದೆ. ಅಲ್ಲದೆ ಟೆಂಡರ್‌ನಲ್ಲಿ ಮಳಿಗೆ ಪಡೆದ ಬಲಾಡ್ಯರು ಮೀನು ವ್ಯಾಪಾರ ಮಾಡದಂತೆ ನಮಗೆ ತಡೆ ಒಡ್ಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮೀನು ತಂದಿದ್ದ ಬುಟ್ಟಿಗಳನ್ನು ಎಸೆದು ನಾಶ ಪಡಿಸುತ್ತಿದ್ದಾರೆ. ಒಟ್ಟಾರೆ ನಮ್ಮನ್ನು ವ್ಯಾಪಾರ ಮಾಡದಂತೆ ಹೊರದೂಡಿದ್ದಾರೆ. ನಾವು ಮಹಿಳೆಯರು ಎಲ್ಲಿಗೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡರು. ನಾವು ಅನೇಕ ವರ್ಷಗಳಿಂದ ಇದೇ ಮಾರುಕಟ್ಟೆಯ ಹೊರಗೆ ಮೀನು ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ನಮಗೆ ಇಲ್ಲಿ ಅವಕಾಶ ಮಾಡಿಕೊಡಬೇಕು. ಅದು ಸಾಧ್ಯವಾಗದಿದ್ದರೆ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಖಾಲಿ ಜಾಗ ಹುಡುಕಿ ಮೀನು ವ್ಯಾಪಾರ ಮಾಡಿಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಮಹಿಳಾ ಮೀನು ಮಾರಾಟಗಾರರು ಇದ್ದರು.

ಟಾಪ್ ನ್ಯೂಸ್

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ

ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ

ಮಹಾಕ್ಕೆ ನರ್ವೇಕರ್‌ ಯುವ ಸಭಾಧ್ಯಕ್ಷ: ಸಿಎಂ ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ

ಮಹಾಕ್ಕೆ ನರ್ವೇಕರ್‌ ಯುವ ಸಭಾಧ್ಯಕ್ಷ: ಸಿಎಂ ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ

astro fah g

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಮಾದರಿಯಲ್ಲಿ ಪೌರ ಕಾರ್ಮಿಕರಿಗೆ ಜೀವನ ಭದ್ರತೆ ; ಕೆ.ದಿವಾಕರ್ ಆಗ್ರಹ

ದೆಹಲಿ ಮಾದರಿಯಲ್ಲಿ ಪೌರ ಕಾರ್ಮಿಕರಿಗೆ ಜೀವನ ಭದ್ರತೆ ; ಕೆ.ದಿವಾಕರ್ ಆಗ್ರಹ

9protection

ಸೊರಬ: ಬಾವಿಗೆ ಬಿದ್ದ ಎಮ್ಮೆಯ ರಕ್ಷಣೆ

ತಿಂಗಳಾದರೂ ಮೌಲ್ಯಮಾಪನ ಆರಂಭವಾಗಿಲ್ಲ

ತಿಂಗಳಾದರೂ ಮೌಲ್ಯಮಾಪನ ಆರಂಭವಾಗಿಲ್ಲ

1-dsfsffsf

ನಿವೃತ್ತಿ ದಿನ ಚಾಲಕನಿಗೆ ತಾವೆ ವಾಹನ ಚಲಾಯಿಸಿ ಮನೆಗೆ ಬಿಟ್ಟು ಬಂದ ಆರ್ ಟಿ ಓ

1-dsfsdfsdf

ಸಾಗರ: ಹಲ್ಕೆ ಮುಪ್ಪಾನೆ ಲಾಂಚ್ ಪುನರಾರಂಭ

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆ

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

ಎನ್‌ಡಿಎ ಅಭ್ಯರ್ಥಿಗೆ ಪಟ್ಟ? ಆ. 16ಕ್ಕೆ ಉಪರಾಷ್ಟ್ರಪತಿ ಚುನಾವಣೆ; ಬಿಜೆಪಿ ಬಳಿ 395 ಮತ

ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ

ಆರ್ಥಿಕ ಕುಸಿತ: ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.