Navaratri 2023: ಮೈಸೂರು ದಸರಾ…ಸೌಂದರ್ಯ ಸ್ವರ್ಗವೇ ಧರೆಗೆ ಅಪ್ಪಿದಂತೆ…


Team Udayavani, Oct 19, 2023, 11:51 AM IST

dasara

ನವರಾತ್ರಿ ಬಂತೆದರೆ ನವದೇವಿಯರ ಆರಾಧನೆ, ದೀಪಾದಾರತಿ, ಪುಷ್ಪಾಲಂಕಾರ ನವ ಬಣ್ಣಗಳು ಕಣ್ಮನ ತುಂಬಿ ತಣಿಸುವುದು ಸಂಭ್ರಮ. ನವರಾತ್ರಿ ಹಬ್ಬ ಎಂದರೆ ವಿಶೇಷ  ಸಡಗರ. ನವರಾತ್ರಿ ಹಬ್ಬವು ನವ ದೇವಿಯರನ್ನು ಆರಾಧಿಸುವ ಹಿಂದೂಗಳ ಪವಿತ್ರ ಹಬ್ಬ.  ಕರ್ನಾಟಕದಲ್ಲಿ ದಸರಾ ಎಂದು ಪ್ರಸಿದ್ದಿ ಪಡೆದಿದೆ. ಆಯುಧ ಪೂಜೆ ಹಾಗೂ ದುರ್ಗಾ ಪೂಜಾ ಎಂದು ಕೂಡ ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ನವ ರಾತ್ರಿಗಳು, ನವ ದೇವಿಗಳನ್ನು ನವ ರೂಪಗಳ ಹೆಸರಲ್ಲಿ ಆರಾಧಿಸಿವುದು.

ಧಿಶಕ್ತಿ, ಮಹಾಮಾಯೆ, ದುರ್ಗಾಪರಮೇಶ್ವರಿ ಪರಬ್ರಹ್ಮ ಸ್ವರೂಪಿಣಿ.  ನಭೋಮಂಡಲದಲ್ಲಿ ಲೆಕ್ಕವಿರದಷ್ಟು ಮಾಯಾಬ್ರಹ್ಮಾಂಡಗಳನ್ನು ಸೃಜಿಸಿ ಮಾಯಾಲೀಲೆಯ ಸೃಷ್ಟಿಸಿದ ದುರ್ಗಾ ದುರ್ಗತಿ ನಾಶಿನಿ ಎಂದೇ ಪ್ರಸಿದ್ಧಿಯಾದ ದುರ್ಗಾ ದೇವಿಯ ಸ್ಮರಣೆಯೇ ನವರಾತ್ರಿ. ನವರಾತ್ರಿಯಲ್ಲಿ  ಮೈಸೂರಿನಲ್ಲಿ ನೆಲೆಸಿರುವ  ಬೆಟ್ಟದ ಅರಸಿ ಚಾಮುಂಡೇಶ್ವರಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು.

ನವರಾತ್ರಿಗಳು ನಡೆದ ಯುದ್ಧ ಹತ್ತನೇ ದಿನ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ವಿಜಯ ದಶಮಿಯ ದಿನ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ವಧೆ ಮಾಡಿದ್ದು, ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.

ಮೈಸೂರಿನ ದಸರಾ

ತಾಯಿ ಚಾಮುಂಡೇಶ್ವರಿ ಅಮ್ಮನವರು ವಾಸಿಸುವ ಮೈಸೂರಿನಲ್ಲಿ ನವರಾತ್ರಿ ಹಬ್ಬವು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೈಸೂರು ಅರಮನೆ ಹಾಗೂ ರಾಜಬೀದಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಹಾಲ್ಗೆನ್ನೆ ಬೆಳದಿಂಗಳ ಚಂದಿರನಂತೆ ದೀಪಗಳಿಂದ ಪ್ರಜ್ವಲಿಸುವ ಮೈಸೂರ ನೋಡಲು ಕಣ್ಮನ ಸಾಲುತ್ತಿಲ್ಲ ಅನ್ನುವಷ್ಟು ಸೊಗಸು.

ಅದೆಷ್ಟೇ ನೋಡಿದರು ಮತ್ತೆ ನೋಡ್ಬೇಕು ಅನ್ನುವ ಸೌಂದರ್ಯ ಸ್ವರ್ಗವೇ ಧರೆ ಅಪ್ಪಿದಂತೆ ಮೈಸೂರು. ನವರಾತ್ರಿಯಲ್ಲಿ ವಿವಿಧ ಕಾರ್ಯಕ್ರಮಗಳು  ವಸ್ತು ಪ್ರದರ್ಶನ, ಪುಷ್ಪ ಪ್ರದರ್ಶನ,  ಕುಸ್ತಿ ಪಂದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ದಸರಾ, ನೃತ್ಯ ಕವಿಗೋಷ್ಠಿ, ಟಾರ್ಚ್ ಲೈಟ್  ಶೋ ಇನ್ನಿತರ ಕಾರ್ಯಕ್ರಮ ನಡೆಯುತ್ತದೆ.

ವಿಜಯದಶಮಿಯ ದಿನದಂದು ಆಚರಿಸಲ್ಪಡುವ ದಸರಾ. ಆನೆಗಳ ದಂಡು, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯ ಮೆರವಣಿಗೆ ವೈಭೋಗದಲ್ಲಿ  ಶ್ರೀ ತಾಯಿ ಚಾಮುಂಡೇಶ್ವರಿ ಅಮ್ಮನವರು, ಮೈಸೂರ ಸುತ್ತೆಲ್ಲ ಪ್ರದಕ್ಷಿಣೆ ಜೊತೆಗೆ ಡೋಲು ಕುಣಿತ ವಿವಿಧ ಮೆರೆತಗಳು ಆನೆಗಳು, ಕುದುರೆಗಳು, ಒಂಟೆಗಳು, ಗೊಂಬೆಗಳು ವಿವಿಧ ರಾಜ್ಯಗಳಿಂದ ಬರುವ ವಿಧವಿಧ ವಿನ್ಯಾಸಗಳು ಮೈಸೂರು ದಸರಾಕ್ಕೆ ಮೆರಗು.

ಜಂಬೂ ಸವಾರಿ ನೋಡಲು ನೂಕುನುಗ್ಗಲು  ಮತ್ತು ಆ ಜನರ ಗುಂಪಿನಲ್ಲಿ ಹರ ಸಾಹಸ ಮಾಡಿ ವೀಕ್ಷಿಸುವುದು ಜನರಿಗೆ ಮುದ ನೀಡುತ್ತದೆ.  ಕೆಲವರು ತಳ್ಳುವ ಗಾಡಿಯ ಮೇಲೆ ನಿಂತು ದಸರಾ ವೀಕ್ಷಣೆ, ಮಹಡಿ ಮನೆಗಳ ಮೇಲೆ ನಿಂತು ನೋಡುವುದು ಅಲ್ಲಿ ಜಾಗ ಮಾಡುಕೊಂಡು ಒಟ್ಟಿನಲ್ಲಿ ಮೈಸೂರಿನಲ್ಲಿ ಜನಸಾಗರ ನೋಡುವುದೇ  ಕಣ್ಣಿಗೆ ಹಬ್ಬ.

-ವಾಣಿ ಮೈಸೂರು 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.