Theerthahalli: ಅರಳಸುರುಳಿ ಕುಟುಂಬದ ಸಜೀವದಹನ ಪ್ರಕರಣ: ಮೂವರ ವಿರುದ್ಧ ಎಫ್ಐಆರ್

Team Udayavani, Oct 19, 2023, 11:45 AM IST

2-theerthahalli

ತೀರ್ಥಹಳ್ಳಿ: ತಾಲೂಕಿನ ಅರಳಸುರಳಿಯ ಬ್ರಾಹ್ಮಣವೊಂದರ ಕುಟುಂಬದ ಸಜೀವ ದಹನದ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಅ. 8 ರಂದು ರಾಘವೇಂದ್ರ ಕೇಕುಡ, ನಾಗರತ್ನ, ಶ್ರೀರಾಮ್  ಮತ್ತು ಭರತ್ ಎಂಬ ಒಂದೇ ಕುಟುಂಬದ ನಾಲ್ವರು ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನಕ್ಕೆ ಮುಂದಾಗಿದ್ದರು.

ಈ ದುರ್ಘಟನೆಯಲ್ಲಿ ರಾಘವೇಂದ್ರ ಕೇಕುಡ, ನಾಗರತ್ನ ಹಾಗೂ ಶ್ರೀರಾಮ್ ಸಾವನ್ಬಪ್ಪಿದ್ದರೆ ಎರಡು ದಿನಗಳ ಬಳಿಕ ಗಂಭೀರ ಗಾಯಗೊಂಡಿದ್ದ ಭರತ್ ಸಹ ಸಾವನ್ನಪ್ಪಿದ್ದ.

ಭರತ್ ಸಾವಿನ ನಂತರ ಪ್ರಕರಣವನ್ನು ಯುಡಿಆರ್ (ಅಸಹಜ ಸಾವಿನ ವರದಿ) ಎಂದು ದಾಖಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ರಾಘವೇಂದ್ರ ಅವರ ಪತ್ನಿಯ ಸಹೋದರನ ಹೇಳಿಕೆಯ ಮೇಲೆ ಎಫ್ಐಆರ್ ದಾಖಲಾಗಿದೆ. ಡಾ.ಸುಧೀಂದ್ರ, ಪಾ.ರಾ ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಅವರ ನಾದನಿ ವಿನೋದರವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಾಘವೇಂದ್ರ ಕೇಕುಡರಿಗೆ, ಕೃಷ್ಣಮೂರ್ತಿ, ಮಂಜುನಾಥ,  ರಾಮಕೃಷ್ಣ ಹಾಗೂ ಡಾ, ಸುಧೀಂದ್ರ ಎಂಬ ನಾಲ್ವರು ಸಹೋದರರಿದ್ದು ಇವರ ಪೈಕಿ ಮಂಜುನಾಥ ಈಗಾಗಲೇ ವಿಧಿವಶರಾಗಿದ್ದಾರೆ.

ಮಂಜುನಾಥ್ ಅವರ ಪತ್ನಿ ವಿನೋದ ಇವರಿಗೆ ಜಮೀನುಗಳಿಗೆ ಸಂಬಂಧಿಸಿದಂತೆ ಹಿಸ್ಸೆಯಾಗಿದ್ದು, ರಾಮಕೃಷ್ಣ ಕೇಕುಡ ಇವರು ಹಿಸ್ಸೆ ತೆಗೆದುಕೊಂಡು ಬೇರೆ ವಾಸವಾಗಿದ್ದರು ಎನ್ನಲಾಗಿದೆ.

ಉಳಿದ ಸಹೋದರರಾದ ಡಾ.ಸುಧೀಂದ್ರ, ಮತ್ತು ಪಾರಾ ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಪಿಎ ಮಾಡಿಕೊಂಡಿದ್ದರು.

ರಾಘವೇಂದ್ರ ಕೇಕುಡ ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು. ಇವರ ಎರಡನೇ ಸಹೋದರ ಮಂಜುನಾಥ್ ಅವರ ಪತ್ನಿ ವಿನೋದರವರಿಗೆ ಜಮೀನಿನ ಬಾಬ್ತಾಗಿ 10 ಲಕ್ಷ ರೂಪಾಯಿಗಳನ್ನು ರಾಘವೇಂದ್ರ ಕೇಕುಡರಿಂದ ಪಡೆದಿದ್ದು, ಪಡೆದ ಹಣದ ಬಗ್ಗೆ ಪತ್ರ ನೊಂದಣಿಯಾಗಿರಲಿಲ್ಲ.

ಸುಮಾರು 2 ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ ಡಾ, ಸುದೀಂದ್ರ, ಪಾರಾ ಕೃಷ್ಣ ಮೂರ್ತಿ ಹಾಗೂ ಮಂಜುನಾಥ್ ಪತ್ನಿ ವಿನೋದ ರಾಘವೇಂದ್ರರ ಕುಟುಂಬಕ್ಕೆ ಹಲವಾರು ಬೈದು ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.

ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ ಶಿವಮೊಗ್ಗದಿಂದ ಗೂಂಡಾಗಳನ್ನು ಕರೆಸಿ ಮನೆಯಿಂದ ಹೊರ ಹಾಕಿಸುವುದಾಗಿ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು.

ಈ ವಿಚಾರದಲ್ಲಿ ರಾಘವೇಂದ್ರ ಕುಟುಂಬ ಅವರುಗಳ ಬೆದರಿಕೆಗೆ ಮನನೊಂದು ಮಾನಸಿಕ ಹಿಂಸೆ ತಡೆಯಲಾಗದೇ ದೇಹ ತ್ಯಾಗವಾಗಿರುತ್ತದೆ ಎಂದು ತೇಜ್ ಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಅದ್ದರಿಂದ  ರಾಘವೇಂದ್ರ ಕುಟುಂಬ ವರ್ಗದವರ ದುರ್ಮರಣಕ್ಕೆ ಕಾರಣರಾದ ಡಾ, ಸುದೀಂದ್ರ, ಪಾ.ರಾ ಕೃಷ್ಣಮೂರ್ತಿ, ವಿನೋದ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಾ.ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ನಲ್ಲಿ ವೈದ್ಯರಾಗಿದ್ದಾರೆ. ಪಾರಾ ಕೃಷ್ಣಮೂರ್ತಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.