ಹಿರಿಯರಿಗೆ ಅಗೌರವ ಅಪಾರಾಧ

Team Udayavani, Nov 1, 2019, 6:33 PM IST

ಸುರಪುರ: ಹಿರಿಯ ನಾಗರಿಕರನ್ನು ಅಗೌರವಿಸುವುದು ಮತ್ತು ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಇವೆರಡು ಶಿಕ್ಷಾರ್ಹ ಅಪರಾಧವಾಗಿದೆ. ಅಂತವರಿಗಾಗಿ ಹಿರಿಯ ನಾಗರಿಕರ ಸಂರಕ್ಷಣಾ ಹಾಗೂ ಭ್ರೂಣ ಹತ್ಯೆ ತಡೆ ಕಾಯ್ದೆ ಅಡಿ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಿವಿಲ್‌ ನ್ಯಾಯಾಧೀಶ ಚಿದಾನಂದ ಬಡಿಗೇರ
ಹೇಳಿದರು.

ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂದೆ, ತಾಯಿ. ಗುರು ಹಿರಿಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದೇ ತೆರನಾಗಿ ಗಂಡು ಬೇಕು ಹೆಣ್ಣು ಬೇಡ ಎಂಬ ಮನೋಭಾವ ಒಳ್ಳೆಯದಲ್ಲ. ಹೆಣ್ಣಿರಲಿ ಗಂಡಿರಲಿ ಮಕ್ಕಳಲ್ಲಿ ಲಿಂಗ ಬೇಧ ಮಾಡದೆ ಸಮಾನತೆಯಂದ ಕಾಣುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಇದನ್ನು ಉಲ್ಲಂಘಿ ಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್‌ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್‌ ಮಾತನಾಡಿ, ಹೆಣ್ಣು ಹುಣ್ಣಲ್ಲ ಜಗದ ಕಣ್ಣು. ಈ ಮನೋಭಾವ ಪ್ರತಿಯೊಬ್ಬ ಪಾಲಕರಲ್ಲಿ ಬೇರೂರಬೇಕು. ಹೆಣ್ಣಿರಲಿ ಗಂಡಿರಲಿ ಬಂಜೆ ಎಂಬ ಶಬ್ದ ಹೊರಲಾರೆ ಎಂಬ ಜನಪದ ಹಾಡಿನ ಗರತಿಯರು ಹೇಳುವಂತೆ ಮಕ್ಳಳ ಸಂಪತ್ತು ಹೊಂದಿದ್ದರೆ ಸಾಕು ಅದುವೇ ಕಟುಂಬದ ಶೋಭೆ. ಸಮಾಜದಲ್ಲಿ ಮಕ್ಕಳಿಂದ ತಂದೆ ತಾಯಿಗೆ ಗೌರವಿದೆ ಹೊರತು ತಂದೆ, ತಾಯಿಯಿಂದ ಅಲ್ಲ. ಕಾರಣ ಮಕ್ಕಳಲ್ಲಿ ಬೇಧಭಾವ ಬೇಡ. ಗಂಡು ಮಗವಿಗೆ ನೀಡುವಷ್ಟು ಸಮಾನ ಅವಕಾಶಗಳನ್ನು ಹೆಣ್ಣು ಮಗುವಿಗೂ ನೀಡುವ ಮೂಲಕ ಅವಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ವೃದ್ದಾಪ್ಯದಲ್ಲಿರುವ ತಂದೆ, ತಾಯಿಯನ್ನು ವೃದ್ದಾಶ್ರಮಗಳಿಗೆ ತಳುತ್ತಿರುವ ಧಾರುಣ ಘಟನೆಗಳು ಇತ್ತೀಚೆಗೆ ಸಮಾಜದಲ್ಲಿ ನಡೆಯುತ್ತಿವೆ. ಇಂತಹ ಕೃತ್ಯಕ್ಕೆ ಒಳಗಾಗುವ ಸಂತ್ರಸ್ತರು ಹಿರಿಯ ನಾಗರಿಕ ಹಿತರಕ್ಷಣಾ ಕಾಯ್ದೆ ಅಡಿ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿ ಆಸ್ತಿ ಮರಳಿ ಪಡೆಯಬಹುದು ಅಥವಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದು. ಹಿರಿಯ ನಾಗರಿಕರು ಕಾನೂನು ನೆರವು ಪಡೆದುಕೊಳ್ಳಬೇಕು ಎಂದು ಹೇಳಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಬಿ.ಎನ್‌. ಅಮರನಾಥ, ಅಧ್ಯಕ್ಷತೆ ವಹಿಸಿದ್ದ
ವಕೀಲರ ಸಂಘದ ಅಧ್ಯಕ್ಷ ಮಹ್ಮದ್‌ ಹುಸೇನ್‌, ಸಹಾಯಕ ಸಿಡಿಪಿಒ ಮೀನಾಕ್ಷಿ
ಪಾಟೀಲ ಮಾತನಾಡಿದರು. ಹೆಣ್ಣು ಭ್ರೂಣ ಪತ್ತೆ, ಹತ್ಯೆ ಕುರಿತು ನ್ಯಾಯವಾದಿ ಸವಿತಾ ಮಾಲಿಪಾಟೀಲ ಹಾಗೂ ಹಿರಿಯ ನಾಗರಿಕ ಸಂರಕ್ಷಣಾ ಕಾಯ್ದೆ ಕುರಿತು ವಿ.ಎಸ್‌. ಬೈಚಬಾಳ ಉಪನ್ಯಾಸ ನೀಡಿದರು.

ಹಿರಿಯ ವಕೀಲ ಬಸಲಿಂಗಪ್ಪ ಪಾಟೀಲ, ಎಸ್‌. ಸಿದ್ರಾಮಪ್ಪ, ನಂದನಗೌಡ ಪಾಟೀಲ ಇದ್ದರು. ವಕೀಲರ ಸಂಘದ ಕಾರ್ಯದರ್ಶಿ ಮಲ್ಲು ಭೋವಿ ನಿರೂಪಿಸಿ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು,...

  • ಬಸವರಾಜ ಹೊಂಗಲ್‌ ಧಾರವಾಡ: ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ...

  • ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಂತ್ವನ ಹೇಳುವುದರೊಂದಿಗೆ ಅವರಿಗೆ ಅಗತ್ಯ ಕಾನೂನಡಿ ನೆರವು, ಚಿಕಿತ್ಸೆ ಹಾಗೂ ಪರಿಹಾರ ಕಲ್ಪಿಸಲು...

  • ಹರಪನಹಳ್ಳಿ: ಬ್ರಿಟಿಷರ ವಿರುದ್ಧ ಪ್ರಥಮವಾಗಿ ಹೋರಾಡಿ ಗೆಲವು ಸಾಧಿಸಿದ್ದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮ ಅವರನ್ನು ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತಗೊಳಿಸದೆ...

  • ಅನೀಲ ಬಸೂದೆ ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿರುವ ಮುಂಡರಗಿ ಗ್ರಾಮದ ಎರಡು ಶಾಲೆ ಮಕ್ಕಳಿಗೆ ಬಯಲಲ್ಲೇ ಪಾಠ...

ಹೊಸ ಸೇರ್ಪಡೆ