ಕದುರಯ್ಯಮಕ್ಕಳು, ಪೋಷಕರ ಅಚ್ಚುಮೆಚ್ಚಿನ ಶಿಕ್ಷಕ

4 ವಿದ್ಯಾರ್ಥಿಗಳಿಗೆ ಆರೋಗ್ಯ ಸಂಜೀವಿನಿ ಯೋಜನೆಯಡಿ ಹೃದಯ ಶಸ್ತ್ರಚಿಕಿತ್ಸೆ

Team Udayavani, Sep 5, 2019, 4:20 PM IST

ಶಿಸ್ತಿನಿಂದ ಬಿಸಿಯೂಟಕ್ಕೆ ಕುಳಿತಿರುವ ವಿದ್ಯಾರ್ಥಿಗಳು.

ಎಸ್‌.ಕೆ.ಕುಮಾರ್‌
ಶಿರಾ:
ಶಿಕ್ಷಕ ಮನಸ್ಸು ಮಾಡಿದರೆ ಸರ್ಕಾರಿ ಶಾಲೆ ಉಳಿಯಬಲ್ಲದು. ಮಕ್ಕಳೂ ಉತ್ತಮ ಶಿಕ್ಷಣ ಪಡೆದು ಉತ್ತಮ ಸ್ಥಾನ ಅಲಂಕರಿಸಬಹುದು ಎಂಬುದಕ್ಕೆ ಕಳ್ಳಂಬೆಳ್ಳ ಹೋಬಳಿಯ ಚಿಕ್ಕದಾಸರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೆ. ಕದುರಯ್ಯ ಉದಾಹರಣೆ.

ಪ್ರತಿಭಾವಂತ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡಿ ವೈದ್ಯನಾಗಿ ರೂಪಿಸಿರುವುದು, 4 ವಿದ್ಯಾರ್ಥಿಗಳಿಗೆ ಆರೋಗ್ಯ ಸಂಜೀವಿನಿ ಯೋಜನೆಯಡಿ ನಾರಾ ಯಣ ಹೃದಯಾಲಯದಲ್ಲಿ ಹೃದ್ರೋಗ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಕದುರಯ್ಯ ಮಕ್ಕಳು ಹಾಗೂ ಪೋಷಕರ ಅಚ್ಚು ಮೆಚ್ಚಿನ ಶಿಕ್ಷಕ.

ಪರಿಸರ ಮಿತ್ರ: 13 ವರ್ಷಗಳ ಹಿಂದೆ ಕದುರಯ್ಯ ಶಾಲೆಗೆ ಬಂದಾಗ ಕೇವಲ 2 ಕೊಠಡಿ ಇದ್ದವು. ಸಮುದಾಯದ ಸಹಕಾರದೊಂದಿಗೆ ಲಲಿತ ರಾಮ ಕೃಷ್ಣಪ್ಪ ಎಂಬುವವರ ಮನವೊಲಿಸಿ 1 ಎಕರೆ ಭೂಮಿ ದಾನ ಪಡೆದು ಶಾಲೆ ಅಭಿವೃದ್ಧಿ ಗೊಳಿಸಿದರು. ಹಚ್ಚಹಸಿರಿನ ವಾತಾ ವರಣದಿಂದ ಕಂಗೊಳಿಸುತ್ತಿರುವ ವಾತಾವರಣ ಹೊಂದಿದೆ. ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 70 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಬೆಳಕು: 5 ವರ್ಷದ ಹಿಂದೆ 6, 7ನೇ ತರಗತಿಯಲ್ಲಿದ್ದ ಲಕ್ಷಿ ್ಮೕ, ಚಂದನ, ರಮೇಶ, ವಿಜಯಲಕ್ಷ್ಮೀ ಹೃದಯದ ಸಮಸ್ಯೆಯಿಂದ ಬಳಲು ತ್ತಿದ್ದರು. ಇದನ್ನು ತಿಳಿದ ಕದುರಯ್ಯ ಆರೋಗ್ಯ ಸಂಜೀವಿನಿ ಯೋಜನೆಯಡಿ ನಾರಾಯಣ ಹೃದಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ದ್ದಾರೆ. ಐವರು ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚ ಭರಿಸಿದ್ದು, ರಾಘವೇಂದ್ರ, ವೈದ್ಯನಾದರೆ, ವರಲಕ್ಷ್ಮೀ, ಶ್ರೀಲಕ್ಷ್ಮೀ ಸಾಫ್ಟ್ವೇರ್‌ ಉದ್ಯೋಗಿಯಾಗಿದ್ದಾರೆ. ರಮೇಶ್‌, ಲಕ್ಷ್ಮೀ ಪದವಿ ವ್ಯಾಸಂಗ ಮಾಡುತ್ತಿದ್ದಾರೆ 2018-19ನೇ ಸಾಲಿನ ಉತ್ತಮ ನಲಿ ಕಲಿ ಶಿಕ್ಷಕ ಪ್ರಶಸ್ತಿ ಈ ಶಾಲೆಯ ಶಿಕ್ಷಕ ಮಂಜುನಾಥ್‌ ಪಾಲಾಗಿದೆ. ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳಿಂದ 4 ಕಂಪ್ಯೂಟರ್‌ ಪಡೆದು ಪ್ರಾಥಮಿಕ ಹಂತದಲ್ಲಿಯೇ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರತಿ ಶನಿವಾರ 10 ರಿಂದ 12 ಗಂಟೆವರೆಗೆ ರಾಮಾಯಣ, ಭಗವದ್ಗೀತೆ, ಪಂಚತಂತ್ರ ಪುಸಕ್ತ ಓದಿಸ ಲಾಗುತ್ತದೆ. ಇದರಲ್ಲಿ ಶಿಕ್ಷಕರಾದ ಭೀಮಾಶಂಕರ್‌, ತಿಮ್ಮರಾಜು ಶ್ರಮ ಹೆಚ್ಚಾಗಿದೆ. ಮಕ್ಕಳಿಗೆ ಕುಡಿಯಲು ಶುದ್ಧ ನೀರು ಒದಗಿಸಲಾಗುತ್ತಿದೆ. ಬಿಸಿಯೂಟ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ