ಮಳೆಗಾಲದಲ್ಲಿ ಎರಡು ಗ್ರಾಮಗಳ ಸಂಪರ್ಕ ಕಡಿತ ಭೀತಿ

ಸಾರಕರೆ ಕಿಂಡಿ ಅಣೆಕಟ್ಟು ಪಾದಚಾರಿ ನಡಿಗೆ ಸ್ಲ್ಯಾಬ್ ಕುಸಿತ

Team Udayavani, May 26, 2019, 9:57 AM IST

26-May-1

ಸಾರಕರೆ ಕಿಂಡಿ ಅಣೆಕಟ್ಟು ಪಾದಚಾರಿ ನಡಿಗೆ ಸ್ಲ್ಯಾಬ್ ಕುಸಿತಗೊಂಡಿದೆ

ಸುಳ್ಯ : ಕೊಡಿಯಾಲ ಹಾಗೂ ಪೆರುವಾಜೆ ಗ್ರಾಮ ಬೆಸೆಯುವ ಸಾರಕರೆ ಬಳಿ ಕಿಂಡಿ ಅಣೆಕಟ್ಟು ಪಾದಚಾರಿ ನಡಿಗೆ ಸ್ಲಾ ್ಯಬ್‌ ಕುಸಿದಿದೆ. ಹೀಗಾಗಿ ಈ ಮಳೆಗಾಲ ದಲ್ಲಿ ಎರಡು ಗ್ರಾಮಗಳ ನಡುವೆ ಸಂಚಾರ- ಸಂಪರ್ಕ ಕಡಿತದ ಭೀತಿ ಉಂಟಾಗಿದೆ.

ಇಲ್ಲಿನ 40ಕ್ಕೂ ಅಧಿಕ ಮನೆಗಳು, ದಲಿತ ಕುಟುಂಬಗಳಿಗೆ ಬೇಸಗೆ ಕಾಲದಲ್ಲಿ ಹೊಳೆಯೇ ರಸ್ತೆಯಾದರೆ, ಮಳೆಗಾಲದಲ್ಲಿ ಸುರಕ್ಷಾ ಬೇಲಿ ಇಲ್ಲದ ಈ ಬಿರುಕು ಬಿಟ್ಟ ಕಿಂಡಿಕಟ್ಟದ ಮೇಲ್ಭಾಗದಲ್ಲಿ ನಡೆದುಕೊಂಡು ಹೊಳೆ ದಾಟುವುದು ಪ್ರತಿ ವರ್ಷದ ಗೋಳು. ಈ ಬಾರಿಯಂತೂ ಸ್ಲಾ ್ಯಬ್‌ ದಾಟಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ.

ಕಿಂಡಿ ಅಣೆಕಟ್ಟೇ ದಾರಿ
ಇಲ್ಲಿನ ಗೌರಿ ಹೊಳೆಗೆ 30 ವರ್ಷದ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಅದರ ಮೇಲಿನ ಕಿರಿದಾದ ಸ್ಲ್ಯಾಬ್‌ನಲ್ಲಿ ಎರಡೂರಿನ ಜನರು ಸಂಚರಿಸುತ್ತಾರೆ. ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ವಾಹನ ದಾಟಿಸುತ್ತಾರೆ. ಮಳೆಗಾಲದಲ್ಲಿ ಬೇರೆ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸುತ್ತಾಡ ಬೇಕು. ಅನಗುರಿ, ಕೆಡೆಂಜಿ ಮೊಗ್ರು, ಉಡುಕಿರಿ ಮೊದಲಾದ ಪ್ರದೇಶದವರು ಬೆಳ್ಳಾರೆ, ಪೆರುವಾಜೆ, ಕೊಡಿ ಯಾಲ ಭಾಗಕ್ಕೆ ತೆರಳಲು ಸಮೀಪದ ದಾರಿ ಇದಾಗಿದೆ. ಆದರೆ ಸುಸಜ್ಜಿತ ಸೇತುವೆ ಇಲ್ಲದೆ ಇಲ್ಲಿ ಸಂಚಾರ ಸಾಧ್ಯವಾಗುತ್ತಿಲ್ಲ.

ಕುಸಿದ ಸ್ಲ್ಯಾಬ್
ಸುರಕ್ಷಾ ಬೇಲಿ ಇಲ್ಲದ ಕಿಂಡಿ ಅಣೆಕಟ್ಟಿನ ಸ್ಲ್ಯಾಬ್‌ ನಲ್ಲಿ ನಡಿಗೆ ಅಪಾಯಕಾರಿ ಎನಿಸಿದೆ. ಕಳೆದ ಬಾರಿ ಮಧ್ಯಭಾಗದಲ್ಲಿ ಸ್ಲ್ಯಾಬ್ ಬಿರುಕು ಬಿಟ್ಟಿತ್ತು. ದುರಸ್ತಿಗೆ ಕ್ರಮ ಕೈಗೊಳ್ಳದ ಕಾರಣ ಈ ಬಾರಿ ಪೂರ್ತಿ ಕುಸಿದಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಯಲ್ಲಿನ ಈ ಕಿಂಡಿ ಅಣೆಕಟ್ಟಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ದಿನ ನಿತ್ಯ ಸಂಚರಿಸುತ್ತಿದ್ದು, ಅಪಾಯ ಎದುರಾಗಿದೆ. ಹೊಸ ಸೇತುವೆ ನಿರ್ಮಾಣದ ತನಕ ಕನಿಷ್ಠ ಪಕ್ಷ ಸ್ಲ್ಯಾಬ್ ದುರಸ್ತಿ ಹಾಗೂ ರಕ್ಷಣಾ ಬೇಲಿ ಅಳವಡಿಸಲೆಬೇಕಿದೆ.

ಮನವಿಗೆ ಸಿಗದ ಸ್ಪಂದನೆ
ಇಲ್ಲಿ ಸೇತುವೆ ನಿರ್ಮಾಣದಿಂದ ಉಡುಕಿರಿ ದಲಿತ ಕಾಲನಿಗೆ ಸಂಪರ್ಕ ಸಾಧ್ಯವಾಗುತ್ತದೆ. ಮೂರು ನಾಲ್ಕು ಮಂದಿ ಅಂಗವಿಕಲತೆ ಉಳ್ಳವರು ಇಲ್ಲಿದ್ದು, ಅವರ ಸಂಚಾರಕ್ಕೆ ಅನುಕೂಲವಾಗಲಿದೆ. ರಸ್ತೆ ಮತ್ತು ಸೇತುವೆಯಿಂದ ಕಲ್ಲಪಣೆ, ಕಾಣಿಯೂರು ಭಾಗಕ್ಕೆ ಸಂಪರ್ಕ ಸಾಧ್ಯವಿದೆ. ಈ ಬಗ್ಗೆ ಸ್ಥಳೀಯಾಡಳಿತ, ಶಾಸಕರಿಗೆ, ಪ್ರಧಾನಮಂತ್ರಿಗೆ ಪತ್ರಮುಖೇನ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಬೇಡಿಕೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು.

ದುರಸ್ತಿಗೂ ಕ್ರಮ ಕೈಗೊಂಡಿಲ್ಲ
ಎರಡು ಗ್ರಾಮಗಳ ಜನರು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಚರಿಸಲು ಅತಿ ಸನಿಹದ ರಸ್ತೆ ಹಾಗೂ ಉಡುಕಿರಿ ಕಾಲನಿ, ಪೆರುವಾಜೆ ಪ್ರಥಮ ದರ್ಜೆ ಕಾಲೇಜಿಗೆ ಸಂಪರ್ಕ ರಸ್ತೆ ಇದಾಗಿದೆ. ದಾಖಲೆಗಳಲ್ಲಿಯೂ ಪ್ರಥಮ ದರ್ಜೆ ಕಾಲೇಜು ಸಂಪರ್ಕ ಕಾಲುದಾರಿ ಎಂದು ನಮೂದಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ಮನವಿ ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ. ದುರಸ್ತಿಗೂ ಕ್ರಮ ಕೈಗೊಂಡಿಲ್ಲ.
– ರಾಜೇಶ್‌ ಸಾರಕರೆ
ಸ್ಥಳೀಯ ನಿವಾಸಿ

ದುರಸ್ತಿಗೆ ಕ್ರಮಸಾರಕರೆ ಕಿಂಡಿ ಅಣೆಕಟ್ಟು ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ದುರಸ್ತಿ, ನಿರ್ವಹಣೆ ಆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿ ದ್ದರೂ, ಜಿ.ಪಂ. ಮೂಲಕ ಅನುದಾನ ಕ್ರೋಢೀಕರಿಸಿ ಸುರಕ್ಷಾ ಬೇಲಿ ಅಳವಡಿಕೆ ಮತ್ತುಸ್ಲಾ ್ಯಬ್‌ ದುರಸ್ತಿಗೆ ಆದ್ಯತೆ ನೀಡಲಾಗುವುದು. ಇಲ್ಲಿ ಹೊಸ ಸೇತುವೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿಲ್ಲ.
ಹನುಮಂತ ರಾಯಪ್ಪ ಎಇಇ,
ಪಂ.ರಾಜ್‌ ಎಂಜಿನಿಯರ್‌ ಇಲಾಖೆ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.